ಸೋಷಿಯಲ್ ಮೀಡಿಯಾದಲ್ಲಿ ನಿನ್ನೆಯಿಂದ ಟ್ರೆಂಡಿಂಗ್ ನಲ್ಲಿರುವ ಸುದ್ದಿ ಹಾಲಿವುಡ್ (Hollywood) ‘ಫಾಸ್ಟ್ & ಫ್ಯೂರಿಯಸ್ 10’ ಸಿನಿಮಾದಲ್ಲಿ ಪಬ್ಲಿಕ್ ಟಿವಿ (Public TV) ಮುಖ್ಯಸ್ಥ ಹೆಚ್.ಆರ್. ರಂಗನಾಥ್ ನಟಿಸಿದ್ದಾರೆ ಎನ್ನುವುದು. ಹಾಲಿವುಡ್ ಸಿನಿಮಾಗೂ ಅವರಿಗೂ ಸಂಬಂಧ ಏನು ಎನ್ನುವ ಹುಡುಕಾಟವನ್ನೂ ಹಲವರು ಮಾಡಿದ್ದಾರೆ. ಫೇಸ್ ಬುಕ್ ತುಂಬಾ ನಿನ್ನೆಯಿಂದ ಇದೇ ಸುದ್ದಿ ಓಡುತ್ತಿದೆ. ಅಚ್ಚರಿಯ ಸಮಾಚಾರ ಎಂದರೆ, ಈ ಹಿಂದೆ ಹಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದ ಸಾಬು ದಸ್ತಗಿರಿ ಮೈಸೂರಿನವರು. ಹೆಚ್.ಆರ್. ರಂಗನಾಥ್ ಅವರು ಕೂಡ ಮೈಸೂರಿನವರೆ. ಮೈಸೂರಿಗೂ ಹಾಲಿವುಡ್ ಗೂ ಬೆಸೆದ ಬಾಂಧವ್ಯ ಹೇಗೆ? ಹೀಗೆ ಹತ್ತಾರು ಪ್ರಶ್ನೆಗಳು ಸಿನಿ ಪ್ರೇಮಿಗಳ ಮೆದುಳಿನಲ್ಲಿ ಗಿರಿಗಿಟ್ಲೆ ಆಡುತ್ತಿವೆ.
Advertisement
ಹಾಲಿವುಡ್ ಟೀಮ್ ಬೆಂಗಳೂರಿಗೆ ಬಂದಿತ್ತಾ? ಅಥವಾ ಪಬ್ಲಿಕ್ ಟಿವಿಯಲ್ಲಿ ಬಳಕೆಯಾದ ವಿಡಿಯೋ ತುಂಡನ್ನೇ ಸಿನಿಮಾದಲ್ಲಿ ಸೇರಿಸಿದರಾ? ‘ಫಾಸ್ಟ್ & ಫ್ಯೂರಿಯಸ್ 10’ ತಂಡ ಹೆಚ್.ಆರ್.ರಂಗನಾಥ ಅವರನ್ನು ಭೇಟಿ ಮಾಡಿತ್ತಾ? ಈ ದೃಶ್ಯ ಶೂಟಿಂಗ್ ಆಗಿದ್ದು ಎಲ್ಲಿ? ಇಂಥದ್ದೊಂದು ಅವಕಾಶ ಅವರನ್ನು ಹುಡುಕಿಕೊಂಡು ಬಂದಿದ್ದು ಹೇಗೆ? ಹಾಲಿವುಡ್ ನಲ್ಲಿ ಹೆಚ್.ಆರ್ ರಂಗನಾಥ್ (HR Ranganath) ಅವರ ಪರಿಚಯಸ್ಥರು ಇದ್ದಾರಾ? ಹೀಗೆ ನಾನಾ ಪ್ರಶ್ನೆಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
Advertisement
Advertisement
ಹೌದು, ‘ಫಾಸ್ಟ್ & ಫ್ಯೂರಿಯಸ್ 10’ (Fast & Furious 10) ಸಿನಿಮಾ ತಂಡ ಬೆಂಗಳೂರಿಗೇ ಬಂದು, ಪಬ್ಲಿಕ್ ಟಿವಿ ಆಫೀಸಿನಲ್ಲೇ ಚಿತ್ರೀಕರಣ ಮಾಡಿದೆ. ಮೂರುವರೆ ತಿಂಗಳ ಹಿಂದೆ ನಡೆದ ಚಿತ್ರೀಕರಣದಲ್ಲಿ ಹೆಚ್.ಆರ್. ರಂಗನಾಥ್ ಅವರು ಭಾಗಿಯಾಗಿ, ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿಕೊಟ್ಟಿದ್ದಾರೆ. ಸಿನಿಮಾದ ಕ್ಯಾಮೆರಾಮನ್ ಹಾಗೂ ಹಲವು ತಾಂತ್ರಿಕ ತಂಡ ಬೆಂಗಳೂರಿಗೆ ಆಗಮಿಸಿ ಶೂಟಿಂಗ್ ಮಾಡಿದೆ. ಇದನ್ನೂ ಓದಿ:‘ಆದಿಪುರುಷ್’ ಪೋಸ್ಟರ್‌ನಲ್ಲಿ ಮತ್ತೆ ಎಡವಟ್ಟು- ಚಿತ್ರತಂಡ ವಿರುದ್ಧ ಫ್ಯಾನ್ಸ್ ಗರಂ
Advertisement
ಈ ಕುರಿತು ಹೆಚ್.ಆರ್. ರಂಗನಾಥ್ ಅವರು ಹೇಳುವುದು ಹೀಗೆ, ‘ಮೂರುವರೆ ತಿಂಗಳ ಹಿಂದೆ ಆ ಚಿತ್ರತಂಡಕ್ಕೆ ಪರಿಚಯವಿದ್ದ ನನ್ನ ಗೆಳೆಯರೊಬ್ಬರ ಮೂಲಕ ಸಿನಿಮಾದಲ್ಲಿ ನಟಿಸುವಂತೆ ಆಹ್ವಾನ ಬಂತು. ನನ್ನ ವೃತ್ತಿಗೆ ಸಂಬಂಧಿಸಿದ ಪಾತ್ರ ಅದಾಗಿದ್ದರಿಂದ ಒಪ್ಪಿಕೊಂಡೆ. ನಮ್ಮದೇ ಆಫೀಸಿನಲ್ಲಿ ಚಿತ್ರೀಕರಣ ನಡೆಯಿತು’ ಎಂದರು.
ಹೆಚ್.ಆರ್ ರಂಗನಾಥ್ ಅವರು ಹಾಲಿವುಡ್ ಗೆ ಎಂಟ್ರಿ ಕೊಟ್ಟ ಮೈಸೂರಿನ ಎರಡನೇ ಸೆಲೆಬ್ರಿಟಿ. ಇದಕ್ಕೂ ಮೊದಲು ಬಾಬು ದಸ್ತಗೀರ್ ಎನ್ನುವವರು ಎಂಟು ದಶಕಗಳ ಹಿಂದೆ ಹಾಲಿವುಡ್ ಸಿನಿಮಾದಲ್ಲಿ ನಟಿಸಿದ್ದರು. ದಸ್ತಗೀರ್ ಎಂಟ್ರಿ ಕೂಡ ಅಷ್ಟೇ ಕುತೂಹಲ ಹಾಗೂ ರೋಮಾಂಚನ ಮೂಡಿಸುತ್ತದೆ.
ಅದು ಬರೋಬ್ಬರಿ 84 ವರ್ಷಗಳ ಹಿಂದಿನ ಸ್ಟೋರಿ. ಆನೆಗಳ ಬಗ್ಗೆ ಚಿತ್ರ ನಿರ್ಮಿಸುತ್ತಿದ್ದ ಖ್ಯಾತ ಸಾಕ್ಷ್ಯಚಿತ್ರ ನಿರ್ಮಾಪಕ ರಾಬರ್ಟ್ ಫ್ಲಾಹರ್ಟಿ ಮೈಸೂರಿಗೆ ಬಂದಿರುತ್ತಾರೆ. ಆಗ ಇವರ ಕಣ್ಣಿಗೆ ಬಿದ್ದ ಹುಡುಗನೇ ಸಾಬು ದಸ್ತಗೀರ್. ಕಿಪ್ಲಿಂಗ್ ಕೃತಿಯನ್ನು ಆಧರಿಸಿ ತಯಾರಾಗುತ್ತಿದ್ದ ಎಲಿಫೆಂಟ್ ಬಾಯ್ ಚಿತ್ರಕ್ಕೆ ಈ ಹುಡುಗನೇ ಸೂಕ್ತ ನಟ ಎಂದೆನಿಸಿ, ಅಮೆರಿಕಾಗೆ ಕರೆದೊಯ್ಯುತ್ತಾರೆ ಫಾಹರ್ಟಿ. ಆಗ ಸಾಬುಗೆ ಕೇವಲ 13 ವರ್ಷ. ಎಲಿಫೆಂಟ್ ಬಾಯ್ ಚಿತ್ರದ ಮೂಲಕ ಸಾಬು ಜಗತ್ತಿನಾದ್ಯಂತ ಸುದ್ದಿಯಾದ.
ಎಲಿಫೆಂಟ್ ಬಾಯ್ ಸಿನಿಮಾ ಹಿಟ್ ಆಗುತ್ತಿದ್ದಂತೆಯೇ ಸಾಬುಗೆ ಸಾಲು ಸಾಲು ಚಿತ್ರಗಳ ಅವಕಾಶ. ಜಂಗಲ್ ಬುಕ್, ದ ಮ್ಯಾನ್ ಈಟರ್ಸ್ ಆಫ್ ಕುಮೊನ್, ಥೀಫ್ ಆಫ್ ಬಾಗ್ದಾದ್, ಅರೇಬಿಯನ್ ನೈಟ್ಸ್, ಎ ಟೈಗರ್ ವಾಕ್ಸ್ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಸಾಬು ನಟಿಸಿದರು. ಅವರಿಗೆ 1944ರಲ್ಲಿ ಅಮೆರಿಕ ಪೌರತ್ವವನ್ನೂ ನೀಡಿತು. ಹಾಗಾಗಿ ಭಾರತಕ್ಕೆ ವಾಪಸ್ಸಾಗದೇ ಅಲ್ಲಿ ಉಳಿದುಕೊಂಡು ಬಿಟ್ಟರು ಸಾಬು ದಸ್ತಗೀರ್.
1948ರಲ್ಲಿ ನಟಿ ಮರ್ಲಿನ್ ಕೂಪರ್ ಅವರನ್ನು ಮದುವೆಯಾಗಿ 1963ರಲ್ಲಿ ಬಣ್ಣದ ಬದುಕಿಗೆ ವಿದಾಯ ಹೇಳಿದರು. ಇನ್ನೂ ಅಚ್ಚರಿಯ ಸಂಗತಿ ಅಂದರೆ, 2ನೇ ವಿಶ್ವ ಯುದ್ಧದ ಕಡೆಯ ಹೊತ್ತಿಗೆ ಸಾಬು ಅಮೆರಿಕ ಸೇನೆ ಸೇರಿ, ಪೆಸಿಫಿಕ್ ಸಾಗರದ ಮೇಲೆ ಬಾಂಬ್ ಹೊತ್ತ ಯುದ್ಧವಿಮಾನದಲ್ಲಿ ಶಸ್ತ್ರ ನಿರ್ವಹಣೆಯ ಜವಾಬ್ದಾರಿ ಹೊತ್ತರು. ಅವರ ಸಾಹಸಗಳಿಗಾಗಿ ಪ್ರತಿಷ್ಠಿತ ‘ಫ್ಲಯಿಂಗ್ ಕ್ರಾಸ್’ ಗೌರವ ಕೂಡ ಸಿಕ್ಕಿದೆ. ಅಂದಹಾಗೆ ಈ ದಸ್ತಗೀರ್ ಹುಟ್ಟಿದ್ದು ಮೈಸೂರಿನ ಕುಗ್ರಾಮ ಕಾರಾಪುರದಲ್ಲಿ.