ಪ್ರತಿ ವರ್ಷ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವುದು ಮತ್ತು ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅದರಂತೆ ಕರ್ನಾಟಕದ ಇತಿಹಾಸ ತಿಳಿಯುವುದೂ ಅಷ್ಟೇ ಮುಖ್ಯವಾಗಿದೆ.
Advertisement
ರಾಜ್ಯ ಉದಯಿಸಿ 17 ವರ್ಷಗಳವರೆಗೂ ʻಮೈಸೂರುʼ ಎಂಬ ಹೆಸರೇ ಇತ್ತು. ಬಳಿಕ ಮೈಸೂರು ರಾಜ್ಯಕ್ಕೆ 1973ರ ನವೆಂಬರ್ 1ರಂದು ʻಕರ್ನಾಟಕ’ ಎಂದು ನಾಮಕರಣ ಮಾಡಲಾಯಿತು. ʻಮೈಸೂರು’ ‘ಬದಲಾಗಿ ʻಕರ್ನಾಟಕʼ ಎಂದು ಮರುನಾಮಕರಣ ಮಾಡಿದ್ದೇಕೆ? ರಾಜ್ಯದ ಮೂಲ ಹೆಸರು ಬದಲಿಸುವ ಪ್ರಯತ್ನಗಳು ಏಕೆ ನಡೆದವು? ಇದೊಂದು ಚೆಂದದ ಕುತೂಹಲ. ಇದರ ಸಂಕ್ಷಿಪ್ತ ಹಿನ್ನೆಲೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ….
Advertisement
Advertisement
ಚಳವಳಿಗಾರರೂ ಆಗಿದ್ದ ಅಂದಾನಪ್ಪ ದೊಡ್ಡಮೇಟಿ ಅವರು ವಿಧಾನಸಭಾ ಸದಸ್ಯರೆಲ್ಲರೂ ʻಕರ್ನಾಟಕ’ ಎಂಬ ಹೆಸರು ಕುರಿತು ಚರ್ಚಿಸಲೆಂದೇ ಕೃತಿಯೊಂದನ್ನು ರಚಿಸಿ ಹಂಚಿದರು. 1957ರ ಸೆ.30ರಂದು ಈ ಕುರಿತು ಸದನದಲ್ಲಿ ಚರ್ಚೆಯಾಯಿತು. ಪ್ರತಿಪಕ್ಷದ ಉಪನಾಯಕರಾಗಿದ್ದ ಎಂ. ರಾಮಪ್ಪನವರು ʻಕರ್ನಾಟಕ’ ನಾಮಕರಣಗೊಳ್ಳಬೇಕೆಂದು ಎರಡು ಬಾರಿ ಗೊತ್ತುವಳಿ ಮಂಡಿಸಿದ್ದರೂ ಅನಿರ್ದಿಷ್ಟಕಾಲ ಮುಂದೂಡಲ್ಪಟ್ಟಿತು. ಶಾಸಕರಾದ ಬಸವನಗೌಡ ಮತ್ತು ಆರ್.ಎಸ್ ಪಾಟೀಲ್ ಅವರೂ ಸದನದಲ್ಲಿ ಪ್ರಸ್ತಾಪಿಸಿದ್ದರು. ಅಂದಾನಪ್ಪನವರು, ʻಕರ್ನಾಟಕʼ ನಾಮಕರಣಗೊಳ್ಳದೇ ತಾವು ವಿರಮಿಸುವುದಿಲ್ಲ, ಎನ್ನುವ ಮಟ್ಟಿಗೆ ಮತ್ತೆಮತ್ತೆ ನಾಮಕರಣದ ವಿಚಾರವನ್ನು ಸದನದಲ್ಲಿ ಮುನ್ನೆಲೆಗೆ ತಂದರು. ಇದನ್ನೂ ಓದಿ: ಕರ್ನಾಟಕ ಏಕೀಕರಣದ ಏಕೈಕ ಹುತಾತ್ಮ ಯಾರೆಂದು ಗೊತ್ತೆ?
Advertisement
ನಂತರದಲ್ಲಿ ಜನರಿಂದ ಒತ್ತಡ ತೀವ್ರಗೊಂಡಾಗ ದೇವರಾಜ ಅರಸು ಅವರು ಜುಲೈ 27, 1972ರಂದು ʻಕರ್ನಾಟಕ’ ನಾಮಕರಣದ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಿ, ಅಂದೇ ಒಪ್ಪಿಗೆ ಪಡೆದರು. ಅದೇ ತಿಂಗಳ 31ರಂದು ವಿಧಾನ ಪರಿಷತ್ತಿನಲ್ಲಿ ಒಪ್ಪಿಗೆ ದೊರೆಯಿತು. ವಿಧೇಯಕವು 1973ರ ಜುಲೈ 30ರಂದು ಲೋಕಸಭೆಯಲ್ಲಿ, ಆಗಸ್ಟ್ 8ರಂದು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡು, ಅ.8ರಂದು ರಾಷ್ಟ್ರಪತಿ ವಿ.ವಿ.ಗಿರಿ ಅಂಕಿತದೊಂದಿಗೆ ಮೈಸೂರು ರಾಜ್ಯ ʻಕರ್ನಾಟಕ’ ವಾಯಿತು. ನವೆಂಬರ್ 1, 1973ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 17ನೇ ರಾಜ್ಯೋತ್ಸವವೇ ಕರ್ನಾಟಕ ನಾಮಕರಣೋತ್ಸವ. ಅರಸು ಅವರು ಕಾರ್ಯಕ್ರಮ ಉದ್ಘಾಟಿಸಿ, ʻಇದು ನಾಡಿನ ಜನತೆಯ ಆಸೆ, ಆಕಾಂಕ್ಷೆಗಳ ಪ್ರತೀಕ. ಕನ್ನಡ ಭಾವಬಂಧನದ ಸಂಕೇತʼ ಎಂದು ನುಡಿದಿದ್ದರು.
ರಾಜ್ಯನಿರ್ಮಾಣ ದಿನಾಚರಣೆ ನಡೆದಿದ್ದೆಲ್ಲಿ?
ಕೆಂಗಲ್ ಹನುಮಂತರಾಯರ ಆಶಯದಂತೆ ಏಕೀಕರಣಗೊಂಡ ಕರ್ನಾಟಕವು ವಿಶಾಲ ʻಮೈಸೂರು ರಾಜ್ಯ’ ಎಂಬ ಹೆಸರಿನಿಂದ ನ.1, 1956ರಂದು ಅಸ್ತಿತ್ವಕ್ಕೆ ಬಂತು. ಅಂದು ಕನ್ನಡಿಗರ ಸಾಂಸ್ಕೃತಿಕ ರಾಜಧಾನಿ ಹಂಪಿಯಲ್ಲಿ ಉತ್ತರ ಕರ್ನಾಟಕದ ಜನರು ʻರಾಜ್ಯ ನಿರ್ಮಾಣದ ದಿನ’ವನ್ನಾಗಿ ಆಚರಿಸಿದರು. ʻಕನ್ನಡ ಕುಲಪುರೋಹಿತ’ ಆಲೂರು ವೆಂಕಟರಾಯರು ಈ ಉತ್ಸವದ ಪೌರೋಹಿತ್ಯ ವಹಿಸಿದ್ದು ವಿಶೇಷವಾಗಿತ್ತು.
ಮೊದಲ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ:
ಏಕೀಕರಣದ ರೂವಾರಿಗಳಾದ ಎಸ್. ನಿಜಲಿಂಗಪ್ಪನವರು 10 ದಿನಗಳ ಮೊದಲು ವಿಶಾಲ ಮೈಸೂರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಅವಿರೋಧ ನಾಯಕರಾಗಿ ಆಯ್ಕೆಯಾದರು. ಏಕೀಕರಣದ ದಿನದಂದೇ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ವಿಶಾಲ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಗಳಾದರು. ಈವರೆಗೆ ರಾಜ್ಯದಲ್ಲಿ ಐದು ವರ್ಷ ಪೂರ್ಣಾವಧಿ ಪೂರೈಸಿದ ಮೂವರು ಮುಖ್ಯಮಂತ್ರಿಗಳಲ್ಲಿ ಇವರು ಮೊದಲಿಗರು.