ಯಾದಗಿರಿ: ಅಮಿತ್ ಶಾ ಪುತ್ರನ ಜಯ ಶಾ ಆಸ್ತಿ 60 ಸಾವಿರದಿಂದ 50 ಕೋಟಿಗೆ ಹೇಗೆ ಏರಿಕೆ ಆಯ್ತು ಎನ್ನುವುದರ ಬಗ್ಗೆ ಪ್ರಧಾನಿ ಮೋದಿ ಉತ್ತರ ನೀಡಲಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಆಗ್ರಹಿಸಿದ್ದಾರೆ.
ಉತ್ತರ ಕರ್ನಾಟಕ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಶಹಪುರದಲ್ಲಿ ಏಕಾಏಕಿ ನಿಂತು ಮಾಧ್ಯಮಗಳೊಂದಿಗೆ ಮಾತನಾಡಿದರು. ರಾಫೇಲ್ ಒಪ್ಪಂದದ ಗುತ್ತಿಗೆ ಹೆಚ್‍ಎಎಲ್ ಗೆ ಸಿಗಬೇಕಿತ್ತು. ಆದರೆ ಮೋದಿ ತಮ್ಮ ಬೆಂಬಲಿಗ ಉದ್ಯಮಿಗೆ ನೀಡುವ ಉದ್ದೇಶದಿಂದ ದೇಶದ ಪ್ರತಿಷ್ಠಿತ ಸಂಸ್ಥೆಗೆ ಸಿಗಬೇಕಿದ್ದ ಗುತ್ತಿಗೆಯನ್ನು ತಪ್ಪಿಸಿದ್ದಾರೆ ಎಂದು ಆರೋಪಿಸಿದರು.
Advertisement
Advertisement
ಕರ್ನಾಟಕಕ್ಕೆ ರಾಫೇಲ್ ಕಂಪನಿ ಬರಬೇಕಿತ್ತು. ಆದರೆ ಅವರು ಬೇರೆಯವರಿಗೆ ಗುತ್ತಿಗೆ ನೀಡಿದ್ದಾರೆ. ಪ್ರಧಾನ ಮಂತ್ರಿಗಳು ಕರ್ನಾಟಕದ ಉದ್ಯೋಗ ಕಿತ್ತು ಕೊಂಡಿದ್ದಾರೆ ಎಂದು ಆರೋಪಿಸಿದರು.
Advertisement
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ಎಲೆಕ್ಷನ್ ಹಿಂದೂ ಟ್ವೀಟ್ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ಯಾವ ದೇವಾಲಯ, ಧಾರ್ಮಿಕ ಕೇಂದ್ರ ಇಷ್ಟ ಅಲ್ಲಿಗೆ ನಾನು ಹೋಗುತ್ತೇನೆ. ದೇವಾಲಯಕ್ಕೂ ಹೋಗುತ್ತೇನೆ ಮಸೀದಿಗೂ ಹೋಗುತ್ತೇನೆ. ಹೀಗಾಗಿ ದೇವಸ್ಥಾನಗಳಿಗೆ ನಾನು ಭೇಟಿ ನೀಡಿದ್ದೇನೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು. ಅವರ ಸರ್ಕಾರದ ಅವಧಿಯಲ್ಲಿ ಕ್ಯಾಬಿನೆಟ್ ಮಂತ್ರಿಗಳು ಕೂಡ ಜೈಲಿಗೆ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Advertisement
ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಹುಲ್, ರಾಷ್ಟ್ರ ರಕ್ಷಣೆಗೆ ತಮ್ಮ ಪ್ರಾಣದ ಹಂಗು ತೊರೆದು ಹೋರಾಡುವ ಸೈನಿಕರ ಬಗ್ಗೆ ಹೀಗೆ ಮಾತನಾಡುವುದು ಸರಿಯಲ್ಲ. ಮೋಹನ ಭಾಗವತ್ ದೇಶದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: WIRE ವಿರುದ್ಧ 100 ಕೋಟಿ ಮಾನನಷ್ಟ ಕೇಸ್ ಹೂಡಿದ ಅಮಿತ್ ಶಾ ಪುತ್ರ