ಎರಡು ದಶಕಗಳ ಹಿಂದೆ, ಚೀನಾ (China) ಕಾರುಗಳ (Car) ತಯಾರಿಸುವಲ್ಲಿ ಕಡಿಮೆ ಸಾಮರ್ಥ್ಯವನ್ನು ಹೊಂದಿತ್ತು. ಆದರೆ ಈಗ ಯುರೋಪಿಯನ್ ದೇಶಗಳನ್ನು ಹಿಂದಿಕ್ಕಿ ಕಾರು ರಫ್ತು (Exports) ಮಾಡುವ ಮೊದಲ ದೇಶವಾಗಿ ಹೊರಹೊಮ್ಮಿದೆ. ಚೀನಾ ಕಾರು ಮಾರುಕಟ್ಟೆ ಅಮೆರಿಕ (America) ಮತ್ತು ಯುರೋಪಿಯನ್ ಮಾರುಕಟ್ಟೆ (European Countries) ಒಟ್ಟುಗೂಡಿಸಿದಷ್ಟು ಬೆಳೆದಿದೆ.
ಚೀನಾ ಈಗ ತನ್ನ ದೇಶದ ಗ್ರಾಹಕರಿಗೆ ಅಗತ್ಯವಿರುವ ಎರಡು ಪಟ್ಟು ಹೆಚ್ಚು ಕಾರುಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕಾಗಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಲು ಬೇರೆ ದೇಶಗಳ ಕಡೆ ನೋಡುತ್ತಿದೆ. ಇದರ ನಡುವೆ BYD ಯಂತಹ ಚೈನೀಸ್ ಬ್ರ್ಯಾಂಡ್‌ಗಳು ಸುಧಾರಿತ ಎಲೆಕ್ಟ್ರಿಕ್ ಕಾರುಗಳನ್ನು ಅತ್ಯಂತ ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡುತ್ತಿರುವುದಕ್ಕಾಗಿ ವಿಶ್ವದಾದ್ಯಂತ ಹೆಸರುವಾಸಿಯಾಗುತ್ತಿವೆ. ಅಲ್ಲದೇ ಉತ್ತಮ ತಂತ್ರಜ್ಞಾನದಿಂದ ಚೀನಾದ ಕಾರುಗಳು ಜನರ ಮನೆ ಮಾತಾಗಿವೆ.
Advertisement
ತೈಲದ ಮೇಲೆ ಅವಲಂಬನೆ ತಪ್ಪಿಸಲು ಚೀನಾ ಮಾಸ್ಟರ್ ಪ್ಲ್ಯಾನ್!
ವರ್ಷಕ್ಕೆ ಸುಮಾರು 4 ಕೋಟಿ ಕಾರುಗಳನ್ನು ನಿರ್ಮಿಸುವ 100ಕ್ಕೂ ಹೆಚ್ಚು ಕಾರ್ಖಾನೆಗಳನ್ನು ಚೀನಾ ಹೊಂದಿದೆ. ಆದರೆ ಎಲೆಕ್ಟ್ರಿಕ್ ವಾಹನಗಳ ಮೇಲಿನ ಆಸಕ್ತಿಯಿಂದ ಪೆಟ್ರೋಲ್ ಬಳಕೆಯ ಕಾರುಗಳಿಗೆ ಚೀನಾದಲ್ಲಿ ಬೇಡಿಕೆ ಕುಸಿದಿದೆ. ಚೀನಾ ಆಮದು ಮಾಡಿಕೊಂಡ ತೈಲದ ಮೇಲಿನ ಅವಲಂಬನೆಯನ್ನು ಮಿತಿಗೊಳಿಸಲು ಎಲೆಕ್ಟ್ರಿಕ್ ಕಾರುಗಳನ್ನು ಹೆಚ್ಚಾಗಿ ಅಭಿವೃದ್ಧಿಪಡಿಸಿದೆ. ಇದಕ್ಕಾಗಿ ಚೀನಾ 15 ವರ್ಷಗಳಿಗೂ ಹೆಚ್ಚು ಕಾಲ ಹೂಡಿಕೆ ಮಾಡಿದೆ.
Advertisement
Advertisement
ಚೀನಾ ಕಾರುಗಳ ರಫ್ತನ್ನು ಹತ್ತಿಕ್ಕಲು ಹೊಸ ಸುಂಕಗಳನ್ನು ವಿಧಿಸಲು ಅಮೆರಿಕ ಮುಂದಾಗಿದೆ. ಅಮೆರಿಕ ಸೇರಿದಂತೆ ಹಲವು ದೇಶಗಳು ಈಗಾಗಲೇ ಚೀನಾದ ಎಲೆಕ್ಟ್ರಿಕ್ ವಾಹನಗಳ ಮೇಲೆ ಹೆಚ್ಚುವರಿ ಸುಂಕವನ್ನು ವಿಧಿಸುತ್ತಿವೆ. ಆದರೆ ಆಟೋಮೇಕಿಂಗ್‌ನಲ್ಲಿ ಚೀನಾ ಹೊಂದಿರುವ ಸಾಮರ್ಥ್ಯದಿಂದ ಅದರ ಪ್ರಾಬಲ್ಯವನ್ನು ತಗ್ಗಿಸಲು ಯಾವ ದೇಶಕ್ಕೂ ಸಾಧ್ಯ ಆಗಿಲ್ಲ.
Advertisement
ಚೀನಾ ಕಾರು ರಫ್ತಿನಲ್ಲಿ ಜಿಗಿತ ಕಾಣಲು ಕಾರಣವೇನು?
ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮೇಲೆ ಭಾರೀ ಹಣ ಹೂಡಿಕೆ: ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮೇಲೆ ಭಾರೀ ಹಣ ಹೂಡಿಕೆಯಿಂದಾಗಿ ಚೀನಾದ ಆಟೋ ವಲಯವು ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳವಣಿಗೆ ಕಂಡಿದೆ.
ಟೆಸ್ಲಾ ಕಂಪನಿಯನ್ನು ಹಿಂದಿಕ್ಕಿದ ಚೀನಾದ ಬಿವೈಡಿ
ಚೀನಾದ ಬಿವೈಡಿ ಕಂಪನಿ ಎಲೆಕ್ಟ್ರಿಕ್ ವಾಹನಗಳ ಹೆಚ್ಚಿನ ಮಾರಾಟದಿಂದಾಗಿ ಟೆಸ್ಲಾ ಕಂಪನಿಯ ಸ್ಥಾನವನ್ನು ಕಸಿದುಕೊಂಡಿದೆ ಎಂದು ವರದಿಯಾಗಿದೆ. ಬಿವೈಡಿ ಕಂಪನಿಯು 1995 ರಲ್ಲಿ ಬ್ಯಾಟರಿ ತಯಾರಕನಾಗಿ ಕೆಲಸವನ್ನು ಪ್ರಾರಂಭಿಸಿತು. ನಂತರ ಈ ಕಂಪನಿ ಪ್ಲಗ್-ಇನ್ ಹೈಬ್ರಿಡ್ ಮತ್ತು ಆಲ್-ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವತ್ತ ತನ್ನ ಗಮನ ಹರಿಸಿದೆ.
ಚೀನಾ EVಗಳು ಮತ್ತು ಕಾರುಗಳು ಅಗ್ಗವಾಗಲು 6 ಕಾರಣಗಳು
ಸರ್ಕಾರದ ನೀತಿಗಳು ನಿಯಮಗಳು: ಚೀನಾ ರಫ್ತು ಆಧಾರಿತ ಆರ್ಥಿಕತೆಯಾಗಿದೆ. 2023 ರಲ್ಲಿ, ದೇಶವು 5 ಲಕ್ಷ ಕಾರುಗಳನ್ನು ರಫ್ತು ಮಾಡಿತ್ತು. ಇದು ವಿಶ್ವದ ಅತಿ ದೊಡ್ಡ ಕಾರು ರಫ್ತುದಾರನಾಗಲು ಕಾರಣವಾಯಿತು.
ಸ್ಥಳೀಯ ವಾಹನ ತಯಾರಕರಿಗೆ ಸಬ್ಸಿಡಿಗಳು ಮತ್ತು ಪ್ರೋತ್ಸಾಹಗಳನ್ನು ಒದಗಿಸುವಲ್ಲಿ ಸರ್ಕಾರವು ಹೆಚ್ಚು ಗಮನಹರಿಸಿದೆ. ಈ ಪ್ರೋತ್ಸಾಹವು ತಯಾರಿಕಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಅಲ್ಲದೇ ಚೀನಾ ಸರ್ಕಾರವು ಇವಿ ವಲಯದಲ್ಲಿ ಭಾರೀ ಹೂಡಿಕೆ ಮಾಡಿದೆ. 2009 ರಿಂದ, ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನು ಬೆಂಬಲಿಸಲು 29 ಶತಕೋಟಿ ಡಾಲರ್‌ಗೂ ಹೆಚ್ಚು ಹಣವನ್ನು ವಿನಿಯೋಗಿಸಿದೆ. ಅಲ್ಲದೆ, EV ಮಾರಾಟವನ್ನು ಉತ್ತೇಜಿಸಲು 520 ಶತಕೋಟಿ ಯುವಾನ್ (71.8 ಶತಕೋಟಿ ಡಾಲರ್) ಮಾರಾಟ ತೆರಿಗೆ ವಿನಾಯಿತಿಗಳ ಪ್ಯಾಕೇಜ್ ಘೋಷಿಸಿದೆ. ಇದರಿಂದ ಚೀನಾದಕಂಪನಿಗಳು ವಿಶ್ವದಲ್ಲೇ ಅಗ್ಗದ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಲು ಸಮರ್ಥರಾಗಿದ್ದಾರೆ.
ಕಡಿಮೆ ಕಾರ್ಮಿಕ ವೆಚ್ಚ: ಚೀನಾದಲ್ಲಿ ಕಾರ್ಮಿಕ ವೆಚ್ಚವು ಅನೇಕ ಪಾಶ್ಚಿಮಾತ್ಯ ದೇಶಗಳಿಗಿಂತ ಗಣನೀಯವಾಗಿ ಕಡಿಮೆಯಾಗಿದೆ. ಉದಾಹರಣೆಗೆ, ಚೀನಾದಲ್ಲಿ ಅಸೆಂಬ್ಲಿ ಲೈನ್ ಕೆಲಸಗಾರರಿಗೆ ಗಂಟೆಯ ವೇತನವು 4.20 ಡಾಲರ್ ನಿಂದ ಪ್ರಾರಂಭವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಅಮೇರಿಕನ್ ಆಟೋ ಕಾರ್ಮಿಕರ ವೇತನ ಪ್ರತಿ ಗಂಟೆಗೆ ಸರಾಸರಿ 29 ಡಾಲರ್ ಇದೆ. ಕಾರ್ಮಿಕ ವೆಚ್ಚದಲ್ಲಿನ ಈ ಗಣನೀಯ ವ್ಯತ್ಯಾಸವು ಚೀನೀ ತಯಾರಕರು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುತ್ತದೆ.
ಕಡಿಮೆ ಕಚ್ಚಾವಸ್ತು ವೆಚ್ಚ: ಕಚ್ಚಾ ವಸ್ತುಗಳ ಸಂಗ್ರಹಣೆಯಲ್ಲಿ ಸ್ಥಳೀಯ ಸಂಪನ್ಮೂಲಗಳ ಕಾರಣದಿಂದಾಗಿ ವಾಹನಗಳಲ್ಲಿ ಬಳಸುವ ವಸ್ತುಗಳ ಬೆಲೆ ಸಾಮಾನ್ಯವಾಗಿ ಚೀನಾದಲ್ಲಿ ಕಡಿಮೆಯಾಗಿದೆ. ವಾಹನ ಉತ್ಪಾದನೆಯಲ್ಲಿ ಬಳಸುವ ಲೋಹಗಳು ಮತ್ತು ಖನಿಜಗಳು ಚೀನಾದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಇದು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಉದಾಹರಣೆಗೆ, ಚೀನಾದಲ್ಲಿ ಬ್ಯಾಟರಿ ಬೆಲೆಗಳು ಯುಎಸ್‌ಗಿಂತ 24% ಕಡಿಮೆಯಾಗಿದೆ.
ಕಾರು ಉತ್ಪಾದನೆ ಗುರಿ: 2024 ರ ಹೊತ್ತಿಗೆ, ಚೀನಾ ವಾಹನ ಮಾರಾಟ ಮತ್ತು ಉತ್ಪಾದನೆ ಎರಡರಲ್ಲೂ ಮುಂಚೂಣಿಯಲ್ಲಿದೆ. ದೇಶೀಯ ಉತ್ಪಾದನೆಯು 2025 ರ ವೇಳೆಗೆ 3.5 ಕೋಟಿ ಕಾರುಗಳನ್ನು ತಲುಪುವ ನಿರೀಕ್ಷೆಯಿದೆ.
ಸ್ಥಳೀಯ ಪೂರೈಕೆದಾರರು: ಸಾರಿಗೆ ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ ಹೆಚ್ಚು ಸ್ಥಳೀಯ ಪೂರೈಕೆದಾರರನ್ನು ಕಂಪನಿಗಳು ಅವಲಂಬಿಸಿವೆ. ಇದು ಒಟ್ಟಾರೆ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ನಿರ್ಣಾಯಕವಾಗಿದೆ.
ತಂತ್ರಜ್ಞಾನ ಆವಿಷ್ಕಾರಗಳು: ಚೀನಾದ EV ಕಂಪನಿಗಳು ತಾಂತ್ರಿಕ ಆವಿಷ್ಕಾರದಲ್ಲಿ ಮುಂಚೂಣಿಯಲ್ಲಿವೆ. ಅವರು ಹೊಸ ಮಾದರಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಾಂಪ್ರದಾಯಿಕ ವಾಹನ ತಯಾರಕರಿಗಿಂತ 30% ವೇಗವನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ, ಇದು ಮಾರುಕಟ್ಟೆಯ ಬೇಡಿಕೆಗಳು ಮತ್ತು ಗ್ರಾಹಕರ ಆದ್ಯತೆಗಳಿಗೆ ತ್ವರಿತವಾಗಿ ಲಭ್ಯವಾಗುತ್ತಿದೆ.