ವಾಷಿಂಗ್ಟನ್: ನಾನು, ಟ್ರಂಪ್ (Donald Trump), ಮೋದಿ (Narendra Modi) ಒಂದಾದ್ರೆ ಪ್ರಜಾಸತ್ತೆಗೆ ಬೆದರಿಕೆ ಹೇಗಾಗುತ್ತೆ? ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರು ಎಡಪಂಥೀಯ ನಾಯಕರ ವಿರುದ್ಧ ಚಾಟಿ ಬೀಸಿದ್ದಾರೆ.
ವಾಷಿಂಗ್ಟನ್‌ನಲ್ಲಿ (Washington) ನಡೆದ ಕನ್ಸರ್ವೇಟಿವ್ ಪೊಲಿಟಿಕಲ್ ಆ್ಯಕ್ಷನ್ ಕಾನ್ಫರೆನ್ಸ್(ಸಿಪಿಎಸಿ)ನಲ್ಲಿ ವಿಡಿಯೋ ಮೂಲಕ ಮಾತನಾಡಿದ ಅವರು, `ನಾನು, ಡೊನಾಲ್ಡ್ ಟ್ರಂಪ್, ಮೋದಿಯಂಥ ಬಲಪಂಥೀಯ ನಾಯಕರು ಬಂದಾದರೆ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎಂದು ಕೂಗೆಬ್ಬಿಸುತ್ತಾರೆ. ಆದರೆ ಅದೇ ಎಡಪಂಥೀಯ ನಾಯಕರು ಇದೇ ರೀತಿ ಮೈತ್ರಿ ಮಾಡಿಕೊಂಡಾಗ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಎಡಪಂಥೀಯರು ಟ್ರಂಪ್ ಅವರ ಗೆಲುವಿನಿಂದ ಆತಂಕಕ್ಕೊಳಗಾಗಿದ್ದಾರೆ. ಕನ್ನರ್ವೇಟಿವ್‌ಗಳು ಗೆಲ್ಲುತ್ತಿರುವುದು ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಒಂದಾಗುತ್ತಿರುವುದು ಎಡಪಂಥೀಯರಿಗೆ ವಿಪರೀತ ಹೊಟ್ಟಯುರಿ ಉಂಟು ಮಾಡುತ್ತಿದೆ’ ಎಂದರು. ಇದನ್ನೂ ಓದಿ: ಬಲ್ಡೋಟಾ ಫ್ಯಾಕ್ಟರಿ ಸ್ಥಾಪನೆ ವಿರೋಧಿಸಿ ಕೊಪ್ಪಳ ಬಂದ್ ಕರೆ – ಶಾಲೆಗಳಿಗೆ ರಜೆ
Advertisement
Advertisement
`ಬಿಲ್‌ಕ್ಲಿಂಟನ್ ಮತ್ತು ಹಿಂದಿನ ಬ್ರಿಟನ್ ಒರಧಾನಿ ಟೋನಿ ಬ್ಲೇರ್ ಅವರು 90ರ ದಶಕದಲ್ಲಿ ಅಂತಾರಾಷ್ಟ್ರೀಯ ಎಡಪಂಥೀಯ ಉದಾರವಾದಿ ನೆಟ್‌ವರ್ಕ್ ರಚಿಸಿದಾಗ ಅವರನ್ನು `ಮುತ್ಸದ್ದಿಗಳು’ ಎಂದು ಕರೆಯಲಾಯಿತು. ಆದರೆ ಇದೀಗ ಟ್ರಂಪ್, ಮೆಲೋನಿ, ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಅಥವಾ ಪ್ರಧಾನಿ ಮೋದಿ ಅವರು ಪರಸ್ಪರ ಮಾತುಕತೆ ನಡೆಸಿದರೆ `ಪ್ರಜಾಪ್ರಭುತ್ವಕ್ಕೆ ಬೆದರಿಕೆ’ ಎನ್ನುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಮತದಾನಕ್ಕೆ ಅಮೆರಿಕ ದೇಣಿಗೆ ನೀಡಿಲ್ಲ, 7 ಯೋಜನೆಗಳಿಗಷ್ಟೇ ಧನಸಹಾಯ – ಹಣಕಾಸು ಸಚಿವಾಲಯ
Advertisement
ಈ ಎಡಪಂಥೀಯರ ದ್ವಿಮುಖ ನೀತಿ ನಮಗೆ ಅಭ್ಯಾಸವಾಗಿ ಹೋಗಿದೆ. ಅವರು ನಮ್ಮ ಮೇಲೆ ಎಷ್ಟೇ ಕೆಸರೆರಚಿದರೂ ಎಡಪಂಥೀಯರ ಸುಳ್ಳುಗಳನ್ನು ಜನ ನಂಬುತ್ತಿಲ್ಲ. ಜನ ನಮಗೇ ಮತಹಾಕುತ್ತಿದ್ದಾರೆ’ ಎಂದು ಮೆಲೋನಿ ಹೇಳಿದರು. ನಾವು ಸ್ವಾತಂತ್ರ್ಯವನ್ನು ರಕ್ಷಿಸುತ್ತೇವೆ. ಹಸಿರು ಎಡಪಂಥೀಯರ ಹುಚ್ಚುತನದಿಂದ ಜನರನ್ನು ರಕ್ಷಿಸುತ್ತೇವೆ ಎಂದು ನುಡಿದರು. ಇದನ್ನೂ ಓದಿ: ಬ್ಯಾಂಕಲ್ಲಿ 5 ಲಕ್ಷಕ್ಕಿಂತ ಹೆಚ್ಚು ಹಣ ಇಟ್ಟರೆ ಸೇಫ್ ಆಗಿರುತ್ತಾ, ಇಲ್ವಾ? – ಏನಿದು ಠೇವಣಿ ವಿಮೆ?