ಬೆಂಗಳೂರು: ನನಗೆ ಮುಖ್ಯಮಂತ್ರಿ ಆಗೋದಕ್ಕೆ ಇಷ್ಟವಿರಲಿಲ್ಲ. ಕಾಂಗ್ರೆಸ್ಸಿಗರು ನನ್ನನ್ನ ಬಿಡಲಿಲ್ಲ ಎಂದು ಸಂಮ್ಮಿಶ್ರ ಸರ್ಕಾರದ ರಚನೆಯ ರಹಸ್ಯವನ್ನು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಗಾಂಧಿಭವನದ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ನಮ್ಮ ತಂದೆ ಅವನಿಗೆ ಎರಡು ಬಾರಿ ಚಿಕಿತ್ಸೆ ಆಗಿದೆ. ಆರೋಗ್ಯ ಸರಿಯಿಲ್ಲ. ಆದ್ದರಿಂದ ನೀವೇ ಯಾರದರೂ ಮುಖ್ಯಮಂತ್ರಿ ಆಗಿ ಎಂದು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದರು. ಆಗ ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ದೆಹಲಿ ನಾಯಕರು ನೀವೇ ಸಿಎಂ ಆಗಬೇಕು ಎಂದು ಒತ್ತಾಯ ಮಾಡಿ ನನ್ನನ್ನು ಮುಖ್ಯಮಂತ್ರಿ ಮಾಡಿದ್ದಾರೆ ಎಂದು ತಿಳಿಸಿದರು.
Advertisement
ಕಾಂಗ್ರೆಸ್ ನಾಯಕರು ಕೊಟ್ಟಿರುವ ಅಧಿಕಾರವನ್ನು ನಡೆಸುತ್ತೇನೆ. ನನಗೆ ಹಣ ಮಾಡುವ ಹುಚ್ಚು ಇಲ್ಲ. ನನಗೆ ಎರಡು ಬಾರಿ ಚಿಕಿತ್ಸೆ ಆಗಿದೆ ಎಷ್ಟು ದಿನ ಬದುಕುತ್ತೇನೆ ನನಗೆ ಗೊತ್ತಿಲ್ಲ. ಇಂದು ದೇವರ ಅನುಗ್ರಹದಿಂದ ಈ ಜಾಗದಲ್ಲಿ ಕುಳಿತಿದ್ದೇನೆ. ಗಾಂಧಿಜಿಯವರ ಹೆಸರನ್ನು ಉಳಿಸುತ್ತೇನೆ ಎಂದರು.
Advertisement
ಇವತ್ತು ವಿಧಾನಸೌಧದಲ್ಲಿ ನಡೆಯುತ್ತಿರುವ ಪರಿಸ್ಥಿತಿಯನ್ನು ನೋಡಿದರೆ ಇದನ್ನು ಯಾವ ರೀತಿ ನಿಲ್ಲಿಸಲು ಸಾಧ್ಯ ಎಂದು ಯೋಚನೆ ಮಾಡುತ್ತೇನೆ. ನಾನು ನನ್ನ ಗುರುಗಳಿಗೆ ಹೇಳಿದೆ. ಗುರುಗಳೇ ನನ್ನ ಮಟ್ಟದಲ್ಲಿ ನಾನು ಮೂರನೇ ಬಾರಿ ಈ ಭ್ರಷ್ಟಾಚಾರ ನಿಲ್ಲಿಸಲು ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡಲು ಅಷ್ಟು ಸುಲಭವಲ್ಲ. ಆದರೆ ನನ್ನ ಕೈಯಲ್ಲಿ ಆದಷ್ಟು ಪ್ರಯತ್ನ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.