ಲಕ್ನೋ: ಕಳೆದ ಬಾರಿಯ ಲೋಕಸಭಾ ಚುನಾವಣೆಯನ್ನ ಹೊರತುಪಡಿಸಿದ್ರೆ ಉತ್ತರಪ್ರದೇಶದಲ್ಲಿ ಬಿಜೆಪಿ 90ರ ದಶಕದಲ್ಲಿ ನಡೆದ ಎರಡು ಪ್ರಮುಖ ರಾಜಕೀಯ ಬೆಳವಣಿಗಳಿಂದ ಚೇತರಿಸಿಕೊಳ್ಳಲು ಈವರೆಗೆ ಸಾಧ್ಯವಾಗಿರಲಿಲ್ಲ. ಅದೆಂದರೆ 1993ರ ಮುಲಾಯಂ ಸಿಂಗ್ ಯಾದವ್ ಮತ್ತು ಕಾಶಿ ರಾಮ್ ಅವರ ನಡುವಿನ ಮೈತ್ರಿ ಹಾಗೂ ಕಲ್ಯಾಣ್ ಸಿಂಗ್ ಅವರ ದಂಗೆ.
1991 ರಿಂದೀಚೆಗೆ ನಡೆದ ಪ್ರತಿ ಚುನಾವಣೆಯಲ್ಲೂ ಬಿಜೆಪಿ ಸ್ಥಾನಗಳನ್ನ ಕಳೆದುಕೊಳ್ಳುತ್ತಾ ಹೋಯಿತು. 2012ರಲ್ಲಂತೂ 403 ಸ್ಥಾನಗಳಲ್ಲಿ 50ಕ್ಕಿಂತ ಕೆಳಗೆ ಕುಸಿಯಿತು. ಇದೀಗ 2017ರ ಚುನಾವಣೆಯ ಮೂಲಕ ಉತ್ತರಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಏರಲು ಸಿದ್ಧವಾಗಿದೆ.
Advertisement
ಕಳೆದ ಚುನವಣೆಗಳಿಂದ ಅದರಲ್ಲೂ ಬಿಹಾರದಲ್ಲಿ ಸೊಲನುಭವಿಸಿದ ನಂತರ ಪಾಠ ಕಲಿತಿರೋ ಬಿಜೆಪಿ ಒಂದು ವರ್ಷದೊಳಗೆ ತನ್ನ ವೋಟ್ ಬ್ಯಾಂಕ್ ಕ್ರೂಢೀಕರಣಕ್ಕೆ ಸಾಕಷ್ಟು ಶ್ರಮ ವಹಿಸಿತು. ರಾಜ್ಯದ ಒಟ್ಟು 1.47 ಲಕ್ಷ ಮತದಾನ ಕೇಂದ್ರಗಳಲ್ಲಿ 1.25 ಮತಗಟ್ಟೆಗಳಿಗೆ ಬೂತ್ ಸಮಿತಿ ಹಾಗೂ ಉಸ್ತುವಾರಿಗಳನ್ನು ನೇಮಿಸಿತ್ತು. ರಾಜ್ಯಾದ್ಯಂತ ಸುಮಾರು 13 ಲಕ್ಷಕ್ಕೂ ಹೆಚ್ಚಿನ ಬೂತ್ ಕಾರ್ಯಕರ್ತರನ್ನು ಕ್ರೂಢೀಕರಿಸಲಾಗಿತ್ತು. ಈ ಎಲ್ಲಾ ಪ್ರಕ್ರಿಯೆಗಳ ನೇತೃತ್ವವನ್ನು ಆರ್‍ಎಸ್‍ಎಸ್ ಪ್ರಚಾರಕರಾದ ಸುನಿಲ್ ಬನ್ಸಲ್ ನಿರ್ವಹಿಸಿದ್ದರು.
Advertisement
ಬಿಜೆಪಿ ಈ ಬಾರಿ ರಾಜ್ಯದ ಸಾಮಾಜಿಕ ರಚನೆ ಹಾಗೂ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆ ಹಾಗೂ ಬ್ಲಾಕ್ ಮಟ್ಟದಲ್ಲಿ ಪದಾಧಿಕಾರಿಗಳನ್ನ ಆಯ್ಕೆ ಮಾಡಿತ್ತು. ಸುಮಾರು 20 ದಲಿತ ಅಭ್ಯರ್ಥಿಗಳು ಸೇರಿದಂತೆ ಶೇ. 40ರಷ್ಟು ಸ್ಥಾನಗಳನ್ನ ಹಿಂದುಳಿದ ವರ್ಗದವರಿಗೆ ನೀಡಲಾಗಿತ್ತು. ಟಿಕೆಟ್ ಹಂಚುವಿಕೆಯಲ್ಲೂ ಕೂಡ ಬಿಹಾರ ಚುನಾವಣೆಯಿಂದ ಪಾಠ ಕಲಿತಿದ್ದ ಬಿಜೆಪಿ, ಸುಮಾರು 10 ಯಾದವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ನೀಡಿತ್ತು. ಯಾದವರಲ್ಲದ ಹಿಂದುಳಿದ ವರ್ಗ ಹಾಗೂ ಮೇಲ್ವರ್ಗದ ಮೇಲೆ ಹೆಚ್ಚು ಗಮನ ಹರಿಸಿತ್ತು. ಪಕ್ಷದ 3ರಲ್ಲಿ 1 ಅಭ್ಯರ್ಥಿಗಳು ಬ್ರಾಹ್ಮಣರು ಹಾಗೂ ರಜಪುತರಾಗಿದ್ರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮತದಾರರನ್ನ ಸೆಳೆಯಲು 130 ಯಾದವರಲ್ಲದ ಹಿಂದುಳಿದ ವರ್ಗದವರು ಹಾಗೂ ಸುಮಾರು 80ಕ್ಕೂ ಹೆಚ್ಚು ದಲಿತರನ್ನ ಬಳಸಿಕೊಂಡಿತು. ಈ ಬಾರಿಯ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳಿರಲಿಲ್ಲ. ಬಹುತೇಕ ಮೇಲ್ವರ್ಗ, ಹಿಂದುಳಿದ ವರ್ಗ ಹಾಗೂ ದಲಿತರನ್ನೇ ಗಮದಲ್ಲಿಟ್ಟುಕೊಂಡು ಅಭ್ಯರ್ಥಿಗಳನ್ನ ಆಯ್ಕೆ ಮಾಡಿದ್ದರಿಂದ ಬಿಜೆಪಿ ಗೆಲುವಿಗೆ ಪುರಕವಾಯ್ತು ಎಂಬ ಚರ್ಚೆಯೂ ಎದ್ದಿದೆ.
Advertisement
ನಂತರ ಸಿಎಂ ಅಭ್ಯರ್ಥಿ ಯಾರಾಗಬೇಕೆಂಬುದೇ ಪ್ರಶ್ನೆಯಾಗಿತ್ತು. ಮೊದಲಿಗೆ ಮಾಯಾವತಿ ಹಾಗೂ ಅಖಿಲೇಶ್ ಯಾದವ್ ಅವರಿಗೆ ಸರಿಸಮಾನವಾದ ನಾಯಕನನ್ನ ಆಯ್ಕೆ ಮಾಡಿಕೊಳ್ಳಬೇಕು ಎಂದುಕೊಂಡಿತ್ತು. ಗೃಹ ಸಚಿವ ರಾಜ್‍ನಾಥ್ ಸಿಂಗ್ ಅವರ ಹೆಸರು ಕೆಲ ತಿಂಗಳು ಚಾಲ್ತಿಯಲ್ಲಿತ್ತು. ಅದರೆ ಕೊನೆಗೆ ಪ್ರಧಾನಿ ಮೋದಿ ಅವರ ಹೆಸರಲ್ಲೇ ಚುನಾವಣೆ ಎದುರಿಸುವುದು ಸೂಕ್ತ ಎಂದು ನಿರ್ಧಾರವಾಯ್ತು.
Advertisement
90ರ ದಶಕದ ಕೊನೆಯಲ್ಲಿ ಅಂದಿನ ಪ್ರಧಾನಿ ವಾಜಪೇಯಿ ಅವರೊಂದಿಗೆ ಜಗಳವಾಡಿಕೊಂಡ ಕಲ್ಯಾಣ್ ಸಿಂಗ್ ಬಿಜೆಪಿ ತೊರೆಯಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು. ಇದೇ ವೇಳೆ ಪತ್ರಕರ್ತರೊಬ್ಬರು ನಿಮ್ಮ ಮುಂದಿನ ನಡೆ ಏನು ಎಂದು ಕಲ್ಯಾಣ್ ಸಿಂಗ್ ಅವರನ್ನು ಕೇಳಿದಾಗ, ಕಲ್ಯಾಣ್ ಸಿಂಗ್ ವೇಗವಾಗಿ ಮಾತನಾಡಬೇಕು ಹಾಗೂ ಕಲ್ಯಾಣ್ ಸಿಂಗ್ ಜಾತಿ ಮಾತನಾಡಬೇಕು(ಕಲ್ಯಾಣ್ ಸಿಂಗ್ ಮಸ್ಟ್ ಸ್ಪೀಕ್ ಫಾಸ್ಟ್, ಕಲ್ಯಾಣ್ ಸಿಂಗ್ ಮಸ್ಟ್ ಸ್ಪೀಕ್ ಕ್ಯಾಸ್ಟ್) ಎಂಬ ಶೀರ್ಷಿಕೆ ಹೊಂದಿದ್ದ ರಾಷ್ಟ್ರೀಯ ಪತ್ರಿಕೆಯೊಂದರ ರಾಜಕೀಯ ವಿಶ್ಲೇಷಣೆಯನ್ನ ಅವರು ಉಲ್ಲೇಖಿಸಿದ್ರು.
ಇದೀಗ 2017ರ ಚುನಾವಣೆಯಲ್ಲಿ ಜಯಭೇರಿ ಬಾರಿಸಿರೋ ಬಿಜೆಪಿಗೆ ಉತ್ತರಪ್ರದೇಶದಲ್ಲಿ ಸಾಮಾಜಿಕವಾಗಿ ಸೂಕ್ತವಾದ ತಂತ್ರಗಾರಿಕೆ ರೂಪಿಸಲು ದಶಕಗಳೇ ಬೇಕಾಯ್ತು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.