ಬೆಂಗಳೂರು: ಜೈಲು ಸೇರಿರುವ ನಟ ದರ್ಶನ್ ವಿರುದ್ಧ ಅತಿ ದೊಡ್ಡ ಸಾಕ್ಷ್ಯ ವಿಧಿ ವಿಜ್ಞಾನ ಪ್ರಯೋಗಾಲಯ (FSL) ವರದಿಯಲ್ಲಿ ಬಯಲಾಗಿದೆ. ರೇಣುಕಾಸ್ವಾಮಿ ಹತ್ಯೆಯಾದ ಸಮಯದಲ್ಲಿ ದರ್ಶನ್ (Darshan) ಧರಿಸಿದ್ದ ಬಟ್ಟೆಗಳ ಮೇಲೆ ರಕ್ತದ ಕಲೆಗಳಿರುವುದು ಸಾಬೀತಾಗಿದೆ. ಆದ್ರೆ ಕೊಲೆ ನಡೆದು ದಿನಗಳೇ ಕಳೆದಿತ್ತು. ಬಟ್ಟೆಯನ್ನ ಒಗೆದು ಒಣಹಾಕಿದ್ದರು, ಆದಾಗ್ಯೂ ಬಟ್ಟೆಯಲ್ಲಿ ರಕ್ತದ ಗುರುತು ಪತ್ತೆಯಾಗಿದ್ದು ಹೇಗೆ ಎಂಬುದು ಭಾರೀ ಕುತೂಹಲ ಮೂಡಿಸಿದೆ.
ಈ ಪ್ರಕರಣದಲ್ಲಿ ಸಂತ್ರಸ್ತನ ಅಪಹರಣದಿಂದ ಹಿಡಿದು, ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿ ಮೋರಿಯೊಂದಕ್ಕೆ ಎಸೆದು ಕೊನೆಗೆ ಸಾಕ್ಷಿ ನಾಶಕ್ಕೆ ನಡೆಸಿದ ಯತ್ನದವರೆಗೂ ಪ್ರಕರಣ ರೋಚಕತೆಯಿಂದ ಕೂಡಿದೆ. ಒಂದು ಉದ್ದೇಶಪೂರ್ವಕ ಅಥವಾ ಪೂರ್ವನಿಯೋಜಿತ ಹಿಂಸೆಯು ಕೊಲೆಯಲ್ಲಿ ಅಂತ್ಯವಾದಾಗ, ಆರೋಪಿಗಳಿಗೆ ಸಾಕ್ಷ್ಯ ನಾಶವೇ ಪ್ರಮುಖ ಗುರಿಯಾಗಿರುತ್ತದೆ. ಈ ಪ್ರಕರಣದಲ್ಲೂ ಅಂತಹದ್ದೇ ಯತ್ನ ನಡೆದಿತ್ತು. ಆದರೆ ಪೊಲೀಸರು ಮತ್ತು ತನಿಖಾ ತಂಡದ ಎಚ್ಚರಿಕೆ ನಡೆ, ಸಮಯ ಪ್ರಜ್ಞೆಯಿಂದ ಸಾಕ್ಷ್ಯ ನಾಶ ಸಾಧ್ಯವಾಗಿಲ್ಲ. ಅದಕ್ಕಾಗಿಯೇ ವಿಧಿವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳ ತಂಡ ಲೂಮಿನಲ್ ಟೆಸ್ಟ್ (Luminol test) ನಡೆಸಿತ್ತು.
ಕೊಲೆ ನಡೆದ ಸಂದರ್ಭದಲ್ಲಿ ದರ್ಶನ್ ಧರಿಸಿದ್ದರು ಎನ್ನಲಾದ ಬ್ಲೂ ಜೀನ್ಸ್ ಹಾಗೂ ಕಪ್ಪು ಬಣ್ಣದ ರೌಂಡ್ ನೆಕ್ ಟೀ ಶರ್ಟ್ ಮೇಲೆ ಅಧಿಕಾರಿಗಳು ಲೂಮಿನಲ್ ಟೆಸ್ಟ್ ಪ್ರಯೋಗ ಮಾಡಿದ್ದರು. ಇದರಿಂದ ರಕ್ತದ ಗುರುತುಗಳಿರುವುದು ಪತ್ತೆಯಾಯಿತು. ಅಷ್ಟಕ್ಕೂ ಲೂಮಿನಲ್ ಟೆಸ್ಟ್ ಅಂದ್ರೆ ಏನು? ಪರೀಕ್ಷೆ ಮಾಡುವುದು ಹೇಗೆ? ಯಾವ್ಯಾವ ಪ್ರಕರಣಗಳಲ್ಲಿ ಲೂಮಿನಲ್ ಟೆಸ್ಟ್ ನಡೆಯುತ್ತೆ? ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ… ಇದನ್ನೂ ಓದಿ: ಜಾಮೀನು ನಿರಾಕರಿಸುವ ಮೂಲಕ ಕೆಳ ಹಂತದ ನ್ಯಾಯಲಯಗಳು ಸುರಕ್ಷಿತ ಆಟವಾಡುತ್ತಿವೆ: ಸುಪ್ರೀಂ ಆಕ್ರೋಶ
ಏನಿದು ಲೂಮಿನಲ್ ಪರೀಕ್ಷೆ?
ರಕ್ತದ ಕಲೆ ಅಂಟಿದ ವಸ್ತು ಅಥವಾ ಜಾಗವನ್ನು ಸ್ವಚ್ಛಗೊಳಿಸಿದರೂ, ಅದರಲ್ಲಿ ಕಲೆ ಇರುವುದನ್ನು ಬಹಿರಂಗಪಡಿಸುವ ಒಂದು ಪರೀಕ್ಷೆಯೇ ಲೂಮಿನಲ್. ರಕ್ತದಂತಹ ಕೆಲವು ಸಂಯುಕ್ತಗಳೊಂದಿಗೆ ಲೂಮಿನಲ್ ಸಂಪರ್ಕಕ್ಕೆ ಬಂದರೆ ಬೆಳಕನ್ನು ಹೊಮ್ಮಿಸುತ್ತದೆ. ಇದು ಬೆಳಕು ಹೊಮ್ಮಿಸುವ ಅಷ್ಟು ಭಾಗವೂ ರಕ್ತದ ಕಲೆ ಎಂದೇ ಅರ್ಥ. ‘ಲೂಮಿನಲ್’ ಪರಿಣಾಮಕಾರಿ ರಸಾಯನಶಾಸ್ತ್ರ ವ್ಯವಸ್ಥೆಯಾಗಿದೆ. ಇದನ್ನೂ ಓದಿ: Bangladesh Violence | 7 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್
ಪರೀಕ್ಷೆ ಮಾಡುವುದು ಹೇಗೆ?
ರಕ್ತದ ಕಲೆ ಅಂಟಿದ ವಸ್ತುವನ್ನು ಚೆನ್ನಾಗಿ ತೊಳೆದಿಟ್ಟರೆ ಮುಗಿಯಿತು. ಆಗ ಬರಿಗಣ್ಣಿಗೆ ರಕ್ತದ ಕಲೆ ಕಾಣುವುದಿಲ್ಲ. ಬಚಾವ್ ಆಗಬಹುದು ಎಂದು ಅನೇಕರು ಭಾವಿಸುತ್ತಾರೆ. ಆದರೆ ಅಪರಾಧಕ್ಕೆ ಬಳಸಿದ ವಸ್ತುವನ್ನು ಶುಚಿಗೊಳಿಸಿ ಇಟ್ಟರೂ, ರಕ್ತದ ಕಲೆ ಗುರುತು ಪತ್ತೆಗೆ ಲೂಮಿನಲ್ ಸಹಾಯ ಮಾಡುತ್ತದೆ. ಇದು ಔಷಧಿ ಸಿಂಪಡಣೆ ಮಾದರಿಯಲ್ಲಿ ಇರುತ್ತದೆ. ರಕ್ತದ ಕಲೆ ಇರುವ, ಸ್ವಚ್ಛಗೊಳಿಸಿದ ವಸ್ತು ಅಥವಾ ಜಾಗಕ್ಕೆ ಇದನ್ನು ಸಂಪಡಿಸಿದರೆ ಸಾಕು. ಎಷ್ಟು ವ್ಯಾಪ್ತಿಯಲ್ಲಿ ರಕ್ತ ಕಲೆ ಆಗಿರುತ್ತದೆಯೋ ಅಲ್ಲೆಲ್ಲ ಬೆಳಕು ಪ್ರತಿಫಲಿಸುತ್ತದೆ. ಇದನ್ನೂ ಓದಿ: ಸಮಂತಾ ಪ್ರಪೋಸ್ ಮಾಡಿದ ದಿನಾಂಕದಂದೇ ಶೋಭಿತಾಗೆ ರಿಂಗ್ ತೊಡಿಸಿದ ನಾಗಚೈತನ್ಯ
ಯಾವ್ಯಾವ ಪ್ರಕರಣಗಳಲ್ಲಿ ಲೂಮಿನಲ್ ಟೆಸ್ಟ್ ನಡೆಯುತ್ತೆ?
ಹಿಟ್ ಆ್ಯಂಡ್ ರನ್ ಕೇಸ್, ಕೊಲೆ ಪ್ರಕರಣಗಳಲ್ಲಿ ಹೆಚ್ಚಾಗಿ ಈ ಪರೀಕ್ಷೆ ಮಾಡಲಾಗುತ್ತದೆ. ಅಪಘಾತ ಮಾಡಿದ ವಾಹನಗಳ ಚಕ್ರಗಳಿಗೆ ಅಂಟಿದ ರಕ್ತವನ್ನು ಮೃತ ವ್ಯಕ್ತಿಯ ರಕ್ತಕ್ಕೆ ಹೋಲಿಕೆ ಮಾಡಿ ಎಫ್‌ಎಸ್‌ಎಲ್ ತಜ್ಞರು ವರದಿ ನೀಡುತ್ತಾರೆ. ಈ ಪರೀಕ್ಷೆಯಲ್ಲಿ ರಕ್ತದ ಮಾದರಿಗೆ ಹೋಲಿಕೆಯಾದರೆ ಅದು ಮಹತ್ವದ ಪುರಾವೆ ಆಗಲಿದೆ. ಇದನ್ನೂ ಓದಿ: ಧಾರ್ಮಿಕ ಕಾರ್ಯಕ್ರಮದ ಫ್ಲೆಕ್ಸ್‌ನಲ್ಲಿ ಮಾಜಿ ನೀಲಿ ತಾರೆ ಮಿಯಾ ಖಲೀಫಾ ಫೋಟೋ – ಮುಂದೇನಾಯ್ತು?