ಬೆಂಗಳೂರು: ಸೂಪರ್ ಸ್ಟಾರ್ ಉಪೇಂದ್ರ ಅವರು ಅಮೆರಿಕದ ಆಡಳಿತ ವ್ಯವಸ್ಥೆಗೆ ಸಂಬಂಧ ಪಟ್ಟಂತೆ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿದೆ.
ಅಮೆರಿಕದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಿದ್ದ ವೇಳೆ ಅವರು ಅಲ್ಲೇ ಇದ್ದ ಬಾಲ್ಯದ ಗೆಳೆಯ ಪ್ರಮೋದ್ ಮನೆಗೆ ತೆರಳಿದ್ದರು. ಈ ವೇಳೆ ಅಲ್ಲಿನ ಆಡಳಿತ ವ್ಯವಸ್ಥೆಯ ಬಗ್ಗೆ ವಿಡಿಯೋ ಮಾಡಿ ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದು, ಸದ್ಯ ಈ ವಿಡಿಯೋ ಅಭಿಮಾನಿಗಳ ಮೆಚ್ಚುಗೆಯನ್ನು ಪಡೆದುಕೊಂಡಿದೆ.
Advertisement
Advertisement
ವಿಡಿಯೋದಲ್ಲಿ ಏನಿದೆ?
ಟೆಕ್ಸಾಸ್‍ನ ಡಾಲರ್ಸ್ ಏರಿಯಾದಲ್ಲಿರುವ ಪ್ರಮೋದ್ ಅವರು ಅಲ್ಲಿನ ಆಡಳಿತ ವ್ಯವಸ್ಥೆ ಹೇಗೆ ನಡೆಯುತ್ತಿದೆ ಎನ್ನುವುದನ್ನು ಸವಿವರವಾಗಿ ವಿವರಿಸಿದ್ದಾರೆ. ಹೇಗೆ ನಮ್ಮಲ್ಲಿ ಶಾಸಕರು ಇರುತ್ತಾರೋ ಅದೇ ರೀತಿಯಾಗಿ ನಮ್ಮ ಟೆಕ್ಸಾಸ್ ಪ್ರದೇಶಕ್ಕೆ ಒಬ್ಬರು ಪ್ರತಿನಿಧಿ ಇದ್ದಾರೆ. ಅವರು ತನ್ನ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ವರದಿಯನ್ನು ಪತ್ರದ ಮೂಲಕ ಕಳುಹಿಸುತ್ತಾರೆ.
Advertisement
ಈ ಪತ್ರದಲ್ಲಿ ಶಿಕ್ಷಣ, ಮಕ್ಕಳ ರಕ್ಷಣೆ, ಇತ್ಯಾದಿ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸದ ಮಾಹಿತಿ ಇರುತ್ತದೆ. ಪ್ರತಿ ಆರು ತಿಂಗಳಿಗೆ ಮನೆಗೆ ಪತ್ರವನ್ನು ಕಳುಹಿಸುತ್ತಾರೆ. ಒಂದು ವೇಳೆ ಈ ಪತ್ರದಲ್ಲಿರುವ ವಿಚಾರದ ಬಗ್ಗೆ ಆಕ್ಷೇಪಗಳಿದ್ದಲ್ಲಿ ಅವರ ಹತ್ತಿರ ಹೋಗಿ ಮಾತನಾಡಬಹುದು. ಒಂದು ವೇಳೆ ತಾನು ಕೈಗೊಂಡ ನಿರ್ಧಾರದಲ್ಲಿ ಬದಲಾವಣೆಯಾಗಬೇಕಾದರೆ ಜನರ ಅಭಿಪ್ರಾಯವನ್ನು ಆಲಿಸಿ ತಮ್ಮ ನಿರ್ಧಾರವನ್ನು ಬದಲಾವಣೆ ಮಾಡುತ್ತಾರೆ. ಅಷ್ಟೇ ಅಲ್ಲದೇ ಶಾಸನ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ನಡೆಸುತ್ತಾರೆ ಎಂದು ವಿವರಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.facebook.com/nimmaupendra/videos/880757252119370/