ಲಕ್ನೋ: ಸಾಮಾನ್ಯ ನಾಗರಿಕ ವೇಷ ಧರಿಸಿ ಉತ್ತರ ಪ್ರದೇಶದ (Uttar Pradesh) ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಸ್ಥಳೀಯ ಪೊಲೀಸರ ಕಾರ್ಯ ವೈಖರಿಯನ್ನು ಪರೀಕ್ಷಿಸಿದ್ದು, ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಗುರುವಾರ, ಔರೈಯಾ ಜಿಲ್ಲೆಯ ಐಪಿಎಸ್ (ಭಾರತೀಯ ಪೊಲೀಸ್ ಸೇವೆ) ಅಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರಾಗಿರುವ ಚಾರು ನಿಗಮ್ ಅವರು, ದುಪಟ್ಟಾವನ್ನು ತಲೆಯ ಮೇಲೆ ಸುತ್ತಿಕೊಂಡು, ಸನ್ ಗ್ಲಾಸ್ ಹಾಗೂ ಮಾಸ್ಕ್ ಧರಿಸಿ ಮುಖವನ್ನು ಸಂಪೂರ್ಣವಾಗಿ ಮಾರೆಮಾಚಿಕೊಂಡು ಬಂದಿದ್ದರು. ಇದನ್ನೂ ಓದಿ: ಈ ಹೊತ್ತಲ್ಲಿ ಯಾಕೋ ಬಂದಿದ್ದೀಯಾ ಅಂತಾ ಚಂದ್ರುನನ್ನು ವಿನಯ್ ಗುರೂಜಿ ಪ್ರಶ್ನಿಸಿದ್ರು: ಆಶ್ರಮದ ಸಿಬ್ಬಂದಿ
Advertisement
जनपदीय पुलिस के रिस्पांस टाइम व सतर्कता को चेक करने हेतु पुलिस अधीक्षक औरैया @ipsCharuNigam ने स्वयं की पहचान छुपाते हुए सुनसान रोड पर तमंचे के बल पर बाइक सवार अज्ञात व्यक्तियों द्वारा झूठी लूट की सूचना कंट्रोल रूम व डायल112 पर दी गयी जिसमे जनपदीय पुलिस की कार्यवाही संतोषजनक रही। pic.twitter.com/I4n3yJoUHP
— Auraiya Police (@auraiyapolice) November 3, 2022
Advertisement
ಸುಲಿಗೆಗೆ ಒಳಗಾದ ಸಂತ್ರಸ್ತೆ ರೀತಿ ನಟಿಸಿದ ಚಾರು ನಿಗಮ್ ಅವರು, 112ಗೆ ಕರೆ ಮಾಡಿ ನನ್ನ ಹೆಸರು ಸರಿತಾ ಚೌಹಾಣ್, ದರೋಡೆಕೋರರರು ನನ್ನನ್ನು ಹಿಂಬಾಲಿಸಿಕೊಂಡು ಬಂದು ದರೋಡೆ ಮಾಡಿದ್ದಾರೆ. ಎಲ್ಲಿದ್ದರೂ ಐದು ನಿಮಿಷದಲ್ಲಿ ಬಂದು ಸಹಾಯ ಮಾಡುವಂತೆ ಮನವಿ ಮಾಡಿದರು. ಕೂಡಲೇ ಕರೆಗೆ ಸ್ಪಂದಿಸಿ ಮೂವರು ಪೊಲೀಸರು ಸಹಾಯ ಮಾಡಲು ಸ್ಥಳಕ್ಕೆ ಧಾವಿಸಿದರು. ಮತ್ತು ಘಟನೆ ಸಂಬಂಧ ಮಹಿಳೆಯನ್ನು ವಿಚಾರಣೆ ನಡೆಸಿದರು. ಆದರೆ ಆ ಮಹಿಳೆ ತಮ್ಮ ಬಾಸ್ ಎಂಬುವುದು ಪೊಲೀಸರಿಗೆ ತಿಳಿದಿರಲಿಲ್ಲ. ಸುಮಾರು ಒಂದು ಗಂಟೆಗಳ ಕಾಲ ವಾಹನಗಳನ್ನು ತಪಾಸಣೆಗೆ ಒಳಪಡಿಸಿದ ನಂತರ ಸಂತ್ರಸ್ತ ಮಹಿಳೆ, ತಾವು ಹಿರಿಯ ಅಧಿಕಾರಿ ಎಂಬ ಸತ್ಯ ತಿಳಿದು ಸ್ಥಳೀಯ ಪೊಲೀಸರ ತಂಡ ಶಾಕ್ ಆಗಿದ್ದಾರೆ.
Advertisement
ಸ್ಥಳೀಯ ಪೊಲೀಸರ ಕಾರ್ಯ ವೈಖರಿಯನ್ನು ಪರಿಶೀಲನೆ ನಡೆಸಲು ಬಂದಿದ್ದ ಚಾರು ನಿಗಮ್ ಅವರು, ಅವರ ಚಲನವಲನ, ಸಮಯಪ್ರಜ್ಞೆಯನ್ನು ನೋಡಿ ಸಮಾಧಾನರಾಗಿದ್ದಾರೆ. ಈ ವೀಡಿಯೋವನ್ನು ಔರೈಯಾ ಪೊಲೀಸರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ನಿರ್ಜನ ರಸ್ತೆಯಲ್ಲಿ ಚಾರು ನಿಗಮ್ ಫೋನ್‍ನಲ್ಲಿ ಮಾತನಾಡುತ್ತಿರುವ ಫೋಟೋ ಹಾಗೂ ವೀಡಿಯೋವನ್ನು ಕಾಣಬಹುದಾಗಿದೆ.
Advertisement
ಪರೀಕ್ಷೆ ನಡೆಸಲು ಸರಿಯಾದ ಸ್ಥಳವನ್ನು ಹುಡುಕುತ್ತಿರುವ ಅಧಿಕಾರಿ ಬೈಕ್‍ನಲ್ಲಿ ಸವಾರಿ ಮಾಡುತ್ತಿರುವ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಈ ವೀಡಿಯೋಗೆ ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಬಿಹಾರವನ್ನು ಪಾಕಿಸ್ತಾನ ಮಾಡಬೇಡಿ – ನಿತೀಶ್ ಕುಮಾರ್ ವಿರುದ್ಧ ಬಿಜೆಪಿ ಗರಂ