ಸಿಯೋಲ್: 179 ಮಂದಿಯನ್ನು ಬಲಿ ಪಡೆದ ದಕ್ಷಿಣ ಕೊರಿಯಾ (South Korea Plane) ಡೆಡ್ಲಿ ವಿಮಾನ ಅಪಘಾತದಲ್ಲಿ ಇಬ್ಬರು ಬದುಕುಳಿದಿರುವುದೇ ರೋಚಕ. ಅವರು ಹೇಗೆ ಬದುಕುಳಿದರು ಎಂಬುದಕ್ಕೆ ಕಾರಣ ನೀಡಲಾಗಿದೆ.
ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಜೆಜು ಏರ್ ವಿಮಾನವು ರನ್‌ವೇಯಲ್ಲಿ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ 181 ಜನರ ಪೈಕಿ 179 ಜನರನ್ನು ಕೊಂದ ನಂತರ ಹೃದಯವಿದ್ರಾವಕ ದೃಶ್ಯಗಳು ತೆರೆದುಕೊಂಡವು. ದುರಂತದಲ್ಲಿ ಬದುಕುಳಿದಿದ್ದು ಇಬ್ಬರು ಫ್ಲೈಟ್ ಅಟೆಂಡೆಂಟ್‌ಗಳು ಪ್ರಯಾಣಿಕರು ಮಾತ್ರ. ಅವರು ವಿಮಾನದ ಹಿಂಭಾಗದ ಬಾಲ ವಿಭಾಗದಲ್ಲಿ ಕುಳಿತಿದ್ದರಿಂದ ಮಾರಣಾಂತಿಕ ಅಪಘಾತದಿಂದ ಬದುಕುಳಿದರು. ಇದನ್ನೂ ಓದಿ: 179 ಮಂದಿ ಸಾವು ಪ್ರಕರಣ – ದೇಶದ ಎಲ್ಲಾ ಬೋಯಿಂಗ್ 737-800 ವಿಮಾನ ಪರೀಕ್ಷೆಗೆ ಮುಂದಾದ ದ. ಕೊರಿಯಾ
Advertisement
Advertisement
TIME ಮ್ಯಾಗಜೀನ್‌ನ 2015 ರ ಅಧ್ಯಯನವು ಅಪಘಾತಗಳ ಸಂದರ್ಭದಲ್ಲಿ ಹಿಂಭಾಗದ ಆಸನಗಳು ಅತ್ಯಂತ ಸುರಕ್ಷಿತವಾಗಿದೆ ಎಂದು ಕಂಡುಹಿಡಿದಿದೆ. ಮಧ್ಯಮ ಮೂರನೇ (ಶೇ.39) ಮತ್ತು ಮುಂಭಾಗಕ್ಕೆ (ಶೇ.38) ಹೋಲಿಸಿದರೆ, ವಿಮಾನದ ಹಿಂಭಾಗದ ಸೀಟುಗಳು ಶೇ.32 ರಷ್ಟು ಸಾವಿನ ಪ್ರಮಾಣವನ್ನು ಹೊಂದಿವೆ ಎಂದು ವರದಿ ಸೂಚಿಸಿದೆ.
Advertisement
ಇಬ್ಬರು ಬದುಕುಳಿದವರನ್ನು 32 ವರ್ಷದ ಲೀ ಮತ್ತು 25 ವರ್ಷದ ಕ್ವಾನ್ ಎಂದು ಗುರುತಿಸಲಾಗಿದ್ದು, ಸುಟ್ಟ ವಿಮಾನದ ಬಾಲ ಭಾಗದಿಂದ ಅವರನ್ನು ರಕ್ಷಿಸಲಾಗಿದೆ. ಆಸ್ಪತ್ರೆಯಲ್ಲಿದ್ದ ಲೀ, ‘ಏನಾಯಿತು’, ‘ನಾನೇಕೆ ಇಲ್ಲಿದ್ದೇನೆ’ ಎಂದು ಪ್ರಶ್ನಿಸಿದ್ದಾರೆ. ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಅವರು ಎಡ ಭುಜ ಮತ್ತು ತಲೆ ಭಾಗಕ್ಕೆ ಪೆಟ್ಟಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಕೊರಿಯಾ | ಲ್ಯಾಂಡಿಂಗ್ ಗೇರ್ ವೈಫಲ್ಯದಿಂದ ವಿಮಾನ ಪತನ – 179 ಮಂದಿ ದುರ್ಮರಣ
Advertisement
ಬೋಯಿಂಗ್ 737-800 ವಿಮಾನವು ಬ್ಯಾಂಕಾಕ್‌ನಿಂದ ಮುವಾನ್‌ಗೆ ಪ್ರಯಾಣ ಬೆಳೆಸಿ, ಬೆಳಿಗ್ಗೆ 9 ಗಂಟೆಯ ಸಮಯದಲ್ಲಿ ಇಳಿಯಲು ಪ್ರಯತ್ನಿಸಿದಾಗ ಕಾಂಪೌಂಡ್‌ಗೆ ಅಪ್ಪಳಿಸಿದೆ. ಪರಿಣಾಮ ಬೆಂಕಿ ಹೊತ್ತಿಕೊಂಡು ಪ್ರಯಾಣಿಕರು ಮೃತಪಟ್ಟಿದ್ದಾರೆ.