ತುಮಕೂರು: ಡಿಸಿಎಂ ಜಿ.ಪರಮೇಶ್ವರ್ ಅವರ ಸ್ವಕ್ಷೇತ್ರ ಕೊರಟಗೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ಆಯಾಗಳೇ ಡಾಕ್ಟರ್ ಆಗಿ ಪರಿವರ್ತನೆಯಾಗಿದ್ದಾರೆ. ರೋಗಿಗಳಿಗೆ ಆಯಾಗಳೇ ಇಂಜೆಕ್ಷನ್ ಹಾಗೂ ಗ್ಲೂಕೋಸ್ ನೀಡುತ್ತಿರುವ ವಿಡಿಯೋ ಇದಕ್ಕೆ ಸಾಕ್ಷಿಯಾಗಿದೆ.
ಯಾವುದೇ ತರಬೇತಿ ಇಲ್ಲದ ಆಯಾಗಳು ನೇರವಾಗಿ ರೋಗಿಗಳಿಗೆ ಇಂಜೆಕ್ಷನ್, ಗ್ಲೂಕೋಸ್ ಕೊಡುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಸಂಬಂಧಿಯೊಬ್ಬರು ಆಯಾಗಳು ಸೂಜಿ ಚುಚ್ಚಿ ಗ್ಲೂಕೋಸ್ ಬಾಟಲಿ ಹಾಕುತ್ತಿರುವ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದ್ದಾರೆ.
Advertisement
Advertisement
ರೋಗಿಗಳಿಗೆ ಗ್ಲೂಕೋಸ್, ಇಂಜೆಕ್ಷನ್ ಕೊಡುವ ಕೆಲಸವನ್ನು ಡಾಕ್ಟರ್ ಅಥವಾ ನರ್ಸಗಳು ಮಾಡಬೇಕು. ಆದರೆ ಎಲ್ಲವನ್ನೂ ಬಿಟ್ಟು ಹೌಸ್ ಕೀಪಿಂಗ್ ಆಯಾಗಳು ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿರುವುದು ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುತ್ತಿರುವ ಗುಣಮಟ್ಟದ ಚಿಕಿತ್ಸೆಗೆ ಹಿಡಿದ ಕೈಗನ್ನಡಿಯಾಗಿದೆ.
Advertisement
Advertisement
ಇಲ್ಲಿರುವ ನರ್ಸಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ತಮ್ಮ ಕೆಲಸವನ್ನು ಆಯಾಗಳ ಮೇಲೆ ಹಾಕಿ ತಾವು ಹಾಯಾಗಿದ್ದಾರೆ. ಇದನ್ನೆಲ್ಲಾ ಪ್ರಶ್ನಿಸಬೇಕಾದ ಡಾಕ್ಟರ್ ಸಹ ತೆಪ್ಪಗಿರುತ್ತಾರೆ. ರಾಜ್ಯದ ಉಪಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲೇ ಆಸ್ಪತ್ರೆಯ ಸ್ಥಿತಿ ಹೀಗಾದರೆ ಇನ್ನುಳಿದ ಆಸ್ಪತ್ರೆಗಳ ಗತಿ ಉಹಿಸಲು ಸಾಧ್ಯವೇ? ಎನ್ನುವ ಪ್ರಶ್ನೆ ಸದ್ಯ ಸಾರ್ವಜನಿಕರಲ್ಲಿ ಹುಟ್ಟಿಕೊಂಡಿದೆ.