ಮುಂಬೈ: ಮುಂಬೈನ ಕೊಳೆಗೇರಿ ಅಭಿವೃದ್ಧಿ ಸಂಸ್ಥೆಯಾದ ಕೊಳೆಗೇರಿ ಪುನರ್ವಸತಿ ಪ್ರಾಧಿಕಾರದ ಯೋಜನೆಗಳಲ್ಲಿ ವಸತಿ ಜಿಹಾದ್ ನಡೆಯುತ್ತಿದೆ ಎಂದು ಆರೋಪಿಸಿರುವ ಶಿವಸೇನಾ ನಾಯಕ ಸಂಜಯ್ ನಿರುಪಮ್ ಅವರು ಮಹಾರಾಷ್ಟ್ರ ವಸತಿ ಸಚಿವರೂ ಆಗಿರುವ ಡಿಸಿಎಂ ಏಕನಾಥ್ ಶಿಂಧೆ ಮತ್ತು ಕೊಳೆಗೇರಿ ಪುನರ್ವಸತಿ ಪ್ರಾಧಿಕಾರದ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಎಸ್‌ಆರ್‌ಎ ಯೋಜನೆಗಳಲ್ಲಿ ಕೆಲವು ಮುಸ್ಲಿಂ ಡೆವಲಪರ್‌ಗಳು ಹಿಂದೂಗಳು ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸುತ್ತಿದ್ದಾರೆ. ಅವರು ಎಸ್‌ಆರ್‌ಎ ಫ್ಲಾಟ್‌ಗಳು ಅಥವಾ ಅಂಗಡಿಗಳು ಪಡೆಯಲು ಅನರ್ಹರು ಎಂದು ಹೇಳುತ್ತಿದ್ದಾರೆ. ಒಂದು ಸಮುದಾಯಕ್ಕೆ ಯೋಜನೆಗಳನ್ನು ನೀಡುವ ಮೂಲಕ ‘ವಸತಿ ಜಿಹಾದ್’ ಅನ್ನು ಜಾರಿಗೆ ತರುತ್ತಿದ್ದಾರೆ. ಕೆಲವು ಪ್ರದೇಶಗಳ ಜನಸಂಖ್ಯೆಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ನಿರುಪಮ್ ಪತ್ರದಲ್ಲಿ ಆರೋಪಿಸಿದ್ದಾರೆ.
Advertisement
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯ ಗೆಲುವನ್ನು ಶ್ಲಾಘಿಸಿದ ಸಂಜಯ್ ನಿರುಪಮ್, ರಾಷ್ಟ್ರ ರಾಜಧಾನಿಯಲ್ಲಿ ಐತಿಹಾಸಿಕ ಅಧಿಕಾರ ಬದಲಾವಣೆಯಾಗಿದೆ ಎಂದು ಹೇಳಿದರು. ಗೆಲುವಿಗೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಪಕ್ಷದ ದುರಾಡಳಿತ ಕಾರಣ ಎಂದು ತಿಳಿಸಿದ್ದಾರೆ.
Advertisement
ದೆಹಲಿಯಲ್ಲಿ ಐತಿಹಾಸಿಕ ಅಧಿಕಾರ ಬದಲಾವಣೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಪರಿಣಾಮಕಾರಿ ಮತ್ತು ಯಶಸ್ವಿ ಚುನಾವಣಾ ಪ್ರಚಾರವನ್ನು ನಡೆಸಿತು. ಇದರ ಪರಿಣಾಮವಾಗಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ನೇತೃತ್ವದ ದುರಾಡಳಿತ ಕೊನೆಗೊಂಡಿತು ಎಂದು ನಿರುಪಮ್ ಹೇಳಿದ್ದಾರೆ.