– ವಾರಪೂರ್ತಿ 20 ರೂಪಾಯಿಯಲ್ಲೇ ಬದುಕು
– ಅನ್ನ-ಆಹಾರ ನೀಡದೆ ಅತ್ತೆ-ಪತಿ ಕಿರುಕುಳ
ಚಿಕ್ಕಮಗಳೂರು: 20 ರೂಪಾಯಿಯಲ್ಲಿ ಆಕೆ ವಾರಪೂರ್ತಿ ಬದುಕಬೇಕು. ಅದು ಮನೆಯಿಂದ ಹೊರಬರದಂತೆ. ಮನೆಯಲ್ಲಿ ರೇಷನ್ ಇದ್ರೆ ಅನ್ನ-ಆಹಾರ. ಇಲ್ಲದಿದ್ರೆ ಮನೆಯಲ್ಲಿ ಉಪವಾಸ.. ಅತ್ತೆ-ಗಂಡ ಹೋದಾಗಲೇ ಹೋದ್ರು, ಬಂದಾಗಲೇ ಬಂದ್ರು. ಮನೆಯಿಂದ ಹೋಗುವಾಗ ಮನೆಯಲ್ಲಿ ರೇಷನ್ ಎಲ್ಲಾ ಖಾಲಿ-ಖಾಲಿ. 3-4 ದಿನ ನೀರು ಕುಡಿದುಕೊಂಡೇ ಇರಬೇಕು. ಅದೂ ನೀರಿನ ಸಂಪರ್ಕ ಕಟ್ ಮಾಡಿರದಿದ್ರೆ. ಮನೆ ಕೆಲಸವೆಲ್ಲಾ ಮಾಡಬೇಕು. ಅಡುಗೆ-ಊಟ ಮಾಡುವಂತಿಲ್ಲ. ಒಂದೇ ಚೇರ್. ಅಲ್ಲೇ ಕೂರಬೇಕು. ಮಹಡಿ ಮೇಲೆ ಮಲಗಬೇಕು. ಇದು ಅವಿದ್ಯಾವಂತರ ಕಥೆಯಲ್ಲ. ವೈದ್ಯನೋರ್ವ (Doctor) ತನ್ನ ಪತ್ನಿಗೆ 4 ವರ್ಷದಿಂದ ಮಾಡಿರೋ ಉಪಚಾರ.. ಆ ಗೃಹಣಿಯ ಸೋಚನೀಯ ಕಥೆ ಕೇಳಿದ್ರೆ ನೀವು ಮರುಗದೇ ಇರಲಾರಿರಿ.. ಅದೆಲ್ಲಿ ಅಂತೀರಾ.. ಈ ಸ್ಟೋರಿ ನೋಡಿ..
Advertisement
ಆಸ್ಪತ್ರೆ ಬೆಡ್ ಮೇಲೆ ಕಣ್ಣೀರಿಡ್ತಿರೋ ಈಕೆ ಆ ವೈದ್ಯನ ಪತ್ನಿ.. ಈತನೇ ವೈದ್ಯ, ಆಕೆ ಗಂಡ ರವಿಕುಮಾರ್.. ಅಂದಹಾಗೇ, ಈಕೆ ಹೆಸ್ರು ವಿನುತಾ ರಾಣಿ. ವಯಸ್ಸು ಹತ್ರತ್ರ 45. ಚಿಕ್ಕಮಗಳೂರು (Chikkamagaluru) ನಗರದ ದೋಣಿಕಣ ನಿವಾಸಿ. 22 ವರ್ಷದ ಹಿಂದೆ ಡಾ.ರವಿಕುಮಾರ್ ಜೊತೆ ಮದುವೆ ಮಾಡಿಕೊಟ್ಟಿದ್ರು.. ಎಂಬಿಬಿಎಸ್ ಓದುತ್ತಿರೋ ಮಗನೂ ಇದ್ದಾನೆ. ಆದ್ರೆ, 4 ವರ್ಷದಿಂದ ಪತ್ನಿಗೆ ಮಾನಸಿಕ ಕಿರುಕುಳ ನೀಡ್ತಿರೋ ಪತಿಯಿಂದ ಈಕೆಗೆ ಗೃಹಬಂಧನಲ್ಲಿಟ್ಟಿದ್ದಾರೆ. ಇದನ್ನೂ ಓದಿ: ಶೇ.99 ರಷ್ಟು ಪುರುಷರದ್ದೇ ತಪ್ಪಿರುತ್ತದೆ – ಟೆಕ್ಕಿ ಅತುಲ್ ಆತ್ಮಹತ್ಯೆ ಕುರಿತು ಕಂಗನಾ ಪ್ರತಿಕ್ರಿಯೆ
Advertisement
Advertisement
ಮನೆಯ ಮೇಲಿನ ಮಹಡಿಯ ರೂಮಿನಲ್ಲೇ ಇರಬೇಕು. ಕೆಳಗೆ ಇಳಿಯುವಂತಿಲ್ಲ, ಕೆಳಗೆ ಬಂದರೂ ಮನೆ ಕೆಲಸ ಮಾಡಿ ಮತ್ತೆ ಮೇಲೆ ಹೋಗಬೇಕು. ಕೂರೋಕೆ ಒಂದು ಚೇರ್ ಕೊಟ್ಟಿದ್ದಾರೆ ಅಷ್ಟೇ. ಊಟ ಅವರು ಹಾಕಿದಾಗ. ಹಾಕಿದಷ್ಟು ಅಷ್ಟೆ. ಗಂಡ ಹಾಗೂ ಅತ್ತೆ ಊರಿಗೆ ಹೋದರೆ ಈಕೆಗೆ ಅವರು ಬರುವಷ್ಟು ದಿನ ಗೃಹ ದಿಗ್ಭಂದನ.. ಮನೆಯಿಂದ ಆಚೆ ಬರುವಂತಿಲ್ಲ. ಅವರು ಹೋಗುವಾಗ 20 ರೂಪಾಯಿ ಕೊಟ್ಟು ಹೋಗ್ತಾರೆ. ಅವರು ಬರುವಷ್ಟು ದಿನ ಮನೆಯಿಂದ ಹೊರ ಹೋಗದಂತೆ ಅದೇ 20 ರೂಪಾಯಿಯಲ್ಲಿ ಬದುಕಬೇಕು.. ಎಕ್ಸ್ ಪಾರ್ಟ್ ಡಿವೋರ್ಸ್ ಕೊಟ್ಟಿದ್ದೇನೆ ಎಂದು 4 ವರ್ಷದಿಂದ ಅನ್ನ-ಆಹಾರ ನೀಡದೆ ಗೃಹಬಂಧನದಲ್ಲಿಟ್ಟಿದ್ದಾನೆ ಅಂತ ವೈದ್ಯನ ಪತ್ನಿ ವಿನುತಾ ರಾಣಿ, ಆಕೆ ಸಹೋದರ ಆರೋಪಿಸಿದ್ದಾರೆ.
Advertisement
ಮನೆಯಲ್ಲೇ ದಿಗ್ಭಂದನ ಹಾಕಿರೋ ಡಾಕ್ಟ್ರು ಈಕೆಗೆ ಮೊಬೈಲ್ ಕೊಟ್ಟಿದ್ದಾರೆ. ಯೂಟ್ಯೂಬ್ ನೋಡೋದು ಬಿಟ್ಟು ಬೇರೇನೂ ಮಾಡಲು ಆಗಲ್ಲ. ದಿನಕ್ಕೆ ಒಂದು ಅಥವಾ ಎರಡು ಹೊತ್ತು ಊಟ ಕೊಡ್ತಾರೆ. ಅದು ಅವರು ಕೊಟ್ಟಷ್ಟು ಮಾತ್ರ ತಿನ್ನಬೇಕು. ಜಾಸ್ತಿ ಕೇಳಿದರೆ ಹೊಡೆಯೋದು, ತಲೆಯನ್ನ ಗೋಡೆಗೆ ಗುದ್ದೋದು, ಎದೆಗೆ ಕಾಲಲ್ಲಿ ಒದೆಯೋದು ಮಾಡ್ತಾರಂತೆ. ಕುತ್ತಿಗೆ ಹಿಸುಕಿ ಸಾಯಿ-ಸಾಯಿ ಎಂದು ಡಾಕ್ಟ್ರು ಹಾಗೂ ಆತನ ಅಮ್ಮ ಹೊಡೆಯುತ್ತಾರಂತೆ. ಊಟದಲ್ಲಿ ಸ್ಲೋ ಪಾಯಿಸನ್ ಹಾಕಿ ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದಾರೆ ಎಂದು ವಿನೂತರಾಣಿ ಸಹೋದರ ವಾಗೀಶ್ ಆರೋಪಿಸಿದ್ದಾರೆ. ಇದನ್ನೂ ಓದಿ: ಹನುಮಮಾಲಾ ವಿಸರ್ಜನೆ ಕಾರ್ಯಕ್ರಮಕ್ಕೆ ಕ್ಷಣಗಣನೆ – ಅಂಜನಾದ್ರಿ ಬೆಟ್ಟದಲ್ಲಿ ತಯಾರಿ
ಒಟ್ಟಾರೆ, ಸಪ್ತಪದಿ ತುಳಿದು ವರ್ಷಗಟ್ಟಲೇ ಸಂಸಾರದ ಮಾಡಿದ ವೈದ್ಯ ನಾಲ್ಕೇ ವರ್ಷಕ್ಕೆ ಸಾವಿನ ನರಕ ತೋರಿಸಿದ್ದಾನೆ. ಅತ್ತ ತಾಯಿ ಅಂತ ತಿಳಿದು ಗಂಡನ ಮನೆಗೆ ಬಂದಿದ್ದ ಅತ್ತೆ ಕೂಡ ಎಂದು ಅಮ್ಮನಾಗಲೇ ಇಲ್ಲ. ಇದ್ದೊಬ್ಬ ಮಗನೂ ಕೂಡ ಅಮ್ಮನ ಸಾವು ಬಯಸುತ್ತಿದ್ದಾನೆ ಅಂದ್ರೆ ಆಧುನಿಕ ಪ್ರಪಂಚದಲ್ಲಿ ಹಣ, ಅಧಿಕಾರ, ವಯಸ್ಸಿಗಷ್ಟೆ ಬೆಲೆಯೇ ಎಂಬ ಪ್ರಶ್ನೆ ಮೂಡೋದು ಸಹಜ. ಇದನ್ನೂ ಓದಿ: ನಾನು ಉಪೇಂದ್ರ ಅಭಿಮಾನಿ – ‘ಯುಐ’ ಸಿನಿಮಾಗೆ ಶುಭ ಹಾರೈಸಿದ ಆಮೀರ್ ಖಾನ್