ಚಿಕ್ಕಬಳ್ಳಾಪುರ: ಅಂತರ್ಜಾತಿ ಪ್ರೇಮ ವಿವಾಹವಾಗಿದ್ದ ಗೃಹಿಣಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚೇಳೂರಿನ ಚಾಕವೇಲುವಿನಲ್ಲಿ ನಡೆದಿದೆ. ಮೃತ ಮಹಿಳೆಯ ಕುಟುಂಬಸ್ಥರು ಆಕೆಯ ಗಂಡನ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ.
ಗ್ರಾಮದ ಅನಿತಾ (23) ಮೃತ ಮಹಿಳೆಯಾಗಿದ್ದಾಳೆ. ಬಾಗೇಪಲ್ಲಿಗೆ ಗಾರ್ಮೆಂರ್ಟ್ಸ್‌ಗೆ ಬರುತ್ತಿದ್ದ ಆಂಧ್ರಪ್ರದೇಶದ (Andhra Pradesh) ರಾಚವಾರಪಲ್ಲಿಯ ಅನಿತಾ ಮಣಿಕಂಠ ಎಂಬವನ ಜೊತೆ ಒಂದು ವರ್ಷದ ಹಿಂದೆ ಪ್ರೀತಿಸಿ ಮನೆಯವರು ವಿರೋಧದ ನಡುವೆ ದೇವಾಲಯದಲ್ಲಿ ಮದುವೆಯಾಗಿದ್ದರು. ಮದುವೆಯಾದ ಸ್ವಲ್ಪ ದಿನಗಳು ಕಾಲ ಚಿಕ್ಕಬಳ್ಳಾಪುರ ಮತ್ತು ಅನಿತಾಳ ತವರೂರಿನಲ್ಲಿ ವಾಸವಾಗಿದ್ದರು. ಇದನ್ನೂ ಓದಿ: ಪ್ರವಾದಿಯನ್ನು ಅವಮಾನಿಸಿದ್ದಕ್ಕೆ ಬಸ್ ನಿರ್ವಾಕನನ್ನೇ ಹೊಡೆದು ಕೊಂದ ಎಂಜಿನಿಯರಿಂಗ್ ವಿದ್ಯಾರ್ಥಿ!
ಆರು ತಿಂಗಳ ಹಿಂದೆ ದಂಪತಿ ಚಾಕುವೇಲುವಿಗೆ ಬಂದಿದ್ದರು. ಈ ವೇಳೆ ಮಣಿಕಂಠನ ತಾಯಿ ಸಾವಿತ್ರಮ್ಮ, ಅಕ್ಕ ಕುಸುಮ ಹಾಗೂ ಬಾವ ರಾಘವೇಂದ್ರ ಗಲಾಟೆ ಮಾಡಿ ಮನೆಯೊಳಗೆ ಸೇರಿಸಿಕೊಂಡಿರಲಿಲ್ಲ ಎನ್ನಲಾಗಿದೆ. ಇದರಿಂದ ಹಳೆಯ ಮನೆಯಲ್ಲಿ 6 ತಿಂಗಳ ಕಾಲ ವಾಸವಾಗಿದ್ದರು. ಈಗ ಇದ್ದಕ್ಕಿದ್ದಂತೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.
ಕುಟುಂಬಸ್ಥರ ಮಾತು ಕೇಳಿ ಅನಿತಾಳನ್ನು ಮಣಿಕಂಠ ಕೊಲೆ ಮಾಡಿದ್ದಾನೆ ಎಂದು ಮೃತಳ ತಾಯಿ ಚೇಳೂರು ಪೊಲೀಸ್ (Police) ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ಬಳಿಕ ಆರೋಪಿಯನ್ನು ಜೈಲಿಗೆ ಕರೆದೊಯ್ಯುವಾಗ ಜೀಪ್ ತಡೆದು ಮಹಿಳೆಯ ಕುಟುಂಬಸ್ಥರು ಹಲ್ಲೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಪೊಲಿಸರು ಅವರನ್ನು ಸಮಾಧಾನ ಮಾಡಿ ಆರೋಪಿಯನ್ನು ಕರೆದೊಯ್ದಿದ್ದಾರೆ. ಇದನ್ನೂ ಓದಿ: ಹಲಾಲ್ ಉತ್ಪನ್ನ ನಿಷೇಧಿಸುವ ನಿರ್ಧಾರ ತೆಗೆದುಕೊಂಡಿಲ್ಲ – ಅಮಿತ್ ಶಾ