ಕಾರವಾರ: ಈ ಸುದ್ದಿ ಕೇಳಿದ್ರೆ ಎಂಥವರೂ ಬೆಚ್ಚಿ ಬೀಳಲೇ ಬೇಕು. ಯಾಕೆಂದ್ರೆ ಸುಪ್ರೀಂ ಕೋರ್ಟ್ ಆದೇಶದನ್ವಯ ಹೆದ್ದಾರಿ ಬಳಿಯ 500 ಮೀಟರ್‍ನಲ್ಲಿರುವ ಬಾರ್‍ಗಳನ್ನ ಮುಚ್ಚಲಾಗಿದೆ. ಆದ್ರೆ ಅಕ್ರಮವಾಗಿ ಸರಾಯಿ ಮಾರಾಟ ಮಾಡುವವರಿಗೆ ಮಾತ್ರ ಲಾಟರಿ ಹೊಡೆದಿದ್ದು ಕೈತುಂಬ ಕಾಸು ಮಾಡಿಕೊಳ್ಳುತಿದ್ದಾರೆ.
ಹೌದು. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಈಗ ಅಕ್ರಮ ಸರಾಯಿಯದ್ದೇ ಕಾರುಬಾರು. ಹೆದ್ದಾರಿ ಬಳಿಯಿದ್ದ ಬಾರ್‍ಗಳು ಮುಚ್ಚಿದ್ದರಿಂದ ಈಗ ಮನೆಗಳೇ ಬಾರ್‍ಗಳಾಗಿ ಮಾರ್ಪಟ್ಟಿವೆ. ಈ ಅಡ್ಡಗಳನ್ನು ನಡೆಸುತ್ತಿರುವವರು ಪುರುಷರಿಗಿಂತ ಮಹಿಳೆಯರೇ ಹೆಚ್ಚು.
Advertisement
Advertisement
ಗೋವಾದಲ್ಲಿ ಸಿಗುವ ಮದ್ಯವನ್ನು ಅಕ್ರಮವಾಗಿ ತಂದು ಕಾರವಾರ ನಗರದ ಕೆಎಸ್‍ಆರ್‍ಟಿಸಿ ನಿಲ್ದಾಣದ ಬಳಿ ಇರುವ ವಾಡೆಯ ಕೋಡಿಬೀರ್ ದೇವಸ್ಥಾನದ ಸುತ್ತಮತ್ತ ಪ್ರದೇಶದಲ್ಲಿ 10ಕ್ಕೂ ಹೆಚ್ಚು ಮನೆಗಳು ಬಾರ್‍ಗಳಾಗಿ ರೂಪಾಂತರಗೊಂಡಿವೆ.
Advertisement
ಇದಲ್ಲದೇ ನಗರದ ಶಿರವಾಡ, ಹಬ್ಬುವಾಡಗಳಲ್ಲಿ ಸಂಜೆಯಾಗುತಿದ್ದಂತೆ ಮನೆಗಳು ಬಾರ್‍ಗಳಾಗುತಿದ್ದು ಮದ್ಯಪ್ರಿಯರು ಈ ಅಡ್ಡಗಳಿಗೆ ಗುಳೆ ಬರುತ್ತಿರುವುದು ಸಾಮಾನ್ಯವಾಗಿದೆ. ಆದ್ರೆ ಇಷ್ಟೆಲ್ಲಾ ನೆಡೆದರೂ ಅಬಕಾರಿ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದ್ದು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
Advertisement
https://youtu.be/rQ7dO_DKvxQ