– ಬೆನ್ನಿಗಾನಹಳ್ಳಿ ರೈಲ್ವೇ ಬ್ರಿಡ್ಜ್ ಮುಳುಗಡೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾತ್ರಿ ಮಳೆರಾಯನ ಆರ್ಭಟ ಜೋರಾಗಿತ್ತು. ಕೆ.ಆರ್.ಪುರ ಮತ್ತು ಯಲಹಂಕ, ಸಿ.ವಿ.ರಾಮನ್ ನಗರ ಸುತ್ತಮುತ್ತ ಮತ್ತು ನಗರದ ಹಲವೆಡೆ ಮಳೆ ಸುರಿಯಿತು. ಇದ್ರಿಂದ ವಾಹನ ಸವಾರರು ಪರದಾಡುವಂತಾಯ್ತು.
ರಾತ್ರಿ 8 ಗಂಟೆಗೆ ಶುರುವಾದ ಮಳೆಗೆ ವಾಹನ ಸವಾರರು ಹೈರಾಣಾದರು. ಸಿ.ವಿ ರಾಮನ್ ನಗರದ ಬೆನ್ನಿಗಾನಹಳ್ಳಿ ರೈಲ್ವೆ ಬ್ರಿಡ್ಜ್ ಅಂಡರ್ ಪಾಸ್ ಜಲಾವೃತವಾಗಿತ್ತು. ಇದರಿಂದ ಬ್ರಿಡ್ಜ್ ಅಂಡರ್ ಪಾಸ್ ದಾಟಲು ಜನರು ಹರಸಾಹಸ ಪಡಬೇಕಾಯ್ತು. ಕಳೆದ ಎರಡು ತಿಂಗಳಿನಿಂದ ಇಲ್ಲಿ ಬ್ರಿಡ್ಜ್ ಕಾಮಗಾರಿ ನಡೆಯುತ್ತಿದ್ದರಿಂದ ಮಳೆಯಿಂದಾಗಿ ಅಂಡರ್ ಪಾಸ್ ಭರ್ತಿಯಾಗಿತ್ತು. ಹೆಚ್‍ಎಸ್‍ಆರ್ ಲೇಔಟ್ ನಲ್ಲಿ ಹಲವು ಕಡೆ ಮನೆಗಳಿಗೆ ನೀರು ನುಗ್ಗಿದೆ.
Advertisement
Advertisement
ನಗರದ ಮಲ್ಲೇಶ್ವರಂ, ಯಶವಂತಪುರ, ಮತ್ತಿಕೆರೆ, ರಾಜಾಜಿನಗರ, ಕೆ.ಆರ್.ಪುರ, ಯಲಹಂಕ, ಸಿ.ವಿ.ರಾಮನ್ ನಗರ, ಜಾಲಹಳ್ಳಿ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಕೆಲವಡೆ ಗುಡುಗು ಮಿಂಚು ಸಹಿತ ಮಳೆಯಾಗಿರುವ ಮಾಹಿತಿ ಲಭ್ಯವಾಗಿದೆ.