ಚಿತ್ರದುರ್ಗ: ತಡರಾತ್ರಿ ಇದ್ದಕ್ಕಿದಂತೆ ಮನೆಯ ಗೋಡೆಗಳು ಕುಸಿದು ಬಿದ್ದಿದರಿಂದ ಎರಡು ಹಸುಗಳು ಸಾವನ್ನಪ್ಪಿದ್ದು, ಅಲ್ಲೇ ಇದ್ದ ಎರಡು ಎತ್ತುಗಳಿಗೆ ಗಂಭೀರ ಗಾಯವಾಗಿರುವ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮದ್ದೇರು ಗ್ರಾಮದಲ್ಲಿ ನಡೆದಿದೆ.
ರೇಣುಕಮ್ಮ ಎಂಬವರಿಗೆ ಸೇರಿದ್ದ ಮನೆಯ ಗೋಡೆ ಕುಸಿದಿದೆ. ಗೋಡೆ ಕುಸಿಯುತ್ತಿದಂತೆ ಕುಟುಂಬಸ್ಥರು ಹೊರಗೆ ಓಡಿ ಬಂದಿದ್ದಾರೆ. ಹಾಗಾಗಿ ಅದೃಷ್ಟವಶಾತ್ ಮನೆಯಲ್ಲಿ ಮಲಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಮನೆಯಲ್ಲಿದ್ದ ಜಾನುವಾರಗಳಲ್ಲಿ 2 ಹಸು ಸಾವನ್ನಪ್ಪಿದೆ ಮತ್ತು 2 ಎತ್ತುಗಳಿಗೆ ಗಂಭೀರ ಗಾಯಗಳಾಗಿವೆ. ಮಳೆಗೆ ಒದ್ದೆಯಾಗಿ ಗೋಡೆ ಕುಸಿದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv