ಮುಂಬೈ: ಮನೆಯೊಂದನ್ನು (House) ಗಡಿ ಪ್ರದೇಶದಲ್ಲಿ ಕಟ್ಟಿ ಅರ್ಧ ಒಂದು ರಾಜ್ಯಕ್ಕೆ ಇನ್ನರ್ಧ ಇನ್ನೊಂದು ರಾಜ್ಯಕ್ಕೆ ಹಂಚಿಕೆಗೊಂಡಿರುವ ಅಪರೂಪದ ಪ್ರಸಂಗ ಚಂದ್ರಾಪುರ ಜಿಲ್ಲೆಯ ಮಹಾರಾಜಗುಡ ಗ್ರಾಮದ ಗಡಿ ಪ್ರದೇಶದಲ್ಲಿ ನಡೆದಿದೆ.
Advertisement
13 ಜನರಿರುವ ಉತ್ತಮ್ ಪವಾರ್ ಎಂಬವರ ಕುಟುಂಬ ಮಹಾರಾಷ್ಟ್ರ (Maharashtra) ಮತ್ತು ತೆಲಂಗಾಣ (Telangana) ಗಡಿ ಪ್ರದೇಶ ಚಂದ್ರಾಪುರ ಜಿಲ್ಲೆಯ ಮಹಾರಾಜಗುಡ ಗ್ರಾಮದಲ್ಲಿ ನೆಲೆಸಿದೆ. ಅವರ ಮನೆ ಮಹಾರಾಷ್ಟ್ರ ಮತ್ತು ತೆಲಂಗಾಣ ಎರಡೂ ರಾಜ್ಯಕ್ಕೆ ಅರ್ಧರ್ಧ ಹಂಚಿಕೆಯಾಗಿದೆ. ಮನೆಯ 4 ಕೊಠಡಿಗಳು ಮಹಾರಾಷ್ಟ್ರದಲ್ಲಿದ್ದರೆ 4 ತೆಲಂಗಾಣ ರಾಜ್ಯಕ್ಕೆ ಸೇರಿವೆ. ಮನೆ ಗಡಿ ಭಾಗದಲ್ಲಿರುವ ಕಾರಣ ಒಂದು ಮನೆ ಎರಡೂ ರಾಜ್ಯಗಳಿಗೆ ಹಂಚಿಕೆಯಾಗಿದೆ. ಇದನ್ನೂ ಓದಿ: ಟ್ರಬಲ್ ಶೂಟರ್‌ಗೆ ಈಗ ಟ್ರಬಲ್ – `ಕುಕ್ಕರ್ ಬ್ಲಾಸ್ಟ್’ ವಿವಾದದಲ್ಲಿ ಡಿಕೆಶಿ ಏಕಾಂಗಿ?
Advertisement
ಒಂದೇ ಮನೆಯ 4 ಕೊಠಡಿಗಳು ಮತ್ತು ಅಡುಗೆ ಮನೆ ತೆಲಂಗಾಣಕ್ಕೆ ಸೇರಿದರೆ, ಇನ್ನುಳಿದ 4 ಕೊಠಡಿಗಳ ಪೈಕಿ ಬೆಡ್‍ರೂಂ ಮತ್ತು ಹಾಲ್ ಮಹಾರಾಷ್ಟ್ರಕ್ಕೆ ಸೇರಿದೆ. ಅಲ್ಲದೇ ಮನೆಯ ತೆರಿಗೆ ಕೂಡ ಎರಡು ರಾಜ್ಯಗಳಲ್ಲೂ ಕಟ್ಟುತ್ತಿದ್ದಾರೆ. ಮನೆಯಲ್ಲಿರುವ ವಾಹನಗಳು ಕೂಡ ಎರಡೂ ರಾಜ್ಯಗಳ ನೋಂದಣಿಯನ್ನು ಪಡೆದುಕೊಂಡಿದೆ. ಜೊತೆಗೆ ಎರಡು ರಾಜ್ಯಗಳಿಂದ ಸಿಗುವ ಸೌಲಭ್ಯಗಳನ್ನು ಮನೆಯವರು ಪಡೆಯುತ್ತಿದ್ದಾರೆ. ಇದನ್ನೂ ಓದಿ: ಬಂಡೆಮಠದ ಸ್ವಾಮೀಜಿ ಕೇಸ್‌ಗೆ ಟ್ವಿಸ್ಟ್ – ಪ್ರತೀಕಾರ ತೀರಿಸಿಕೊಂಡ ನೀಲಾಂಬಿಕೆ
Advertisement
Maharashtra | A house in Maharajguda village, Chandrapur is spread b/w Maharashtra & Telangana – 4 rooms fall in Maha while 4 others in Telangana
Owner, Uttam Pawar says, "12-13 of us live here. My brother's 4 rooms in Telangana&4 of mine in Maharashtra, my kitchen in Telangana" pic.twitter.com/vAOzvJ5bme
— ANI (@ANI) December 15, 2022
Advertisement
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮನೆ ಮಾಲೀಕ ಉತ್ತಮ್ ಪವರ್, ಮನೆ ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯದಲ್ಲಿ ಹಂಚಿಕೊಂಡಿದೆ. ನಮಗೆ ಇದರಿಂದ ಯಾವುದೇ ಸಮಸ್ಯೆ ಇಲ್ಲ. ಎರಡೂ ರಾಜ್ಯಗಳ ಸೌಲಭ್ಯಗಳನ್ನು ಪಡೆಯುತ್ತಿದ್ದೇವೆ. 1969ರಲ್ಲಿ ಗಡಿ ಸಮೀಕ್ಷೆ ನಡೆಸಿದಾಗ ಮನೆಯ ಅರ್ಧ ಭಾಗ ಮಹಾರಾಷ್ಟ್ರ ಮತ್ತು ಅರ್ಧ ಭಾಗ ತೆಲಂಗಾಣಕ್ಕೆ ಸೇರಿದೆ ಎಂಬ ಮಾಹಿತಿ ಸಿಕ್ಕಿತ್ತು. ಇದೀಗ ಎರಡೂ ರಾಜ್ಯಗಳ ಸ್ಥಳೀಯ ಪಂಚಾಯತ್‍ಗಳಲ್ಲೂ ತೆರಿಗೆ ಪಾವತಿಸುತ್ತಿದ್ದೇವೆ ಎಂದಿದ್ದಾರೆ.