ಹೈದರಾಬಾದ್: ಹಾಟ್‍ಸ್ಟಾರ್ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಜಿತ್ ಮೋಹನ್ ಅವರನ್ನು ಫೇಸ್‍ಬುಕ್ ಸಂಸ್ಥೆ ತನ್ನ ಭಾರತದ ಘಟಕದ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮತ್ತು ಉಪಾಧ್ಯಕ್ಷರಾಗಿ (ವಿಪಿ) ನೇಮಕ ಮಾಡಿದೆ.
ಭಾರತದ ಫೇಸ್‍ಬುಕ್ ಸಂಸ್ಥೆಯ ಬೆಳವಣಿಗೆಗೆ ಸಹಾಯಕವಾಗುವಂತೆ ಅಜಿತ್ ರನ್ನು ಆಯ್ಕೆ ಮಾಡಲಾಗಿದ್ದು, ಮುಂದಿನ ವರ್ಷದಿಂದ ಅವರು ಫೇಸ್‍ಬುಕ್ ಸಂಸ್ಥೆಯನ್ನು ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಭಾರತದಲ್ಲಿ ಫೇಸ್‍ಬುಕ್ ತನ್ನ ಸಂಬಂಧಗಳನ್ನು ಉತ್ತಮ ಪಡಿಸಿಕೊಳ್ಳಲು ಹಾಗೂ ಜನರೊಂದಿಗೆ ಉತ್ತಮ ಸಂಪರ್ಕ ಪಡೆಯಲು ಅವರ ಮುಂದಾಳತ್ವದಲ್ಲಿ ಸಂಸ್ಥೆ ನಡೆಯಲಿದೆ ಎಂದು ಫೇಸ್‍ಬುಕ್ ಸಂಸ್ಥೆ ಹೇಳಿದೆ.
Advertisement
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಜಿತ್ ಅವರು, ಸಂಸ್ಥೆಯ ಜವಾಬ್ದಾರಿ ವಹಿಸಿಕೊಳ್ಳಲು ಸಂತಸವಾಗುತ್ತಿದೆ. ನನ್ನ ಮುಂದಿನ ಗುರಿ ಭಾರತದಲ್ಲಿ ಫೇಸ್‍ಬುಕ್ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವುದಾಗಿದೆ ಎಂದು ತಿಳಿಸಿದ್ದಾರೆ. ಅಜಿತ್ ಅವರು 2016 ರಿಂದ ಹಾಟ್‍ಸ್ಟಾರ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಭಾರತದಲ್ಲಿ ವಿಡಿಯೋ ಸ್ಟ್ರಿಮಿಂಗ್ ಸಂಸ್ಥೆಗಳೊಂದಿಗೆ ಪೈಪೋಟಿ ನಡೆಸುವ ಉದ್ದೇಶದಿಂದ ಅಜಿತ್ ಅವರನ್ನು ಆಯ್ಕೆ ಮಾಡಲಾಗಿದೆ.
Advertisement
ಭಾರತದ ವಿವಿಧ ಸಮುದಾಯ, ಸಂಸ್ಥೆಗಳು, ವ್ಯವಹಾರ ಸಂಸ್ಥೆ ಹಾಗೂ ಸರ್ಕಾರದೊಂದಿಗೆ ಮತ್ತಷ್ಟು ಧನಾತ್ಮಕವಾಗಿ ಬೆಳೆಯಲು ಅಜಿತ್ ಅವರ ಅನುಭವ ನಮಗೆ ಸಹಾಯವಾಗಲಿದೆ ಎಂದು ಫೇಸ್‍ಬುಕ್ ಉಪಾಧ್ಯಕ್ಷ ಡೇವಿಡ್ ಫೇಚರ್ ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv