ಶಿವಮೊಗ್ಗ: ಶಾಲೆಗೆ ಹೊರಟಿದ್ದ 15 ವರ್ಷದ ಬಾಲಕಿಯನ್ನು ಯುವಕನೋರ್ವ ಲಾಡ್ಜ್ಗೆ ಕರೆದೊಯ್ದು ಅತ್ಯಾಚಾರವೆಸಗಿರುವ ಘಟನೆ ಜಿಲ್ಲೆಯ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅತ್ಯಾಚಾರ ಎಸಗಿದ ಆರೋಪಿಯನ್ನು ಉಮೇಶ್ (28) ಎಂದು ಗುರುತಿಸಲಾಗಿದೆ.
Advertisement
ಆರೋಪಿ ಉಮೇಶ್ ಹಾಗೂ ಬಾಲಕಿ ತಾಯಿ ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮದಲ್ಲಿನ ಹಳ್ಳಿಮನೆ ಎಂಬ ಹೆಸರಿನ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು. ತನ್ನ ತಾಯಿಯನ್ನು ನೋಡಲು ಬಾಲಕಿ ಆಗಾಗ ಹೋಟೆಲ್ಗೆ ಬಂದು ಹೋಗುತ್ತಿದ್ದಳು. ಅದೇ ಹೋಟೆಲ್ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ ಗ್ರಾಮದ ಉಮೇಶ್ ಬಾಲಕಿಯನ್ನು ಪರಿಚಯ ಮಾಡಿಕೊಂಡು ತುಂಬಾ ಸಲುಗೆಯಿಂದ ಮಾತನಾಡುತ್ತಿದ್ದ. ಇದನ್ನೂ ಓದಿ: ರಸ್ತೆ ಕೆಟ್ಟು ಹೋಗಿದ್ದರಿಂದ ಮನೆಗೆ ಸಂಬಂಧಿಕರು ಬರ್ತಿಲ್ಲ- ಬಾಲಕಿ ವೀಡಿಯೋ ವೈರಲ್
Advertisement
Advertisement
ಸೋಮವಾರ ಬಾಲಕಿ ಶಾಲೆಗೆ ಹೋಗಲು ಹೊರಟಿದ್ದಾಗ ಬಾರಂದೂರಿನಿಂದ ತರೀಕೆರೆಗೆ ಹೋಗುವ ಬಸ್ಸಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ನಂತರ ತರೀಕೆರೆಯ ಲಾವಣ್ಯ ಲಾಡ್ಜ್ಗೆ ಕರೆದುಕೊಂಡು ಹೋಗಿ ಬಾಲಕಿಯ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ. ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಸಹ ಹಾಕಿದ್ದಾನೆ.
Advertisement
ಘಟನೆ ಕುರಿತು ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.