ಬೆಂಗಳೂರು: ಹೋಟೆಲ್ ಮಾಲೀಕನ ಮೇಲೆ ಎಸಿಪಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದೆ.
ಹಲ್ಲೆಗೆ ಒಳಗಾಗಿದ್ದ ಹೋಟೆಲ್ ಮಾಲೀಕ ರಾಜೀವ್ ಶೆಟ್ಟಿಗೆ ಭೂಗತ ಪಾತಕಿಯ ಹೆಸರಲ್ಲಿ ಧಮ್ಕಿ ಬಂದಿದೆ. ಅಂಡರ್‍ವಲ್ರ್ಡ್ ಡಾನ್ ರವಿ ಪೂಜಾರಿ ಹೆಸರಲ್ಲಿ ಶೆಟ್ಟಿ ಲಂಚ್ ಹೋಮ್ ಮಾಲೀಕನಿಗೆ ಬೆದರಿಕೆ ಕರೆ ಬಂದಿದೆ.
Advertisement
Advertisement
ನಾನು ಆಸ್ಟ್ರೇಲಿಯಾದಿಂದ ರವಿ ಪೂಜಾರಿ ಮಾತನಾಡ್ತಾ ಇದ್ದೀನಿ. ಇನ್ನು ಅರ್ಧ ಗಂಟೆಯಲ್ಲಿ ಹೋಟೆಲ್ ಬಾಗಿಲು ಬಂದ್ ಮಾಡ್ಬೇಕು. ಇಲ್ದೇ ಇದ್ರೆ ನೀನು ಕೊಲೆಯಾಗಿ ಹೋಗ್ತೀಯಾ. ನಾನ್ಯಾರು ಅಂತ ಗೊತ್ತು ಅಲ್ವಾ. ಗೋಲಿ ಹೊಡಿಬೇಕಾ ನಿಂಗೆ ಎಂದು ಕರೆ ಮಾಡಿ ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ.
Advertisement
ಹಲ್ಲೆ ನಡೆಸಿದ ಎಸಿಪಿ ಮಂಜುನಾಥ್ ಬಾಬು ವಿರುದ್ಧ ದೂರು ನೀಡಿದ ಬೆನ್ನಲ್ಲೇ ರವಿ ಪೂಜಾರಿಯಿಂದ ಬೆದರಿಕೆ ಬಂದಿದೆ. ಎಸಿಪಿ ಮಂಜುನಾಥ್ ಬಾಬುಗೂ ರವಿ ಪೂಜಾರಿಗೂ ಲಿಂಕ್ ಏನಾದ್ರು ಇದ್ಯಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
Advertisement
ಏನಿದು ಪ್ರಕರಣ?: ಇದೇ ತಿಂಗಳ 9ರಂದು ಆರ್.ಟಿ.ನಗರ ಪೊಲೀಸ್ ಠಾಣೆಯ ಎಸಿಪಿ ಮಂಜುನಾಥ ಬಾಬು, ಆರ್.ಟಿ.ನಗರದ ದಿಣ್ಣೂರ ರಸ್ತೆಯಲ್ಲಿರುವ ಶೆಟ್ಟಿ ಲಂಚ್ ಹೋಂಗೆ ನುಗ್ಗಿ ಮಾಲೀಕ ರಾಜೀವ್ ಶೆಟ್ಟಿ ಮೇಲೆ ಹಲ್ಲೆ ಮಾಡಿದ್ದರು. ಶೆಟ್ಟಿ ಲಂಚ್ ಹೋಂ ತಡರಾತ್ರಿವರೆಗೆ (ರಾತ್ರಿ 11-55ರವರೆಗೆ) ತರೆದಿದ್ದ ಮಾಲೀಕ ರಾಜೀವ್ ಶೆಟ್ಟಿ ಮೇಲೆ ಎಸಿಪಿ ಮಂಜುನಾಥ್ ಲಾಟಿಯಿಂದ ಮನಬಂದತೆ ಥಳಿಸಿದ್ದರು. ಪೊಲೀಸರ ದೌಜನ್ಯ ಕಂಡು ಲಂಚ್ ಹೋಂನಲ್ಲಿದ್ದ ಗ್ರಾಹಕರು ಭಯಭೀತಗೊಂಡು ಓಡಿ ಹೋಗಿದ್ದರು. ಆದರೂ ಬಿಡದೆ ಪೊಲೀಸರು ಲೈಟ್ ಆಫ್ ಮಾಡಿ ಹಿಗ್ಗಾ-ಮುಗ್ಗಾ ಥಳಿಸಿದರೆಂದು ಲಂಚ್ ಹೋಂ ಮಾಲೀಕ ರಾಜೀವ ಶೆಟ್ಟಿ ಆರೋಪಿಸಿದ್ದರು. ಎಸಿಪಿ ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ಮೊದಲು ಸುದ್ದಿ ಪ್ರಸಾರ ಮಾಡಿತ್ತು. ವರದಿ ಬಳಿಕ ಎಸಿಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಪೊಲೀಸ್ ಆಯುಕ್ತರಿಗೆ ಶಿಫಾರಸ್ಸು ಮಾಡಿದ್ದಾರೆ.