ರಾಯಚೂರು: ಮಿನಿಡಾಬಾದಲ್ಲಿ ಊಟಮಾಡಿ ಉದ್ರಿ ಲೆಕ್ಕ ಬರೆಸಿ ಹಣಕೊಡದೆ ಸತಾಯಿಸುತ್ತಿದ್ದವರು ಡಾಬಾ ಮಾಲೀಕನಿಗೆ ಥಳಿಸಿರುವ ಘಟನೆ ರಾಯಚೂರಿನ ಸಿಂಧನೂರು ತಾಲೂಕಿನ ತಿಡಿಗೋಳ ಗ್ರಾಮದಲ್ಲಿ ನಡೆದಿದೆ.
ಮಿನಿಡಾಬಾ ಮಾಲೀಕ ಯಮನೂರಪ್ಪ ಬೇವೂರ್ ಹೆಸರಿನಲ್ಲಿ ಕಿಡಿಗೇಡಿಗಳು ಊಟ ಮಾಡಿ ದುಡ್ಡು ಕೊಡದವರ 54 ಮಂದಿ ಹೆಸರು ಇರುವ ಕರಪತ್ರ ಹಂಚಿದ್ದಾರೆ. ಯಮನೂರಪ್ಪನೇ ಕರಪತ್ರ ಹಂಚಿದ್ದಾನೆ ಅಂತ ತಿಳಿದು ಪಟ್ಟಿಯಲ್ಲಿ ಹೆಸರಿದ್ದವರು ಯಮನೂರಪ್ಪ ಹಾಗೂ ಆತನ ಸಹೋದರ ಗಿಡ್ಡಪ್ಪನನ್ನ ಥಳಿಸಿದ್ದಾರೆ.
ಕನಿಷ್ಠ ಓದಲು ಬಾರದ ಯಮನೂರಪ್ಪ ಹಾಗೂ ಆತನ ಸಹೋದರ ಗಿಡ್ಡಪ್ಪ ಸಾಲ ಕೊಟ್ಟಿದ್ದು ಅಲ್ಲದೇ ಸಾಲಗಾರರಿಂದಲೇ ಥಳಿತಕ್ಕೆ ಒಳಗಾಗಿದ್ದಾರೆ.
ಸಾಲಗಾರರ ಪಟ್ಟಿಯಲ್ಲಿ ಊರಿನ ಶ್ರೀಮಂತರು ಸೇರಿ ಎಲ್ಲಾ ವರ್ಗದ ಜನರ ಹೆಸರುಗಳಿವೆ. ತುರವಿಹಾಳ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ ಜನ ಅಲ್ಲೂ ಹಲ್ಲೆಗೆ ಮುಂದಾಗಿದ್ದಾರೆ. ಕೊನೆಗೆ ರಾಜಿ ಸಂಧಾನದ ಮೂಲಕ ಜಗಳ ಬಗೆಹರಿಸಲು ಪೊಲೀಸರು ಮುಂದಾಗಿದ್ದು, ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ.