– 10% ನಿಂದ 15% ರಷ್ಟು ದರ ಹೆಚ್ಚಳ ಸಾಧ್ಯತೆ
ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ ಆಗಿದೆ. ಅಕ್ಕಿ, ಬೇಳೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಲೇ ಇದೆ. ಅತ್ತ ಸದ್ಯದಲ್ಲೇ ನೀರು ಮತ್ತು ಹಾಲಿನ ಹೆಚ್ಚಳವಾಗುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿದೆ. ಈ ಮಧ್ಯ ಸಿಲಿಕಾನ್ ಸಿಟಿ ಜನರಿಗೆ ಹೋಟೆಲ್ ದರ ಬಿಲ್ ಕೂಡ ಏರಿಕೆ ಕಾಣಲಿದ್ದು, ಬೆಂಗಳೂರಲ್ಲಿ ಹೋಟೆಲ್ ನಂಬಿಕೊಂಡು ಜೀವನ ಮಾಡುತ್ತಿರುವ ಜನರ ಜೇಬು ಮತ್ತಷ್ಟು ಭಾರವಾಗಲಿದೆ.
Advertisement
ಮನೆಯಲ್ಲಿ ಅಡುಗೆ ಮಾಡೋಣ ಅಂದ್ರೆ ಅಕ್ಕಿ, ಬೇಳೆ ಕಾಳು, ಕಾಫಿ ಪುಡಿ, ತರಕಾರಿ ಎಲ್ಲಾ ಕಾಸ್ಲಿ. ಈ ಮಧ್ಯೆ ವಿದ್ಯುತ್ ದರ ಕೂಡ ಹೆಚ್ಚಳವಾಗಿದೆ. ಅಡುಗೆ ಮಾಡುವುದೇ ಬೇಡ. ಹೇಗೋ ಹೋಟೆಲಿನಲ್ಲಿ ತಿನ್ನೋಣ ಎನ್ನುವವರಿಗೆ ಶಾಕ್ ಎದುರಾಗಿದೆ. ಕಾರಣ ಸದ್ಯದಲ್ಲೇ ಹೊಟೇಲ್ ದರ ಏರಿಕೆಯಾಗಲಿದೆ.
Advertisement
Advertisement
ಅಗತ್ಯ ವಸ್ತುಗಳ ಬೆಲೆ ದಿನಕಳೆದಂತೆ ಗಗನಕ್ಕೇರುತ್ತಿರೋದು ಹೊಟೇಲ್ ಉದ್ಯಮವನ್ನ ಸಂಕಷ್ಟಕ್ಕೆ ದೂಡಿದೆ. ಇದರ ಜೊತೆ ವಿದ್ಯುತ್, ಹಾಲಿನ ದರ ಏರಿಕೆ ಬರೆ ಮಾಲೀಕರನ್ನ ಕಂಗೆಡಿಸಿದ್ದು, ಉದ್ಯಮ ನಡೆಸಬೇಕಾದ್ರೆ ಹೋಟೆಲ್ ಊಟ, ತಿಂಡಿ, ಕಾಫಿ, ಟೀ ಮೇಲಿನ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ. ಇದೇ ಕಾರಣಕ್ಕೆ ಸದ್ಯ ಈ ಬಾರಿಯ ಆಷಾಢ ಮುಗಿದ ಬೆನ್ನಲ್ಲೆ ಸಿಲಿಕಾನ್ ಸಿಟಿ ಹೊಟೇಲ್ ದರ ಏರಿಕೆಯಾಗಲಿದೆ.
Advertisement
ಯಾವುದಕ್ಕೆ ಎಷ್ಟು ದರ?
ಐಟಮ್ಸ್ ಹಿಂದಿನ ದರ ದರ ಏರಿಕೆ ಬಳಿಕ
ಮಸಾಲೆ ದೋಸೆ 50ರೂ. 55 -60, 70ರೂ.
ಉದ್ದಿನವಡೆ 10. ರೂ. 12- 15 ರೂ.
ಪೂರಿ 40 ರೂ. 45-50 ರೂ.
ಪೂಳಿಯೊಗರೆ 35 ರೂ. 40-45 ರೂ.
ಇಡ್ಲಿ ವಡೆ 30 ರೂ. 50 ರೂ.
ಬಿಸಿ ಬೇಳೆಬಾತ್ 30 ರೂ. 35- 40ರೂ.
ರೈಸ್ ಬಾತ್ 30 ರೂ. 35-40 ರೂ.
ಟೀ, ಕಾಫಿ 10. ರೂ. 12- 15ರೂ.
ಅನ್ನ ಸಾಂಬಾರ್ 30 ರೂ. 35-40 ರೂ.
ಊಟ 50 ರೂ. 60- 70 ರೂ.
ಇನ್ನೂ ಉಳಿದ ಹೋಟೆಲ್ಗಳ ದರ ಪರಿಷ್ಕರಣೆ ವಿಚಾರವಾಗಿ ಈಗಾಗಲೇ ಜೂಮ್ ಮೀಟಿಂಗ್ಗಳನ್ನು ಮಾಡಲಾಗಿದೆ. ಕೊನೆಯದಾಗಿ ಮತ್ತೊಮ್ಮೆ ಇದೇ ತಿಂಗಳ 25 ರಂದು ಕನಕಪುರ ರೋಡ್ನಲ್ಲಿರುವ ಅಡಿಗಾಸ್ ಹೋಟೆಲ್ನಲ್ಲಿ ಸಭೆ ಕರೆಯಲಾಗಿದೆ.
ಒಟ್ಟಾರೆ ಹೋಟೆಲ್ ಮಾಲೀಕರ ಸಂಘ ಅಧಿಕೃತವಾಗಿ ದರ ಹೆಚ್ಚಳ ಮಾಡದೆ ಇದ್ದರೂ ಬೀದಿ ಬದಿ ಹೋಟೆಲ್ಗಳು ಮತ್ತು ದರ್ಶಿನಿಗಳಲ್ಲಿ ಈಗಾಗಲೇ ದರ ಏರಿಕೆ ಸದ್ದಿಲ್ಲದೆ ಆಗಿದೆ. ಹೊಟೇಲ್ನಲ್ಲಿ ತಿನ್ನುವವರು ಒಮ್ಮೆ ಯೋಚನೆ ಮಾಡುವಂತಾಗಲಿದೆ.
Web Stories