ಜೈಪುರ: ಮುಸ್ಲಿಂ ಪುರುಷ ಹಾಗೂ ಹಿಂದೂ ಮಹಿಳೆ ಇಬ್ಬರೂ ಬೇರೆ ಬೇರೆ ಧರ್ಮದವರು ಎಂಬ ಕಾರಣಕ್ಕೆ ಜೈಪುರದ ಹೋಟೆಲ್ ಒಂದು ಪ್ರವೇಶ ನೀಡಲು ನಿರಾಕರಿಸಿದೆ.
ಜೈಪುರದಲ್ಲಿ ಶನಿವಾರ ಸಹಾಯಕ ಪ್ರಾಧ್ಯಾಪಕರು ಓಯೋದ ಸಿಲ್ವರ್‍ಕೆ ಹೋಟೆಲ್‍ಗೆ ಚೆಕ್ ಇನ್ ಮಾಡಲು ಹೋದಾಗ ಪ್ರವೇಶ ನಿರಾಕರಿಸಲಾಗಿದೆ. ನನ್ನ ಸ್ನೇಹಿತರೊಬ್ಬರು ದೆಹಲಿಯಿಂದ ಜೈಪುರಕ್ಕೆ ಆಗಮಿಸುತ್ತಿದ್ದರು ಹೀಗಾಗಿ ಹೋಟೆಲ್‍ಗೆ ತೆರಳಿದ್ದೇವು ಎಂದು ಪ್ರಾಧ್ಯಾಪಕರು ತಿಳಿಸಿದ್ದಾರೆ.
Advertisement
Advertisement
ವರದಿಯ ಪ್ರಕಾರ 31 ವರ್ಷದ ಪ್ರಾಧ್ಯಾಪಕ ಟ್ರಾವೆಲ್ ಆ್ಯಪ್ ಮೂಲಕ ಇಬ್ಬರಿಗೆ ರೂಂ ಬುಕ್ ಮಾಡಿದ್ದಾರೆ. ನಂತರ ಚೆಕ್ ಇನ್ ಆಗಲು ಹೋದಾಗ ಹೋಟೆಲ್ ಸಿಬ್ಬಂದಿ ಇನ್ನೊಬ್ಬರ ಹೆಸರನ್ನು ಕೇಳಿದ್ದಾರೆ. ಈ ವೇಳೆ ಅಧ್ಯಾಪಕರು ಹಿಂದೂ ಸ್ನೇಹಿತೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಇಬ್ಬರೂ ಬೇರೆ ಬೇರೆ ಧರ್ಮದವರಾಗಿದ್ದರಿಂದ ಸಮಸ್ಯೆ ಇದೆ. ಹೀಗಾಗಿ ಹೋಟೆಲ್ ನೀಡಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.
Advertisement
ಈ ಬಗ್ಗೆ ಪ್ರಾಧ್ಯಾಪಕ ಪ್ರತಿಕ್ರಿಯಿಸಿ, ಆ್ಯಪ್‍ನಲ್ಲಿ ಹಾಗೂ ಹೋಟೆಲ್ ವೆಬ್‍ಸೈಟ್‍ನಲ್ಲಿ ಇಂತಹ ಯಾವುದೇ ಷರತ್ತುಗಳಿಲ್ಲ. ನೀವು ಹೇಳುತ್ತಿರುವುದು ಸಮಾನತೆಯನ್ನು ಸಾರುವ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ.
Advertisement
ಇದಕ್ಕೆ ಸಿಬ್ಬಂದಿ ಪೊಲೀಸರ ಸೂಚನೆಯ ಮೇರೆಗೆ ಈ ನಿಯಮ ಜಾರಿಗೆ ತಂದಿದ್ದೇವೆ ಎಂದು ಹೇಳಿದ್ದಾರೆ. ಆದರೆ ಈ ಕುರಿತು ಲಿಖಿತ ದಾಖಲೆಯನ್ನು ತೋರಿಸಲು ನಿರಾಕರಿಸಿದ್ದಾರೆ. ಎಲ್ಲಿಯೂ ಅಂತಹ ನಿಯಮ ಅಥವಾ ಕಾನೂನು ಇಲ್ಲ ಎಂದು ನಾನು ವಾದಿಸಿದೆ. ಇಲ್ಲಿ ವಿವಿಧ ಧರ್ಮಗಳು ಮತ್ತು ಲಿಂಗದ ಜನರು ಒಟ್ಟಿಗೆ ಇರುವುದನ್ನು ನಿಷೇಧಿಸಲಾಗಿದೆ ಎಂದು ತಿರಸ್ಕಾರದ ಮಾತುಗಳನ್ನಾಡಿದ್ದಾರೆ. ಈ ಕುರಿತು ಆ್ಯಪ್‍ನಲ್ಲಿ ದೂರು ನೀಡಿದ್ದು, ಬುಕ್ಕಿಂಗ್ ಹಣವನ್ನು ವಾಪಸ್ ಪಡೆದಿದ್ದಾರೆ. ನಂತರ ಬೇರೆ ಹೋಟೆಲ್‍ನ್ನು ಕಾಯ್ದಿರಿಸಿದೆ ಎಂದು ಪ್ರೊಫೆಸರ್ ತಿಳಿಸಿದ್ದಾರೆ.
ಹೋಟೆಲ್‍ನವರ ನಡವಳಿಕೆಯನ್ನು ಕಂಡು ಆಘಾತವಾಯಿತು. ಇನ್ನೂ 21ನೇ ಶತಮಾನದಲ್ಲಿದ್ದೇವೆಯೇ ಎಂದು ಪ್ರಶ್ನಿಸಿದ್ದಾರೆ. ನಾವಿಬ್ಬರೂ ವರ್ಷಗಳಿಂದ ಸ್ನೇಹಿತರಾಗಿದ್ದೇವೆ. ನಮ್ಮಿಬ್ಬರ ನಡುವೆ ಧರ್ಮವೂ ಎಂದು ಅಡ್ಡಿಬಂದಿಲ್ಲ ಎಂದು ಮಹಿಳೆ ತಿಳಿಸಿದ್ದಾರೆ.
ಈ ಕುರಿತು ಹೋಟೆಲ್ ವ್ಯವಸ್ಥಾಪಕ ಗೋವರ್ಧನ್ ಸಿಂಗ್ ಪ್ರತಿಕ್ರಿಯಿಸಿ, ಹೋಟೆಲ್ ನೀತಿ ಹಾಗೂ ಪೊಲೀಸ್ ಸೂಚನೆಗಳ ಪ್ರಕಾರ ಬೇರೆ ಬೇರೆ ಧರ್ಮದ ಮಹಿಳೆ ಹಾಗೂ ಪುರುಷರನ್ನು ಒಟ್ಟಿಗೆ ಚೆಕ್-ಇನ್ ಮಾಡಲು ಅನುಮತಿ ಇಲ್ಲ ಎಂದು ತಿಳಿಸಿದ್ದಾರೆ.
ಜೈಪುರ ಪೊಲೀಸ್ ಆಯುಕ್ತ ಆನಂದ್ ಶ್ರೀವಾಸ್ತವ್ ಈ ಕುರಿತು ಪ್ರತಿಕ್ರಿಯಿಸಿ, ಪೊಲೀಸರಿಂದ ಯಾವುದೇ ರೀತಿಯ ಲಿಖಿತ ಅಥವಾ ಮೌಖಿಕ ಸೂಚನೆಗಳಿಲ್ಲ. ಹೋಟೆಲ್‍ಗಳು ಪೊಲೀಸರ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ದೂರಿದರು. ಓಯೋ ಟ್ರಾವೆಲ್ ಆ್ಯಪ್ ಈ ಕುರಿತು ಸ್ಪಷ್ಟಪಡಿಸಿದ್ದು, ಹೋಟೆಲ್ ವ್ಯವಸ್ಥಾಪಕರ ವಿರುದ್ಧ ತನಿಖೆ ನಡೆಸಲಾಗುವುದು ಎಂದು ತಿಳಿಸಿದೆ.