ಮಡಿಕೇರಿ: ಹೋಟೆಲ್ (Hotel) ಒಂದರ ಕಟ್ಟಡ ಕುಸಿದು ಬಿದ್ದ ಪರಿಣಾಮ ಗ್ರಾಹಕರು ಹಾಗೂ ಕಾರ್ಮಿಕರು ಗಾಯಗೊಂಡ ಘಟನೆ ಪೋನ್ನಂಪೇಟೆಯ (Ponnampet) ಗೋಣಿಕೊಪ್ಪಲಿನ ಮುಖ್ಯ ರಸ್ತೆಯ ಬಳಿ ನಡೆದಿದೆ.
ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಕಟ್ಟಡದ ಒಂದು ಭಾಗದಲ್ಲಿ ಹೋಟೆಲ್ ಹಾಗೂ ಮತ್ತೊಂದರಲ್ಲಿ ಮಟನ್ ಅಂಗಡಿ ಇತ್ತು. ಇದೀಗ ಕಟ್ಟಡ ಸಂಪೂರ್ಣವಾಗಿ ನೆಲಸಮಗೊಂಡಿದೆ. ಪರಿಣಾಮ 6 ಜನ ಅವಶೇಷಗಳ ಅಡಿಗೆ ಸಿಲುಕಿ ಗಾಯಗೊಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸಾರ್ವಜನಿಕರು ಸೇರಿ ಕಟ್ಟಡದ ಅವಶೇಷಗಳ ಅಡಿ ಸಿಲುಕಿಕೊಂಡವರನ್ನು ರಕ್ಷಣೆ ಮಾಡಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ದರ್ಶನ್ ಪ್ರಕರಣದಿಂದ ನಾವೆಲ್ಲ ತಲೆ ತಗ್ಗಿಸುವಂತಾಗಿದೆ: ಸಾ.ರಾ ಮಹೇಶ್
ಘಟನೆಯಲ್ಲಿ ಹೋಟೆಲ್‍ಗೆ ಊಟಕ್ಕೆ ಬಂದಿದ್ದ ಗ್ರಾಹಕ ಮಧು ಎಂಬವರಿಗೆ ಕಾಲು ಮುರಿದಿದ್ದು, ಅವರನ್ನು ಗೋಣಿಕೊಪ್ಪಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಗ್ರಾಹಕರ ತಲೆಗೆ ಪೆಟ್ಟಾಗಿದ್ದು, ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ಮಾತನಾಡಿದ ಸ್ಥಳೀಯರೊಬ್ಬರು, ಈ ಕಟ್ಟಡ 80 ವರ್ಷಗಳಷ್ಟು ಹಳೆಯದಾಗಿತ್ತು. ಅಲ್ಲದೇ ಪಟ್ಟಣದಲ್ಲಿ ಇನ್ನಷ್ಟು ಇಂತಹ ಹಳೆಯ ಕಟ್ಟಡಗಳಿವೆ. ಅವನ್ನು ತೆರವು ಮಾಡಬೇಕಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೇಂದ್ರದಲ್ಲಿ ರಚನೆ ಆಗಿರುವುದು ಕಿಚಡಿ ಸರ್ಕಾರ, ಬಹಳ ದಿನ ಮೋದಿ ಅಧಿಕಾರದಲ್ಲಿ ಇರಲ್ಲ: ಶಾಮನೂರು ಭವಿಷ್ಯ