ಬೆಂಗಳೂರು: ಜನವರಿ ಆರಂಭದಲ್ಲಿ ಏನ್ ಚಿಲ್ ವೆದರ್ ಮಗಾ ಅಂತಿದ್ದ ಬೆಂಗಳೂರಿಗರು ಜನವರಿ ಕೊನೆಗೆ ಸಕತ್ ಹಾಟ್ ಬೆಂಗಳೂರು ಗುರು ಅನ್ನೋ ತರ ಆಗಿದೆ.
ಹೌದು. ಬೆಂಗಳೂರಿನಲ್ಲಿ ದಿಢೀರ್ ವಾತಾವರಣ ಬದಲಾಗಿದೆ. ಜೊತೆಗೆ ನಾಲ್ಕು ದಿನ ಹೀಟ್ ವೇವ್ ಇರುವ ಸಾಧ್ಯತೆ ಇದೆ. ಅರಬ್ಬಿ ಸಮುದ್ರದಲ್ಲಿ ಉಷ್ಣಾಂಶ ಏರಿಕೆ ಹಿನ್ನೆಲೆಯಲ್ಲಿ ಬೇಸಿಗೆಗೂ ಮುನ್ನವೇ ಸುಡು ಬಿಸಿಲಿನ ಕಾಟ ಶುರುವಾಗಿದೆ.
Advertisement
Advertisement
ರಾಜ್ಯದಲ್ಲಿ ನಾಲ್ಕು ದಿನಗಳ ಉಷ್ಣಾಂಶ ಹೆಚ್ಚಿರಲಿದೆ ಅಂತ ಹವಾಮಾನ ಇಲಾಖೆ ಹೇಳಿದೆ. ಜನವರಿ, ಫೆಬ್ರವರಿಯಲ್ಲಿ ಸಹಜ ಉಷ್ಣಾಂಶಕ್ಕಿಂತ ಮೂರರಿಂದ ಐದು ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣಾಂಶ ಏರಿಕೆಯಾಗುವ ಸಾಧ್ಯತೆ ಇದೆ. ಫೆಬ್ರವರಿ ಮೂರರವರೆಗೆ ಶುಷ್ಕ ಬಿಸಿಲಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
Advertisement