ಕೆಜಿಎಫ್ ಸಿನಿಮಾದ ನಂತರ ಯಶ್ ಭಾರತೀಯ ಸಿನಿಮಾ ರಂಗವನ್ನು ಆವರಿಸಿಕೊಂಡು ಬಿಟ್ಟಿದ್ದಾರೆ. ಅದರಲ್ಲೂ ಬಾಲಿವುಡ್ ನಟ ನಟಿಯರ ಫೆವರೇಟ್ ಹೀರೋ ಆಗಿಯೂ ಗುರುತಿಸಿಕೊಂಡಿದ್ದಾರೆ. ಇಂತಹ ಯಶ್ ಬಗ್ಗೆ ಹಾಟ್ ತಾರೆ ಸನ್ನಿ ಲಿಯೋನ್ ಮಾತನಾಡಿದ್ದಾರೆ. ಚಾಂಪಿಯನ್ ಸಿನಿಮಾದ ಸಂದರ್ಶನದಲ್ಲಿ ಅವರು ಯಶ್ ಅವರನ್ನು ಹೊಗಳಿದ್ದಾರೆ.
ಕನ್ನಡದ ಚಾಂಪಿಯನ್ ಸಿನಿಮಾದಲ್ಲಿ ಸನ್ನಿ ಲಿಯೋನ್ ನಟಿಸಿದ್ದಾರೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಚಿತ್ರತಂಡದ ಜೊತೆ ಮಾತನಾಡಿರುವ ನಿರೂಪಕಿ ಅನುಶ್ರೀ, ಯಶ್ ಅವರ ಫೋಟೋವನ್ನು ತೋರಿಸಿ, ಇವರ ಬಗ್ಗೆ ಹೇಳಿ ಎಂದು ಕೇಳುತ್ತಾರೆ. ಯಶ್ ಅವರ ಫೋಟೋ ನೋಡುತ್ತಿದ್ದಂತೆಯೇ ಎಕ್ಸೈಟ್ ಆಗುವ ಸನ್ನಿ ಲಿಯೋನ್ ‘ರಾಕಿ ಭಾಯ್’ ಎಂದು ಕರೆಯುತ್ತಾರೆ. ಅಲ್ಲದೇ, ಇವರು ನನ್ನ ಹುಡುಗ ಅಲ್ಲ ಎಂದು ಹೇಳಿ ಅಚ್ಚರಿ ಮೂಡಿಸುತ್ತಾರೆ. ಇದನ್ನೂ ಓದಿ:ಸಮಂತಾ ಮೊದಲ ಸಂಭಾವನೆ ಕೇಳಿದ್ರೆ ನೀವು ಶಾಕ್ ಆಗುತ್ತೀರಾ
ರಾಕಿ ಭಾಯ್ ನನ್ನ ಹುಡುಗ ಅಲ್ಲ ಅನ್ನುವುದರ ಹಿಂದಿನ ಪ್ರೀತಿಯನ್ನೂ ಅವರು ಹೇಳಿಕೊಳ್ಳುತ್ತಾರೆ. ಕೆಜಿಎಫ್ ಸಿನಿಮಾದ ಬಗ್ಗೆಯೂ ಅವರು ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ಸನ್ನಿ ಲಿಯೋನ್ ಚಾಂಪಿಯನ್ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು, ಮೊನ್ನೆಯಷ್ಟೇ ಅವರು ಈ ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೂ ಬಂದಿದ್ದರು. ಈ ಸಿನಿಮಾದಲ್ಲಿ ಅವರೊಂದು ಹಾಡಿನಲ್ಲಿ ಕಾಣಿಸಿಕೊಂಡಿರುವ ಕುರಿತಾಗಿಯೂ ಅವರು ಹೇಳಿದ್ದರು.