ಹೈದ್ರಾಬಾದ್: ಮಗ ಮತ್ತು ಸಮಂತಾ ರುತ್ ಪ್ರಭು ಅವರ ವಿಚ್ಛೇದನಕ್ಕೆ ಬಲವಾದ ಕಾರಣವೇನು ಎಂಬುದನ್ನು ನಾಗಚೈತನ್ಯ ತಂದೆ ನಾಗಾರ್ಜುನ ಅಕ್ಕಿನೇನಿ ಬಹಿರಂಗ ಪಡಿಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಸಮಂತಾ ವಿಚ್ಛೇದನಕ್ಕೆ ಮೊದಲು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ನಾಗಚೈತನ್ಯ ತನ್ನ ಮಾಜಿ ಪತ್ನಿಯ ನಿರ್ಧಾರವನ್ನು ಒಪ್ಪಿಕೊಂಡರು. ಆದರೆ ಚೈತನ್ಯ ನನ್ನ ಬಗ್ಗೆ ತುಂಬಾ ಚಿಂತಿತರಾಗಿದ್ದರು. ನಾನು ಏಲ್ಲಿ ಈ ವಿಷಯವನ್ನು ಕೇಳಿ ಯೋಚಿಸುತ್ತೇನೆ, ತನ್ನ ಕುಟುಂಬದವರಿಗೆ ಎಲ್ಲಿ ಘಾಸಿ ಆಗುತ್ತದೆ ಅಂತ ತನ್ನಲ್ಲಿಯೇ ಕೊರಗುತ್ತಿದ್ದರು ಎಂದು ಹೇಳಿದರು.
ವಿಚ್ಛೇದನದ ನಂತರ ಅವರು ನಾನು ಚಿಂತಿತನಾಗಿದ್ದೇನೆ ಅಂತ ನನಗೆ ತುಂಬಾ ಸಾಂತ್ವನ ಹೇಳಿದರು. ಅವರಿಬ್ಬರೂ ಮದುವೆ ಜೀವನದಲ್ಲಿ 4 ವರ್ಷಗಳಿಂಂದ ಜೊತೆಯಾಗಿದ್ದರು. ಆದರೆ ಅವರ ನಡುವೆ ಯಾವುದೇ ಸಮಸ್ಯೆ ಇರಲಿಲ್ಲ. ಇಬ್ಬರೂ ತುಂಬಾ ಹತ್ತಿರವಾಗಿದ್ದರು. ಇದನ್ನೂ ಓದಿ: ಜೂ.ಎನ್‍ಟಿಆರ್ ಜೊತೆ ನಟಿಸಬೇಕು ಎಂದಾಗ ಶಾಕ್ ಆಗಿತ್ತು: ರಾಮ್ ಚರಣ್
ಅವರಿಬ್ಬರ ನಡುವೆ ವಿಚ್ಛೇದನದ ವಿಷಯ ಹೇಗೆ ಬಂದಿತು ಅಂತ ನನಗೆ ತಿಳಿದಿಲ್ಲ. ಅವರಿಬ್ಬರು ಈ ನಿರ್ಧಾರಕ್ಕೆ ಬರುವ ಮುನ್ನ 2021 ರ ಹೊಸ ವರ್ಷವನ್ನು ಒಟ್ಟಿಗೆ ಆಚರಿಸಿದ್ದರು. ಅದರ ಬಳಿಕ ಸಮಸ್ಯೆಗಳು ಉದ್ಭವಿಸಿವೆ ಅಂತ ತೋರುತ್ತದೆ ಎಂದರು. ಇದನ್ನೂ ಓದಿ: ಗುಡಿಸಲಿನ ಮೇಲೆ ಬಿದ್ದ ಟ್ರಕ್ – ಮೂವರು ಅಪ್ರಾಪ್ತ ಸಹೋದರಿಯರು ಬಲಿ
ಈ ಹಿಂದೆ ಬಾಲಿವುಡ್ ಹಂಗಾಮಾದೊಂದಿಗಿನ ಸಂದರ್ಶನವೊಂದರಲ್ಲಿ, ನಾಗ ಚೈತನ್ಯರಿಗೆ ತಮ್ಮ ಆನ್-ಸ್ಕ್ರೀನ್ ಕೆಮಿಸ್ಟ್ರಿಯನ್ನು ಉತ್ತಮವಾಗಿ ಹಂಚಿಕೊಳ್ಳುವ ನಟಿಯನ್ನು ಹೆಸರಿಸಲು ಕೇಳಿಕೊಂಡಿದ್ದರು. ಈ ವೇಳೆ ಅವರು ತಮ್ಮ ಮಾಜಿ ಪತ್ನಿ ಸಮಂತಾ ಹೆಸರನ್ನು ತೆಗೆದುಕೊಂಡರು. ಕಳೆದ ವರ್ಷದ ಅಕ್ಟೋಬರ್, ಸಮಂತಾ ಮತ್ತು ನಾಗ ಚೈತನ್ಯ ಒಂದೇ ರೀತಿಯ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ವಿಚ್ಛೇದನ ನಿರ್ಧಾರವನ್ನು ಪ್ರಕಟಿಸಿದ್ದರು.