Connect with us

Districts

ಕೆಲಸ ಜ್ಯೂ. ವಾರ್ಡನ್ ಆದ್ರೆ 250 ಕೋಟಿ ರೂ. ಆಸ್ತಿ!

Published

on

ರಾಮನಗರ: 250 ಕೋಟಿಗೂ ಅಧಿಕ ಆಸ್ತಿಯನ್ನ ಅಕ್ರಮವಾಗಿ ಸಂಪಾದಿಸಿರುವ ಆರೋಪದ ಹಿನ್ನೆಲೆಯಲ್ಲಿ ರಾಮನಗರ ಎಸಿಬಿ ಪೊಲೀಸರು ನ್ಯಾಯಾಲಯದ ಆದೇಶದ ಮೇರೆಗೆ ಜೂನಿಯರ್ ವಾರ್ಡನ್ ಮೇಲೆ ಎಫ್‍ಐಆರ್ ದಾಖಲಿಸಿದ್ದಾರೆ.

ಕನಕಪುರ ತಾಲೂಕು ಹುಣಸನಹಳ್ಳಿಯ ಹಾಸ್ಟೆಲ್ ನ ಜೂನಿಯರ್ ವಾರ್ಡನ್ ಬಿ.ನಟರಾಜ್ ವಿರುದ್ಧ ಎಸಿಬಿ ಎಫ್‍ಐಆರ್ ದಾಖಲಿಸಿಕೊಂಡಿದೆ. ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಜೂನಿಯರ್ ವಾರ್ಡನ್ ಆಗಿರುವ ನಟರಾಜ್ ಅಕ್ರಮವಾಗಿ 250 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಮಾಡಿರುವುದಾಗಿ ಆರ್ ಟಿಐ ಕಾರ್ಯಕರ್ತ ರವಿಕುಮಾರ್ ಆರೋಪಿಸಿ ದಾಖಲೆಗಳ ಸಹಿತವಾಗಿ ಕನಕಪುರದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪಿಸಿಆರ್ ಸಲ್ಲಿಸಿದ್ದರು.

ದೂರಿನ ಅನ್ವಯ ಪಿಸಿ ಕಾಯ್ದೆ 1988ರ ಅನ್ವಯ ಪ್ರಕರಣ ದಾಖಲಾಗಿದ್ದು, ತನಿಖೆಗೆ ನ್ಯಾಯಾಲಯದ ಆದೇಶ ಮಾಡಿದ್ದು ಎಸಿಬಿ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಕನಕಪುರ, ಬೆಂಗಳೂರು, ಹಾರೋಹಳ್ಳಿ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದು, ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಕ್ರಮ ಎಸಗಿ ಸಂಪಾದಿಸಿದ್ದು ತನಿಖೆ ನಡೆಸುವಂತೆ ಆರ್ ಟಿ ಐ ಕಾರ್ಯಕರ್ತ ರವಿಕುಮಾರ್ ದೂರು ನೀಡಿದ್ದರು.

ಯಾರು ಈ ನಟರಾಜ್?
ನಟರಾಜ್ ಕನಕಪುರದ ನಿವಾಸಿಯಾಗಿದ್ದು, ಗುತ್ತಿಗೆ ಆಧಾರದ ಮೇರೆಗೆ ವಾರ್ಡನ್ ಆಗಿ ಸೇರಿಕೊಂಡಿದ್ದನು. ಮೊದಲಿಗೆ ಈತನಿಗೆ 7,200 ರೂ. ಸಂಬಳ ಬರುತ್ತಿತ್ತು. ಈಗ ಸದ್ಯಕ್ಕೆ 24 ಸಾವಿರ ಸಂಬಳ ಬರುತ್ತಿದೆ. ಆದರೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಲವಾರು ಟೆಂಡರ್‍ಗಳನ್ನು ಅಕ್ರಮವಾಗಿ ಪಡೆದು ಕಾಮಗಾರಿ ಕೆಲಸವನ್ನು ಮಾಡುತ್ತಿದ್ದಾನೆ. ಜೊತೆಗೆ ಅಕ್ರಮವಾಗಿ ಆಸ್ತಿಯನ್ನು ಸಂಪಾದನೆ ಮಾಡಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.

ಸಾಕ್ಷಿ ಸಮೇತ ವಾರ್ಡನ್ ಬಿ.ನಟರಾಜ್ ಅಕ್ರಮ ಆಸ್ತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಎಫ್‍ಐಆರ್ ದಾಖಲಾಗಿ 3-4 ದಿನಗಳಾಗಿದ್ದರೂ ಇದುವರೆಗೂ ಸೂಕ್ತ ಕ್ರಮವನ್ನು ಜರುಗಿಸಿಲ್ಲ. ಹೀಗಾಗಿ ಅವರಿಗೆ ರಾಜಕೀಯ ನಾಯಕರು ಬೆಂಬಲವಿದೆ ಎಂಬುವುದು ತಿಳಿಯುತ್ತದೆ. ನಟರಾಜ್ ಗೆ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಸುರೇಶ್ ಬೆಂಬಲವಿದೆ. ಅವರ ಬೆಂಬಲ ಇಲ್ಲದೇ ಇಷ್ಟೊಂದು ಅಕ್ರಮ ಆಸ್ತಿ ಸಂಪಾದನೆ ಮಾಡಲು ಸಾಧ್ಯವಿಲ್ಲ. ಈಗಲೂ ರಾಜಕೀಯ ಶಕ್ತಿಯಿಂದ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿಲ್ಲ ಎಂದು ಆರ್ ಟಿಐ ಕಾರ್ಯಕರ್ತ ರವಿಕುಮಾರ್ ಆರೋಪಿಸಿದ್ದಾರೆ.

https://www.youtube.com/watch?v=3YO0lbkgxeY

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *