ಯಾದಗಿರಿ: ತಾಲೂಕಿನ ಅಬ್ಬೆ ತುಮಕೂರಿನ ವಿಶ್ವರಾಧ್ಯ ವಿದ್ಯಾವರ್ಧಕ ವಸತಿ ಶಾಲೆಯಲ್ಲಿ ಹಾವಿನ ಮರಿ ಬೆಂದ ಉಪ್ಪಿಟ್ಟು ಸೇವಿಸಿ ಅಸ್ವಸ್ಥಗೊಂಡ ವಿದ್ಯಾರ್ಥಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ಅನಾಹುತಕ್ಕೆ ಅಡುಗೆ ಸಿಬ್ಬಂದಿ ಮತ್ತು ವಾರ್ಡನ್ ನೇರ ಹೊಣೆ ಎಂದು ಪಬ್ಲಿಕ್ ಟಿವಿ ಎದುರು ಹಾಸ್ಟೆಲ್ ಅವ್ಯವಸ್ಥೆಯ ಬಗ್ಗೆ ಪಾಲಕರು ಬಿಚ್ಚಿಟ್ಟಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪಾಲಕರು, ಈ ಪ್ರಕರಣಕ್ಕೆ ವಾರ್ಡನ್ ಮತ್ತು ಅಡುಗೆ ಸಿಬ್ಬಂದಿ ಕಾರಣ. ಮಕ್ಕಳು ಹಾಸ್ಟೆಲ್ ಊಟದ ಬಗ್ಗೆ ನಮ್ಮ ಹತ್ತಿರ ಹೇಳುತ್ತಿದ್ದರು. ಆದರೆ ನಾವು ಹಾಸ್ಟೆಲ್ ನಲ್ಲಿ ಇರಲಾಗದೆ ಈ ರೀತಿ ಸುಳ್ಳು ಹೇಳುತ್ತಿದ್ದಾರೆ ಎಂದುಕೊಳ್ಳುತ್ತಿದ್ದೆವು. ಅದು ಅಲ್ಲದೇ ಊಟದ ಬಗ್ಗೆ ಸಾಕಷ್ಟು ಬಾರಿ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದೆವು. ಆದರೆ ಏನು ಪ್ರಯೋಜನವಾಗಿಲ್ಲ ಎಂದು ಶಾಲೆಯ ಅವ್ಯವಸ್ಥೆಗೆ ಕಿಡಿಕಾರಿದರು. ಇದನ್ನೂ ಓದಿ: 21 ವರ್ಷಕ್ಕೆ ಗ್ರಾಮದ ಮುಖ್ಯಸ್ಥೆಯಾಗಿ ಇತಿಹಾಸ ಸೃಷ್ಟಿಸಿದ ಯುವತಿ
Advertisement
Advertisement
ಆಸ್ಪತ್ರೆಗೆ ಶಾಸಕ ವೆಂಕಟರೆಡ್ಡಿ ಮುದ್ನಾಳ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಮತ್ತೊಂದು ಕಡೆ ಸುದ್ದಿ ತಿಳಿದು ಆಸ್ಪತ್ರೆಯತ್ತ ಮಕ್ಕಳ ಪಾಲಕರು ಆಗಮಿಸುತ್ತಿದ್ದಾರೆ.