ಈಗೆಲ್ಲಾ ಕಪ್ಪು ಕಪ್ಪಾಗಿರೋದೇ ಟ್ರೆಂಡ್‌- ಹಾಸ್ಟೆಲ್‌ ಹುಡುಗರಿಗೆ ದಿಗಂತ್‌ ಕ್ಲಾಸ್‌

Public TV
2 Min Read
diganth

ಸಿನಿ ದುನಿಯಾದಲ್ಲಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagidaare) ಸಿನಿಮಾ ಒಂದಲ್ಲಾ ಒಂದು ರೀತಿಯಲ್ಲಿ ಮೋಡಿ ಮಾಡುತ್ತಲೇಯಿದೆ. ಈಗಾಗಲೇ ಈ ಚಿತ್ರಕ್ಕೆ ಮೋಹಕ ತಾರೆ ರಮ್ಯಾ, ದಿಗಂತ್ (Diganth)ಸಾಥ್ ನೀಡಿದ್ದಾರೆ. ದಿಗಂತ್, ಚಿತ್ರದ ಪ್ರಮೋಷನ್ ಟೀಸರ್ ಮೂಲಕ ಗಮನ ಸೆಳೆದಿದ್ದಾರೆ. ಈ ಬೆನ್ನಲ್ಲೇ ಚಿತ್ರದ  ಟ್ರೈಲರ್‌ ರಿಲೀಸ್‌ಗೆ ಕೌಂಟ್ ಡೌನ್ ಶುರುವಾಗಿದೆ. ಈ ಬಾರಿ ಹಾಸ್ಟೆಲ್ ಹುಡುಗರ ಕಥೆಗೆ ಸ್ಯಾಂಡಲ್‌ವುಡ್ ಸ್ಟಾರ್ ತಾರೆಯರು ಕೂಡ ಸಾಥ್ ನೀಡಿದ್ದಾರೆ.

Hostel Hudugaru Bekagiddare 1

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಎಂಬ ಭಿನ್ನ ಟೈಟಲ್ ಮೂಲಕ ಸಿನಿಮಾ ತಂಡ ಗಮನ ಸೆಳೆಯುತ್ತಿದೆ. ಈಗಾಗಲೇ ಹಾಸ್ಟೆಲ್ ಹುಡುಗರು ಊರಿಗೆಲ್ಲಾ ಫೇಮಸ್ ಆಗಿದ್ದಾರೆ. ಅಪ್ಪು, ರಕ್ಷಿತ್ ಶೆಟ್ಟಿ, ಕಿಚ್ಚ ಸುದೀಪ್, ರಮ್ಯಾ(Ramya) ಸೇರಿದಂತೆ ಸೂಪರ್‌ಸ್ಟಾರ್‌ಗಳೆಲ್ಲರೂ ಹೊಸಬರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಅಲ್ಲದೆ ರಿಷಬ್ ಶೆಟ್ಟಿ, ಶೈನ್ ಶೆಟ್ಟಿ, ದಿಗಂತ್ ಅಂತಹ ಕನ್ನಡ ತಾರೆಯರು ನಟಿಸಿದ್ದಾರೆ. ಇದನ್ನೂ ಓದಿ:‘ರಂಗಬಲಿ’ ಸಕ್ಸಸ್ ಮೀಟ್‌ನಿಂದ ನಾಗ ಶೌರ್ಯ ವಾಕ್ ಔಟ್

diganth 1

ಹೊಸಬರ ಸಿನಿಮಾವೇ ಆಗಿದ್ದರೂ, ಕನ್ನಡ ತಾರೆಯರೆಲ್ಲರೂ ಹೊಸಬರ ಸಿನಿಮಾಗೆ ಸಪೋರ್ಟ್ ಮಾಡುತ್ತಿದ್ದಾರೆ. ಈಗ್ಯಾಕೆ ಈ ಮಾತು ಅಂದ್ರೆ, ಹಾಸ್ಟೆಲ್ ಹುಡುಗರ ಜೊತೆ ದೂದ್ ಪೇಡಾ ದಿಗಂತ್ ಸಾಥ್ ನೀಡಿದ್ದು, ಕಪ್ಪು ಕಪ್ಪಾಗಿರೋ ಸಿನಿಮಾ ಬಗ್ಗೆ ಸಖತ್ ಡೈಲಾಗ್ ಬಿಟ್ಟಿದ್ದಾರೆ. ಆದರೆ ದಿಗಂತ್ ರೋಲ್ ಬಗ್ಗೆ ಹಿಂಟ್ ಬಿಟ್ಟುಕೊಟ್ಟಿಲ್ಲ. ದಿಗಂತ್ (Actor Diganth) ಟೀಸರ್‌ನಲ್ಲಿ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಪ್ರಿಯರಿಗೆ ಇದು ಕಾಮಿಡಿ ಕಿಕ್ ಕೊಡ್ತಿದೆ ದಿಗಂತ್ ಲುಕ್ ಮ್ಯಾನರಿಸಂ, ಡೈಲಾಗ್ ಡಿಲೆವರಿ ಎಲ್ಲವೂ ಮಜವಾಗಿದೆ. ಈಗೆಲ್ಲ ಕಪ್ಪು ಕಪ್ಪಾಗಿರೋದೇ ಟ್ರೆಂಡ್.. ಆಗಲೇ ಜನ ಥಿಯೇಟರ್‌ಗೆ ಬರೋದು ಅಂತ ಹೇಳಿರೋ ಡೈಲಾಗ್ ಸಿನಿಪ್ರಿಯರಿಗೆ ಖುಷಿ ಕೊಟ್ಟಿದೆ. ಅಲ್ಲದೆ, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಟ್ರೈಲರ್‌ಗೆ ಲೀಡ್ ಕೊಟ್ಟಿದೆ.

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಹಾಡು, ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಈಗ ಬೆನ್ನಲ್ಲೇ ಟ್ರೈಲರ್ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿದೆ. ಇದೇ ಜುಲೈ 10ರಂದು ಸಂಜೆ 6 ಗಂಟೆಗೆ ಸಿನಿಮಾ ಟ್ರೈಲರ್ ರಿಲೀಸ್ ಆಗಲಿದೆ. ಇದನ್ನು ದಿಗಂತ್ ವಿಡಿಯೋ ಮೂಲಕವೇ ಅನೌನ್ಸ್ ಮಾಡಲಾಗಿದೆ. ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಅದ್ದೂರಿಯಾಗಿ ಟೀಸರ್ ಕಾರ್ಯಕ್ರಮ ಆಯೋಜಿಸಿದ್ದು, ಮುಖ್ಯ ಅತಿಥಿಗಳಾಗಿ ಅಶ್ವಿನಿ ಪುನೀತ್‌ರಾಜ್‌ಕುಮಾರ್, ಧ್ರುವ ಸರ್ಜಾ, ಕಾಂತಾರ ಸ್ಟಾರ್ ರಿಷಬ್(Rishab Shetty), ರಕ್ಷಿತ್ ಶೆಟ್ಟಿ (Rakshit Shetty) ಆಗಮಿಸುತ್ತಿದ್ದಾರೆ. ಸದ್ಯದಲ್ಲೇ ಹಾಸ್ಟೆಲ್ ಹುಡುಗರ ಕಥೆ ನಿಮ್ಮ ಮುಂದೆ ಬರಲಿದೆ.

Hostel Hudugaru Bekagiddare 2

ಯೂತ್ ಸಬ್ಜೆಕ್ಟ್ ಕಥೆಯನ್ನೊಳಗೊಂಡ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ನಿತಿನ್ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶಿಸಿದ್ದಾರೆ. ಬಹುತೇಕ ರಂಗಭೂಮಿ ಪ್ರತಿಭೆಗಳು ನಟಿಸಿರುವ ಈ ಚಿತ್ರವನ್ನು ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೋಹರ್ ಫಿಲ್ಮಂಸ್ ಬ್ಯಾನರ್ ನಡಿ ಪ್ರಜ್ವಲ್ ಬಿ.ಪಿ. ವರುಣ್ ಕುಮಾರ್ ಗೌಡ , ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕೆ ಕಶ್ಯಪ್ ಬಂಡವಾಳ ಹೂಡಿದ್ದಾರೆ. ಪ್ರತಿ ಬಾರಿ ಯುನಿಕ್ ಕಾನ್ಸೆಪ್ಟ್ ಮೂಲಕ ಪ್ರಚಾರ ಮಾಡುತ್ತಿರುವ ಹಾಸ್ಟೆಲ್ ಹುಡುಗರ ಸಿನಿಮಾವನ್ನು ರಕ್ಷಿತ್ ಶೆಟ್ಟಿ ತಮ್ಮದೇ ಪರಂವಃ ಪಿಕ್ಚರ್ಸ್ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಅರವಿಂದ್ ಛಾಯಾಗ್ರಹಣ, ಸುರೇಶ್ ಸಂಕಲನವಿದೆ.

Share This Article