ಅನುಮತಿ ಇಲ್ಲದೇ ತಮ್ಮ ಫೋಟೋ ಮತ್ತು ವಿಡಿಯೋವನ್ನು ಹಾಸ್ಟೇಲ್ ಹುಡುಗರು ಬೇಕಾಗಿದ್ದರೆ (Hostel Hudugaru Bekagiddare) ಚಿತ್ರತಂಡ ಬಳಸಿಕೊಂಡಿದೆ ಎಂದು ತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದರು ಮೋಹಕ ತಾರೆ ರಮ್ಯಾ (Ramya). ತಮ್ಮ ಅನುಮತಿ ಇಲ್ಲದೇ ಫೋಟೋ ಮತ್ತು ವಿಡಿಯೋ ಬಳಸಿಕೊಂಡಿದ್ದಕ್ಕೆ ಪರಿಹಾರವಾಗಿ ಒಂದು ಕೋಟಿ ರೂಪಾಯಿ ನೀಡಬೇಕು ಎಂದು ನೋಟಿಸ್ ನಲ್ಲಿ ತಿಳಿಸಿದ್ದರು.
Advertisement
ನಿನ್ನೆ ಕೋರ್ಟ್ ಮುಂದೆ ಬಂದಿದ್ದ ಈ ವಿಚಾರಣೆಯನ್ನು ಒಂದು ದಿನ ಮುಂದಕ್ಕೆ ಹಾಕಿ, ಮತ್ತೆ ಇಂದು ವಿಚಾರಣೆ ನಡೆಸಿತು ಮಾನ್ಯ ನ್ಯಾಯಾಲಯ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಟೆಲ್ ಹುಡುಗರಿಗೆ ಜಯ ಸಿಕ್ಕಿದ್ದು, ರಮ್ಯಾ ಸಲ್ಲಿಸಿದ್ದ ಅರ್ಜಿಯನ್ನು (Application) ಮಾನ್ಯಾ ನಾಯಾಲಯ ವಜಾಗೊಳಿಸಿದೆ. ಇದನ್ನೂ ಓದಿ:ರಮ್ಯಾ ಬದಲು ರಚಿತಾ ರಾಮ್: ಎರಡು ಬಾರಿ ರಮ್ಯಾ ಸ್ಥಾನ ತುಂಬಿದ ರಚ್ಚು
Advertisement
Advertisement
ಕೋರ್ಟ್ (Court) ನಲ್ಲಿಇಂದು ನಡೆದ ವಿಚಾರಣೆಯಲ್ಲಿ ಹಾಸ್ಟೆಲ್ ಹುಡುಗರ ಪರ ಆದೇಶ ಹೊರ ಬಂದಿದ್ದು, ನಾಳೆ ಯಾವುದೇ ತಡೆ ಇಲ್ಲದೆ ಹಾಸ್ಟೆಲ್ ಹುಡುಗರು ಸಿನಿಮಾ ರಿಲೀಸ್ ಆಗಲಿದೆ. ಹಾಸ್ಟೆಲ್ ಹುಡುಗರ ಪರ ವಕೀಲ ವೇಲನ್ ಅವರು ವಾದ ಮಾಡಿದ್ದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯವು, ರಮ್ಯಾ ಹಾಕಿದ್ದ ಕೇಸ್ ತೆರವುಗೊಳಿಸಿ, ರಮ್ಯಾ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.
Advertisement
ರಮ್ಯಾ ಸೇರಿದಂತೆ ಅನೇಕ ಸ್ಟಾರ್ ನಟ-ನಟಿಯರು ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ದಿಗಂತ್ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ. ರಮ್ಯಾ ಕೂಡ ಈ ಸಿನಿಮಾದಲ್ಲಿ ಉಪನ್ಯಾಸಕಿಯ ಪಾತ್ರ ಮಾಡಿದ್ದರು. ಅದು ಅತಿಥಿ ಪಾತ್ರವಾಗಿತ್ತು. ಈ ಪಾತ್ರದ ವಿರುದ್ದವೇ ಅವರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.
Web Stories