CinemaKarnatakaLatestMain PostSandalwood

ಸ್ಯಾಂಡಲ್‌ವುಡ್ ಕ್ವೀನ್ ಕಮ್ ಬ್ಯಾಕ್‌ಗೆ ಹಾಸ್ಟೆಲ್ ಹುಡುಗರ ಪ್ರೊಟೆಸ್ಟ್

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ (Ramya) ನಟನೆಗೆ ಕಮ್ ಬ್ಯಾಕ್ ಮಾಡಿದ್ದಾರೆ. ಹಾಸ್ಟೆಲ್ ಹುಡುಗರ ಮನವಿಗೆ ಮಣಿದು ಡಿಫರೆಂಟ್ ಆಗಿ ಮೋಹಕತಾರೆ ಕಮ್ ಬ್ಯಾಕ್ ಆಗಿದ್ದಾರೆ.

ನಟಿ ರಮ್ಯಾ ಮತ್ತೆ ಚಿತ್ರರಂಗಕ್ಕೆ ನಟನೆಗೆ ಕಂಬ್ಯಾಕ್ ಆಗಬೇಕು ಎಂಬುದು ಅದೆಷ್ಟೋ ಅಭಿಮಾನಿಗಳ ಆಸೆ,‌ ಬೇಡಿಕೆ ಈ‌ ನಿಜ ವಿಚಾರವನ್ನೇ ಭಿನ್ನವಾಗಿ ತಮ್ಮ ಟೀಸರ್ ಮೂಲಕ ಹಾಸ್ಟೆಲ್ ಹುಡುಗರು ತೋರಿಸಿದ್ದಾರೆ. ಈ ಚಿತ್ರದ ಮೂಲಕ 8 ವರ್ಷಗಳ ನಂತರ ರಮ್ಯಾ ಕಂಬ್ಯಾಕ್ ಮಾಡಿದ್ದಾರೆ.

ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಅನ್ನೋ ಸಿನಿಮಾ ನಿಜಕ್ಕೂ ಹೊಸ ಐಡಿಯಾ ಮಾಡಿದೆ. ಇಲ್ಲಿವರೆಗೂ ಇಂತಹ ಒಂದು ಕಮ್ ಬ್ಯಾಕ್ ಟೀಸರ್ ಯಾರೂ ಮಾಡಿರಲಿಲ್ಲ. ಹಾಗೇನೆ ರಮ್ಯಾ ಚಂದನವನಕ್ಕೆ ಕಮ್​ ಬ್ಯಾಕ್ ಮಾಡಲೇಬೇಕು ಅಂತಲೇ ಹಾಸ್ಟೆಲ್ ಹುಡುಗರು ಪ್ರೊಟೆಸ್ಟ್ ಕೂಡ ಮಾಡಿದ್ದಾರೆ.

 

View this post on Instagram

 

A post shared by Ramya|Divya Spandana (@divyaspandana)

ರಮ್ಯಾ ಮನೆ ಮುಂದೆ ವಿಚಿತ್ರವಾಗಿಯೇ ಹಾಸ್ಟೆಲ್ ಹುಡುಗರು ಧರಣಿ ಮಾಡಿದ್ದಾರೆ. ರಮ್ಯಾ ವಾಪಸ್ ಕನ್ನಡ ಚಿತ್ರರಂಗಕ್ಕೆ ಬರಲೇಬೇಕು. ನಮ್ಮ ಸಿನಿಮಾದಲ್ಲಿ ಅಭಿನಯ ಮಾಡಲೇಬೇಕು ಅಂತಲೇ ಹೋರಾಟ ಮಾಡಿದ್ದಾರೆ. ಇದನ್ನೂ ಓದಿ: ನಟಿ ಅದಿತಿ ಪ್ರಭುದೇವ ಮದುವೆ ಡೇಟ್ ಫಿಕ್ಸ್

ವರುಣ್ ಕುಮಾರ್ ಗೌಡ, ಪ್ರಜ್ವಲ್, ಅರವಿಂದ್ ಕಶ್ಯಪ್ ನಿರ್ಮಾಣದ ಈ ಚಿತ್ರದಲ್ಲಿ ಹೊಸ ಪ್ರತಿಭೆಗಳಿಗೆ ಸಾಥ್ ನೀಡಿದ್ದಾರೆ. ಸದ್ಯ ರಮ್ಯಾ ಕಮ್ ಬ್ಯಾಕ್ ಟೀಸರ್ ಮೂಲಕ ಸದ್ದು ಮಾಡ್ತಿದ್ದಾರೆ. ಅಸಲಿಗೆ ಟೀಸರ್ ನಲ್ಲಿ ಮಾತ್ರ ರಮ್ಯಾ ಇರುತ್ತಾರಾ ಅಥವಾ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರಾ ಎಂಬುದು ರಿವೀಲ್ ಆಗಿಲ್ಲ. ಆದರೆ ಈ ಚಿತ್ರದ ಟೀಸರ್‌ಗೆ ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಸಂಬರ್ಗಿಯನ್ನು ಮನೆಗೆ ಕಳುಹಿಸಿ- ಕನ್ನಡಪರ ಹೋರಾಟಗಾರರ ಪಟ್ಟು

Live Tv

Leave a Reply

Your email address will not be published. Required fields are marked *

Back to top button