ರಾಯಚೂರು: ಬೇಕಾಬಿಟ್ಟಿಯಾಗಿ ನಗರದ ಬೀಜನಗೇರಾ ರಸ್ತೆಯಲ್ಲಿ ಮೆಡಿಕಲ್ ತ್ಯಾಜ್ಯವನ್ನು ಬಿಸಾಡುತ್ತಿರುವ ಹಿನ್ನೆಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಯಚೂರಿನ ಬೀಜನಗೇರಾ ರಸ್ತೆಯಲ್ಲಿ ಮೆಡಿಕಲ್ ವೇಸ್ಟ್ ಅನ್ನು ಆಸ್ಪತ್ರೆ ಸಿಬ್ಬಂದಿ ಬೇಕಾಬಿಟ್ಟಿಯಾಗಿ ಬೀಸಾಡಿ ಹೋಗುತ್ತಿದ್ದು, ಈ ಮೂಲಕ ಬೇಜವಾಬ್ದಾರಿತನ ಮೆರೆದಿದ್ದಾರೆ. ರೋಗಿಗಳ ಚಿಕಿತ್ಸೆಗೆ ಬಳಕೆ ಮಾಡಿದ ಇಂಜೆಕ್ಷನ್, ಗ್ಲುಕೋಸ್ ಬಾಟಲ್, ಸಿರೆಂಜ್, ಔಷಧಿ ಸೇರಿದಂತೆ ಉಳಿದ ತ್ಯಾಜ್ಯವನ್ನ ಸರಿಯಾಗಿ ವಿಲೇವಾರಿ ಮಾಡದೆ ಬಿಸಾಡಲಾಗಿದೆ. ಇದನ್ನೂ ಓದಿ: ವಾಮಾಚಾರ ನಡೆಸಿ ಮನೆಯ ಬೆಡ್ ರೂಂನ ಮಣ್ಣಿನಡಿಯಲ್ಲಿ ನಿಧಿಗಾಗಿ ಶೋಧ – ಇಬ್ಬರ ಬಂಧನ
Advertisement
Advertisement
ಮೆಡಿಕಲ್ ತ್ಯಾಜ್ಯವನ್ನ ಎಲ್ಲೆಂದರಲ್ಲಿ ಎಸೆಯುವಂತಿಲ್ಲ. ರೋಗಿಗಳಿಗೆ ಬಳಕೆ ಮಾಡಿದ ಸಿರೇಂಜ್ ಹಾಗೂ ಔಷಧಿಯನ್ನ ವೈಜ್ಞಾನಿಕವಾಗಿಯೇ ವಿಲೇವಾರಿ ಮಾಡಬೇಕು. ಆದ್ರೆ ಆಸ್ಪತ್ರೆ ಸಿಬ್ಬಂದಿ ಯಾವುದನ್ನೂ ಪರಿಗಣೆನೆಗೆ ತೆಗೆದುಕೊಳ್ಳದೆ ಬೇಕಾಬಿಟ್ಟಿಯಾಗಿ ಬಿಸಾಡಲಾಗಿದೆ. ಇದು ಯಾವ ಆಸ್ಪತ್ರೆಯ ತ್ಯಾಜ್ಯ ಅನ್ನೋದು ಸ್ಪಷ್ಟವಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
Advertisement
Advertisement
ಸ್ಥಳೀಯರು ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ರೂ ಪ್ರಯೋಜನ ಇಲ್ಲ. ತ್ಯಾಜ್ಯ ಎಸೆದವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು. ತ್ಯಾಜ್ಯವನ್ನ ವ್ಯವಸ್ಥಿತವಾಗಿ ವಿಲೇವಾರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಹಣ್ಣು ಮಾರಿ ಮನೆ ನಡೆಸಿದ 60ರ ಅಜ್ಜಿ ಮೂರೇ ವರ್ಷದಲ್ಲಿ ಹೈರಾಣಾದ ಕಥೆ