ನವದೆಹಲಿ: ನಗರದ ಫೋರ್ಟಿಸ್ ಆಸ್ಪತ್ರೆಯಲ್ಲಿ 45 ವರ್ಷದ ವ್ಯಕ್ತಿಯ ಕಿಡ್ನಿಯಲ್ಲಿದ್ದ 856 ಕಲ್ಲುಗಳನ್ನು ಹೊರ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಅತಿ ಸಣ್ಣ ಗಾಯ ಮಾಡುವ ಮೂಲಕ ಶಸ್ತ್ರಚಿಕಿತ್ಸೆ ನಡೆಸಿ, ಕಲ್ಲುಗಳನ್ನು ತೆಗೆದಿದ್ದಾರೆ.
ವ್ಯಕ್ತಿ ಮೂತ್ರದ ಜತೆ ರಕ್ತಸ್ರಾವವಾಗುತ್ತಿದ್ದರಿಂದ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ವ್ಯಕ್ತಿಯನ್ನು ಪರೀಕ್ಷಿಸಿದ ವೈದ್ಯರು ಆತನ ಕಿಡ್ನಿಯಲ್ಲಿ 2 ದೊಡ್ಡ ಕಲ್ಲುಗಳು ಇರುವುದನ್ನು ಪತ್ತೆ ಹಚ್ಚಿದ್ದಾರೆ.
Advertisement
Advertisement
ವಿಶೇಷ ಅಂದ್ರೆ ಈ ವ್ಯಕ್ತಿಗೆ 2007ರಲ್ಲಿ ಮೊದಲ ಬಾರಿ ಎಡಗಡೆಯ ಕಿಡ್ನಿ ಆಪರೇಷನ್ ನಡೆದಿತ್ತು. ಆ ಬಳಿಕ ಮೂತ್ರಪಿಂಡದಲ್ಲಿ ಕಲ್ಲುಗಳು ಇರುವ ಬಗ್ಗೆ ಗೋಚರವಾಗಿರಲಿಲ್ಲ. ಇದೀಗ ಆಪರೇಷನ್ ಮಾಡಿದ ಎರಡು ದಿನಗಳ ಹಿಂದೆ ಮೂತ್ರದಲ್ಲಿ ರಕ್ತ ಬರುತ್ತಿತ್ತು, ಇದರಿಂದ ಗಾಬರಿಗೊಂಡ ವ್ಯಕ್ತಿ ಆಸ್ಪತ್ರೆಗೆ ಧಾವಿಸಿದ್ದಾರೆ ಅಂತ ಫೋರ್ಟಿಸ್ ಆಸ್ಪತ್ರೆಯ ವೈದ್ಯ ರಾಜಿಂದರ್ ಯಾದವ್ ತಿಳಿಸಿದ್ದಾರೆ.
Advertisement
ರೋಗಿಯನ್ನು ದಾಖಲುಮಾಡಿಕೊಂಡ ಬಳಿಕ ಪರೀಕ್ಷೆ ನಡೆಸಿದಾಗ ಕಿಡ್ನಿಯಲ್ಲಿ 33 ಮಿ.ಮೀ ಉದ್ದದ 2 ಕಲ್ಲುಗಳಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಬರೋಬ್ಬರಿ 856 ಕಲ್ಲುಗಳನ್ನ ಕಂಡ ವೈದ್ಯರು ದಂಗಾಗಿದ್ದಾರೆ. ಶಸ್ತ್ರಚಿಕಿತ್ಸೆ ನಡೆದ ಮರುದಿನವೇ ರೋಗಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ.