ಮಡಿಕೇರಿ: ಕಣ್ಣಿಗೆ ಕಾಣುವ ದೇವರು ಎಂದು ಜನಸಾಮಾನ್ಯರು ನಂಬುವ ವೈದ್ಯ ಕುಲಕ್ಕೆ ಅವಮಾನವಾಗುವಂತೆ ವೈದ್ಯನೊಬ್ಬ ಮಹಾಲಯ ಅಮಾವಾಸ್ಸೆಗೆ ರಜೆ ಇದೆ ಎಂದು ನೆಪವೊಡ್ಡಿ ರೋಗಿಗೆ ಚಿಕಿತ್ಸೆ ನೀಡದೆ ಮಾನವೀಯತೆಯನ್ನು ಮರೆತಿದ್ದಾರೆ.
ಕುಶಾಲನಗರದ ವೈದ್ಯಾಧಿಕಾರಿ ವಸುಂದರಾ ಹೆಗ್ಡೆ ರೋಗಿಗೆ ಚಿಕಿತ್ಸೆ ನೀಡದೇ ಅಸಡ್ಡೆಯ ಉತ್ತರ ನೀಡಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಬೈಚನಳ್ಳಿಯ ನಿವಾಸಿಯಾಗಿರುವ ತಾಳಮ್ಮ ಎಂಬ ವೃದ್ಧೆಗೆ ಯಾರು ಇಲ್ಲದೆ ಇರುವುದನ್ನು ಮನಗಂಡು ಅನೇಕ ದಿನಗಳಿಂದ ಮರಿಯಾ ಜಿಜೆಶ್ ದಂಪತಿ ಆರೈಕೆ ಮಾಡುತ್ತಿದ್ದಾರೆ.
Advertisement
Advertisement
ಆದರೆ ಮಹಾಲಯ ಅಮಾವಾಸ್ಯೆ ದಿನದಂದು ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯಾಧಿಕಾರಿ ವಸುಂಧರಾ ಹೆಗ್ಡೆ, ಮಹಾಲಯ ಅಮಾವಾಸ್ಯೆ ಸಲುವಾಗಿ ಸರ್ಕಾರಿ ರಜೆ ಇದ್ದುದ್ದರಿಂದ ಅವರಿಗೆ ಇಂಜೆಕ್ಷನ್ ಕೊಡಲಾಗುವುದಿಲ್ಲ. ಅಲ್ಲದೇ ರೋಗಿಗಳಿಂದ ಒಂದು ಹಬ್ಬದ ದಿನವೂ ನೆಮ್ಮದಿ ಇಲ್ಲಾ ಎಂದು ಹೇಳಿ, ನರ್ಸ್ ಇಂಜೆಕ್ಷನ್ ಕೊಟ್ಟರೆ ತೆಗೆದುಕೊಂಡು ಹೋಗಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ನಂತರ ನರ್ಸ್ ಗಳಲ್ಲಿ ವಿನಂತಿಸಿಕೊಂಡ ಬಳಿಕ ವೃದ್ಧೆಗೆ ಚಿಕಿತ್ಸೆ ನೀಡಿ ಇಂಜೆಕ್ಷನ್ ಕೊಟ್ಟಿದ್ದಾರೆ. ಇದನ್ನು ಗಮನಿಸಿದ ವೈದ್ಯಾಧಿಕಾರಿ ನರ್ಸ್ ಗಳನ್ನು ತರಾಟೆಗೆ ತೆಗೆದುಕೊಂಡು ರಜಾದಿನಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ವಿಚಾರವಾಗಿ ನರ್ಸ್ ಗಳಿಗೆ ಬೈದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೈದ್ಯಾಧಿಕಾರಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ವಸುಂಧರಾ ಹೆಗ್ಡೆ ಅವರು ಈ ಮೊದಲೇ ಹಲವಾರು ರೋಗಿಗಳಿಗೆ ಚಿಕಿತ್ಸೆ ಕೊಡುವ ವಿಚಾರದಲ್ಲಿ ಅವರ ರಾಕ್ಷಸಿ ರೂಪ ಬಯಲಾಗಿದೆ ಎಂದು ಆರೋಪಿಸುತ್ತಿದ್ದಾರೆ.
Advertisement
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸರ್ಕಾರ ಮತ್ತು ಜಿಲ್ಲಾಡಳಿತ ಗಮನ ಹರಿಸಿ ವಸುಂಧರಾ ಹೆಗ್ಡೆ ಅಂತಹ ವೈದ್ಯಾಧಿಕಾರಿ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕುಶಾಲನಗರದ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv