ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅಭಿಮಾನಿಗಳು ಶಬರಿ ಮಲೈ ಮಾಲಾಧಾರಿಗಳಂತೆ ಅಪ್ಪು (Appu) ಮಾಲೆ (Maale) ಧರಿಸಿದ್ದಾರೆ. ಹೊಸಪೇಟೆಯ (Hospet) ಸಾಕಷ್ಟು ಅಭಿಮಾನಿಗಳು ಮಾಲೆ ಧರಿಸಿದ್ದು, 18 ದಿನಗಳ ವ್ರತವನ್ನು ಮುಗಿಸಿಕೊಂಡು ಇಂದು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಅಪ್ಪು ಸ್ಮಾರಕಕ್ಕೆ ಭೇಟಿ ನೀಡಿ ವ್ರತ ಮುಗಿಸಲಿದ್ದಾರೆ.
ಹೊಸಪೇಟೆ ಅಪ್ಪು ಅಭಿಮಾನಿಗಳು ಕಳೆದ 18 ದಿನಗಳಿಂದ ಮಾಲೆಹಾಕಿಕೊಂಡು ವ್ರತ ಮಾಡುತ್ತಿದ್ದರು. ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬದವರೆಗೂ ಈ ವ್ರತವನ್ನು ಆಚರಿಸುತ್ತಿದ್ದರು. ನಿನ್ನೆಯಷ್ಟೇ ವ್ರತ ಮುಗಿದಿದ್ದು ಇಂದು ಬೆಳಗ್ಗೆ 6 ಗಂಟೆಗೆ ಹೊಸಪೇಟೆಯಿಂದ ಮಾಲಾಧಾರೆಗಳು ಬೆಂಗಳೂರಿಗೆ ಬರುತ್ತಿದ್ದಾರೆ. ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ವಿಶೇಷ ಪೂಜೆಯನ್ನು ಮಾಡಲಿದ್ದಾರೆ. ಇದನ್ನೂ ಓದಿ: ಭಾರತ- ಆಸ್ಟ್ರೇಲಿಯಾ ಏಕದಿನ ಪಂದ್ಯ ವೀಕ್ಷಿಸಿದ ರಜನಿಕಾಂತ್
ಬೆಂಗಳೂರಿನತ್ತ ಬರುತ್ತಿರುವ ಮಾಲೆಧಾರಿ ಅಭಿಮಾನಿಗಳನ್ನು ರಾಘವೇಂದ್ರ ರಾಜ್ ಕುಮಾರ್ ಬರಮಾಡಿಕೊಳ್ಳಲಿದ್ದು, ಅವರಿಗಾಗಿ ವಿಶೇಷ ಪೂಜೆಯ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ. ಅಪ್ಪು ಸ್ಮಾರಕಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸುವ ಮೂಲಕ ಇಂದು ವ್ರತವನ್ನು ಕೈ ಬಿಡಲಿದ್ದಾರೆ ಅಭಿಮಾನಿಗಳು.