ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿದ್ದ ರೆಬೆಲ್ ಶಾಸಕರು ಬಿಜೆಪಿ ಸೇರ್ಪಡೆಯಾಗಲು ಸಿದ್ಧತೆ ನಡೆಸಿದ್ದಾರೆ. ಆದರೆ ಅನರ್ಹ ಶಾಸಕರು ಪಕ್ಷ ಸೇರ್ಪಡೆಗೆ ಬಿಜೆಪಿಯಲ್ಲೇ ಅಪಸ್ವರ ಮೂಡಿದೆ. ಅದರಲ್ಲೂ ಹೊಸಕೋಟೆ ಕ್ಷೇತ್ರದ ಉಪಚುನಾವಣೆಯಲ್ಲಿ ತಮಗೆ ಪಕ್ಷದ ನೀಡಬೇಕು ಎಂದು ಸಂಸದ ಬಚ್ಚೇಗೌಡ ಅವರ ಪುತ್ರ ಶರತ್ ಬಚ್ಚೇಗೌಡ ಪಟ್ಟು ಹಿಡಿದಿದ್ದಾರೆ.
ಅನರ್ಹ ಶಾಸಕರು ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ರಾಜಕಾರಣದಲ್ಲಿ ಹಲವು ದಿನಗಳಿಂದ ವಿವಿಧ ಬೆಳವಣಿಗೆಗಳು ನಡೆಯುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಇದೇ ರೀತಿ ನಡೆಯಲಿದೆ ಎಂದು ಚರ್ಚೆ ಮಾಡುವುದು ಅನಗತ್ಯ ಎಂದರು.
Advertisement
Advertisement
ಕ್ಷೇತ್ರದಲ್ಲಿ ಪಕ್ಷದ ಪರ ಕೆಲಸ ಮಾಡಿ ಸಂಘಟನೆಯ ಕಾರ್ಯವನ್ನು ಮಾಡಿದ್ದೇವೆ. ಪಕ್ಷದ ಬಗ್ಗೆ ನಮಗೆ ನಂಬಿಕೆ ಇದ್ದು, ನಮಗೆ ಟಿಕೆಟ್ ಲಭಿಸುವ ವಿಶ್ವಾಸ ಇದೆ. ಕಳೆದ ಚುನಾವಣೆಲ್ಲಿ 90 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದೇವು. ಲೋಕಸಭಾ ಚುನಾವಣೆಯಲ್ಲೂ ಕ್ಷೇತ್ರದಲ್ಲಿ ಹೆಚ್ಚಿನ ಮತಗಳನ್ನು ಪಡೆದಿದ್ದೇವೆ. ನಾನು ಪಕ್ಷದ ಟಿಕೆಟ್ ಕೇಳಿದ್ದೇನೆ. ಟಿಕೆಟ್ ಸಿಗುವ ವಿಶ್ವಾಸ ಇದೆ ಎಂದರು.
Advertisement
ಎಂಟಿಬಿ ನಾಗರಾಜ್ ಅವರು ಬಿಜೆಪಿಗೆ ಬಂದರೆ ಅಲ್ಲಿನ ಬಿಜೆಪಿ ಕಾಯಕರ್ತರು ಏನು ಮಾಡಲಿದ್ದಾರೆ ಎಂಬುವುದು ಕುತೂಹಲ ಮೂಡಿಸಿದೆ. ಈ ಹಿಂದೆ ಹೊಸಕೋಟೆ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್ ಹಾಗೂ ಬಚ್ಚೇಗೌಡ ಅವರ ಕುಟುಂಬಗಳ ನಡುವೆ ನೇರ ಸ್ಪರ್ಧೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ನಮಗೆ ಟಿಕೆಟ್ ನೀಡಿ ಎಂದು ಬಚ್ಚೇಗೌಡ ಅವರು ಸಿಎಂ ಬಿಎಸ್‍ವೈ ಅವರ ಮೇಲೆ ಒತ್ತಡ ತಂದಿದ್ದಾರೆ ಎನ್ನಲಾಗಿದೆ. ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಮಾಡಿರುವುದು ನಾವು, ನಮಗೆ ಟಿಕೆಟ್ ಕೊಡಬೇಕು ಎಂಬುವುದು ಬಚ್ಚೇಗೌಡ ವಾದ ಎನ್ನಲಾಗಿದೆ. ಈ ನಡೆ ಬಿಎಸ್‍ವೈ ಅವರಿಗೆ ಹೊಸ ತಲೆನೋವು ತಂದಿದ್ದು, ಈಗಾಗಲೇ ಎಂಟಿಬಿ ನಾಗರಾಜ್ ಹಾಗೂ ಡಿಕೆ ಶಿವಕುಮಾರ್ ಅವರು ಹೊಸಕೋಟೆ ಚುನಾವಣಾ ಕಣದಲ್ಲಿ ಎದುರಿಸುವುದಾಗಿ ಸವಾಲು ನೀಡಿದ್ದಾರೆ.