ಬೆಂಗಳೂರು: ವೀಕೆಂಡ್ ಹಾಟ್ ಫೇವರಿಟ್, ಫ್ಯಾಮಿಲಿ-ಫ್ರೆಂಡ್ಸ್ ಜೊತೆ ಒನ್ ಡೇ ಪಿಕ್‍ನಿಕ್, ರಿಲ್ಯಾಕ್ಸ್ ಅಂತ ಪ್ಲಾನ್ ಮಾಡುವವರು ಮೊದಲಿಗೆ ಲಾಲ್‍ಬಾಗ್‍ಗೆ ಹೋಗೋಣ ಅಂತಾರೆ. ಜೊತೆಗೆ ಸಖತ್ ಆಗಿರೋ ಫುಡ್ ಐಟಮ್ಸ್ ಸಿಗುತ್ತೆ ಅನ್ನೋ ಲೆಕ್ಕಾಚಾರವೂ ಇರುತ್ತೆ. ಆದ್ರೆ, ಇನ್ಮುಂದೆ ಕೆಂಪು ತೋಟದಲ್ಲಿ ನಿಮ್ಮ ಇಷ್ಟದ ತಿಂಡಿ ಸವಿಯೋ ಪ್ಲಾನ್ ಫ್ಲಾಪ್ ಆಗಲಿದೆ.
Advertisement
ಹೌದು. ಹೊಸ ವರ್ಷದಿಂದಲೇ ಲಾಲ್‍ಬಾಗ್‍ಗೆ ತಿಂಡಿ-ತೀರ್ಥ ಕೊಂಡೊಯ್ಯುವಂತಿಲ್ಲ ಅಂತ ಕಟ್ಟುನಿಟ್ಟಿನ ನಿರ್ಣಯವನ್ನ ತೋಟಗಾರಿಕಾ ಇಲಾಖೆ ಕೈಗೊಂಡಿದೆ. ಕಾರಣ ಪ್ರವಾಸಿಗರ ಸಂಖ್ಯೆ ಹೆಚ್ಚಾಗ್ತಿದ್ದು, ಎಲ್ಲಂದರಲ್ಲಿ ವೇಸ್ಟ್ ಎಸೆಯಲಾಗ್ತಿದೆ. ಇದು ಸಸ್ಯಕಾಶಿಯ ಸ್ವಚ್ಛತೆ ಹಾಗೂ ಅಂದಕ್ಕೆ ಅಡ್ಡಿಯಾಗ್ತಿದೆ ಅಂತ ಇಲಾಖೆ ಹೇಳಿದೆ.
Advertisement
Advertisement
ಈ ಹಿಂದೆಯೂ ಈ ನಿಯಮ ಇತ್ತು. ಇದಕ್ಕೆ ಪ್ರವಾಸಿಗರು ಸೊಪ್ಪು ಹಾಕಿರಲಿಲ್ಲ. ಆದ್ರೆ ಈ ಬಾರಿ ಜನವರಿ 1ರಿಂದಲೇ ಇದನ್ನ ಕಟ್ಟುನಿಟ್ಟಿನಿಂದ ಜಾರಿಗೆ ತರಲಾಗ್ತಿದೆ. ನಿಯಮ ಮೀರಿದ್ರೆ ದಂಡವೂ ಇದೆ ಅಂತ ತೋಟಗಾರಿಕಾ ಇಲಾಖೆ ಎಚ್ಚರಿಸಿದೆ. ಈ ನಿರ್ಣಯಕ್ಕೆ ಬೆಂಗಳೂರಿಗರೂ ಸೇರಿದಂತೆ ಪ್ರವಾಸಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Advertisement