ರಾಜ್ಯಸಭಾ ಚುನಾವಣೆಯಲ್ಲಿ ಕುದುರೆ ವ್ಯಾಪಾರ? – ಕಾಂಗ್ರೆಸ್ ನಿಯೋಗದಿಂದ ಕಮಿಷನರ್‌ಗೆ ದೂರು

Public TV
1 Min Read
Congress Complaint To Commissioner

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ (Rajya Sabha Election) ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿಯವರಿಗೆ (Kupendra Reddy) ಅಡ್ಡಮತ ಚಲಾಯಿಸಲು ಕಾಂಗ್ರೆಸ್ (Congress) ಬೆಂಬಲಿತ ಸದಸ್ಯರಿಗೆ ಹಣದ ಆಮಿಷ ಒಡ್ಡಿ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸ್ ಆಯುಕ್ತರಿಗೆ ಕಾಂಗ್ರೆಸ್ ನಿಯೋಗ ದೂರು ನೀಡಿದೆ.

ಕಾಂಗ್ರೆಸ್ ಬೆಂಬಲಿತ ಶಾಸಕರಾಗಿರುವ ಲತಾ ಮಲ್ಲಿಕಾರ್ಜುನ್, ಗೌರಿಬಿದನೂರು ಪುಟ್ಟಸ್ವಾಮಿ ಗೌಡ ಹಾಗು ದರ್ಶನ್ ಪುಟ್ಟಣ್ಣಯ್ಯಗೆ ಮತ ಹಾಕುವಂತೆ ಆಮಿಷವೊಡ್ಡಿ ಬೆದರಿಕೆ ಹಾಕಲಾಗಿದೆ. ಹೋಟೆಲ್ ಮಾಲೀಕರೊಬ್ಬರು ಲತಾರವರನ್ನು ಸಂಪರ್ಕಿಸಿ ಕುಪೇಂದ್ರ ರೆಡ್ಡಿಯವರ ಪುತ್ರ ಭೇಟಿ ಮಾಡಿ ನಿಮಗೆ ಹಣವನ್ನು ಕೊಡುತ್ತಾರೆ. ಕುಪೇಂದ್ರ ರೆಡ್ಡಿಯವರಿಗೆ ಮತ ಚಲಾಯಿಸದಿದ್ದರೆ ನಿಮಗೆ ತೊಂದರೆಯಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರಂತೆ. ಇದನ್ನೂ ಓದಿ: ವಕೀಲರು Vs ಪೊಲೀಸರು – ಫೇಸ್‌ಬುಕ್‌ ಪೋಸ್ಟ್‌ನಿಂದ ಅಹೋರಾತ್ರಿ ಧರಣಿಯವರೆಗೆ: ರಾಮನಗರದಲ್ಲಿ ಪ್ರತಿಭಟನೆ ಯಾಕೆ?

ಮಾಜಿ ಸಚಿವರೊಬ್ಬರು ಲತಾ ಅವರ ಪತಿ ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ ಹಣದ ಆಮಿಷವೊಡ್ಡಿ ಕುಪೇಂದ್ರ ರೆಡ್ಡಿ ಅವರಿಗೆ ಮತ ಚಲಾಯಿಸುವಂತೆ ಒತ್ತಡ ಹಾಕಿರುತ್ತಾರೆ. ಇನ್ನೋರ್ವ ಸದಸ್ಯರಾದಂತಹ ಪುಟ್ಟಸ್ವಾಮಿ ಗೌಡರವರಿಗೂ ಕೂಡ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಅವರ ಹಿಂಬಾಲಕರ ಮೂಲಕ ಹಣದ ಆಮಿಷ ಹಾಗೂ ಬೆದರಿಕೆಯನ್ನು ಹಾಕಿರುತ್ತಾರೆ. ಹಾಗೆಯೇ ಮತ್ತೋರ್ವ ಸದಸ್ಯರಾದಂತಹ ದರ್ಶನ್ ಪುಟ್ಟಣ್ಣಯ್ಯರಿಗೆ ಕೂಡ ಬೆದರಿಕೆ ಹಾಕಿರುತ್ತಾರೆ. ಬೆದರಿಕೆ ಹಾಕಿರುವ ಸಂಪೂರ್ಣ ಮಾಹಿತಿ, ಸಾಕ್ಷಿ ಇದ್ದು, ಎಫ್‌ಐಆರ್ ದಾಖಲಿಸಿ ಭಾಗಿಯಾಗಿರುವ ಆರೋಪಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಹಾಗೂ ತಮ್ಮ ಪಕ್ಷದ ಸಹ ಸದಸ್ಯ, ಶಾಸಕರಿಗೆ ಸ್ವತಂತ್ರ ಅಭ್ಯರ್ಥಿಗಳಿಗೆ ರಕ್ಷಣೆ ನೀಡುವಂತೆ ದೂರು ಸಲ್ಲಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ, ಜಮ್ಮು- ಕಾಶ್ಮೀರ ಸೇರಿ ದೇಶದ ವಿವಿಗಳ ಅಭಿವೃದ್ಧಿಗೆ 3600 ಕೋಟಿ ರೂ. ಬಿಡುಗಡೆ

Share This Article