ಏಪ್ರಿಲ್ 14 ರಂದು ಸಪ್ತಪದಿ ತುಳಿದಿರುವ ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್, ಸ್ಟಾರ್ ನಟಿ ಆಲಿಯಾ ಭಟ್ ಅವರಿಗೆ ಅನೇಕ ಉಡುಗೊರೆಗಳು ಬಂದಿವೆ. ಅದರಲ್ಲಿ ಒಂದು ಅಪರೂಪದ ಉಡುಗೊರೆಯನ್ನು ನೀಡಿದೆ ಎನ್.ಜಿ.ಓ. ಇದನ್ನೂ ಓದಿ : ಕೆಜಿಎಫ್-2 ಬಾಲಿವುಡ್ ಮೇಲೆ ಹಾಕಿದ ಅಣುಬಾಂಬ್ : ರಾಮ್ ಗೋಪಾಲ್ ವರ್ಮಾ
Advertisement
ಸಾಮಾನ್ಯವಾಗಿ ಮದುವೆಗೆ ಉಡುಗೊರೆ ಎಂದರೆ ನಾನಾ ರೀತಿಯ ವಸ್ತುಗಳು, ಬಂಗಾರ, ಬೆಳ್ಳಿ, ಫ್ಲ್ಯಾಟ್ ಹೀಗೆ ಏನೆಲ್ಲ ಕೊಡುತ್ತಾರೆ. ಆದರೆ, ಮುಂಬೈ ಮೂಲದ ಎನ್.ಜಿ.ಓ ವೊಂದು ಸ್ಟಾರ್ ದಂಪತಿಗಳಿಗೆ ವಿಶೇಷ ಉಡುಗೊರೆ ನೀಡಿ ಶುಭ ಹಾರೈಸಿದೆ. ಆ ಉಡುಗೊರೆ ಪಡೆದಿರುವ ಸ್ಟಾರ್ ಜೋಡಿಯು ಸಖತ್ ಖುಷಿ ಕೂಡ ಆಗಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 ಡಿಜಾಸ್ಟರ್ ಸಿನಿಮಾ ಎಂದು ‘ಥೂ… ಥೂ..’ ಉಗಿಸಿಕೊಂಡ ಬಾಲಿವುಡ್ ನಟ
Advertisement
Advertisement
ಮುಂಬೈ ಮೂಲದ ಎನ್.ಜಿ. ಓ ಸಂಸ್ಥೆಯು ಕೆಲ ತಿಂಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾದ ಎರಡು ಕುದುರೆಗಳನ್ನು ಆರೈಕೆ ಮಾಡಿದ್ದರು. ಈಗ ಆ ಎರಡೂ ಕುದುರೆಗಳು ಆರೋಗ್ಯವಾಗಿವೆ. ಹೆಚ್ಚು ಚುರುಕಾಗಿವೆ. ಆ ಎರಡೂ ಕುದುರೆಗಳನ್ನು ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಯ ಉಡುಗೊರೆಯಾಗಿ ನೀಡಲಾಗಿದೆ. ಇದನ್ನೂ ಓದಿ : ಕನ್ನಡದಲ್ಲೇ ಕೆಜಿಎಫ್ ನೋಡಿ ಫಿದಾ ಆದ ತಲೈವಾ
Advertisement
ಇಂಥದ್ದೊಂದು ಉಡುಗೊರೆಯನ್ನು ಈ ಸ್ಟಾರ್ ಜೋಡಿಗೆ ಕೊಡುವುದಕ್ಕೂ ಕಾರಣವಿದೆ. ರಣಬೀರ್ ಮತ್ತು ಆಲಿಯಾ ಇಬ್ಬರೂ ಪ್ರಾಣಿಪ್ರಿಯರು. ಹಲವಾರು ಪ್ರಾಣಿಗಳನ್ನು ಸಾಕಿದ್ದಾರೆ ಮತ್ತು ಮೃಗಾಲಯದಲ್ಲಿ ದತ್ತು ಪಡೆದಿದ್ದಾರೆ. ಅಲ್ಲದೇ, ಪ್ರಾಣಿ ದಯಾ ಸಂಘಗಳ ರಾಯಭಾರಿಯಾಗಿಯೂ ಕೆಲಸ ಮಾಡಿದ್ದಾರೆ. ಹಾಗಾಗಿ ಕುದುರೆಗಳನ್ನು ಉಡುಗೊರೆಯಾಗಿ ನೀಡಲಾಗಿದೆ ಎಂದಿದೆ ಎನ್.ಜಿ.ಓ.