ಮೆಕ್ಸಿಕೊ ಸಿಟಿ: ವಾಹನಗಳು ಒಂದಕ್ಕೊಂದು ಡಿಕ್ಕಿಯಾಗುವುದನ್ನು ಮತ್ತು ರೈಲ್ವೆ ಅಪಘಾತಗಳನ್ನು ನೋಡಿದ್ದೇವೆ ಮತ್ತು ಕೇಳಿರುತ್ತವೆ. ಆದ್ರೆ ಆಕಾಶದಲ್ಲಿ ಪ್ಯಾರಾಚೂಟ್ ಬಳಸಿ ಹಾರಾಡುತ್ತಿರುವವರು ಒಬ್ಬರಿಗೊಬ್ಬರು ಡಿಕ್ಕಿ ಆಗಿರುವ ಘಟನೆಯೊಂದು ಮೆಕ್ಸಿಕೋ ನಗರದ ಬೀಚ್ ನಲ್ಲಿ ನಡೆದಿದೆ.
ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಅಂತಾ ಹೇಳಲಾಗಿದೆ. ಎರಡು ಪ್ಯಾರಾಚೂಟ್‍ಗಳು ಒಂದಕ್ಕೊಂದು ಡಿಕ್ಕಿಯಾಗುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಸೀರೆಯಲ್ಲಿ ಸ್ಕೈ ಡೈವಿಂಗ್ ಮಾಡಿ ದಾಖಲೆ ಬರೆದ ಮಹಿಳೆ
Advertisement
Advertisement
47 ವರ್ಷದ ಉರ್ಸುಲಾ ಹೆರ್ನಾಂಡೆಜ್ ಎಂಬ ಮಹಿಳೆ ಪ್ಯಾರಾಚೂಟ್ ನಲ್ಲಿ ಹಾರಾಡುತ್ತಾ ಬೀಚ್‍ನಲ್ಲಿ ಲ್ಯಾಂಡಿಂಗ್ ಆಗುತ್ತಿದ್ದರು. ಈ ವೇಳೆ ವಿರುದ್ಧ ದಿಕ್ಕಿನಲ್ಲಿ ಬಂದ ಮತ್ತೊಂದು ಪ್ಯಾರಾಚೂಟ್, ಲ್ಯಾಂಡ್ ಆಗ್ತಿದ್ದ ಉರ್ಸುಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಉರ್ಸುಲಾ ಸೇಫ್ ಆಗಿ ಲ್ಯಾಂಡ್ ಆಗದೇ ಬೀಚ್ ನಲ್ಲಿ ಬಿದ್ದಿದ್ದಾರೆ. ಕೂಡಲೇ ಉರ್ಸುಲಾರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ರೂ ಗಂಭೀರವಾಗಿ ಗಾಯಗೊಂಡಿದ್ದರಿಂದ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಪ್ಯಾರಾಚೂಟ್ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿಲ್ಲ ಅಂತ ಸ್ಥಳೀಯ ಪತ್ರಿಕೆಗಳು ಪ್ರಕಟಿಸಿವೆ.
Advertisement
ಪತ್ರಕರ್ತ ಜಾನ್ ಪೆರೆಜ್ ಎಂಬ ಮೆಕ್ಸಿಕೋದಲ್ಲಿ ರಜಾದಿನಗಳ ಪ್ರಾರಂಭಕ್ಕೂ ಮುನ್ನ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಬೀಚ್‍ಗಳಲ್ಲಿ ಪ್ಯಾರಾಚೂಟ್ ಬಳಸಿ ಹಾರಾಡುವುದು ಟ್ರೆಂಡಿಂಗ್ ಆಗಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಸಾಹಸಿಗಳು ಎಚ್ಚರಿಕೆಯಿಂದಿರಬೇಕು ಅಂತಾ ಜಾನ್ ಬರೆದುಕೊಂಡಿದ್ದಾರೆ.
Advertisement
https://youtu.be/pwyJbQO7TdU