ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಭೀಕರ ಅಪಘಾತ – ಓರ್ವ ಸಾವು

Public TV
1 Min Read
anekal accident

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ (Electronic City) ಫ್ಲೈಓವರ್ ಮೇಲೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಂಜುನಾಥ್ (52) ಮೃತ ದುರ್ದೈವಿ.

ಫ್ಲೈಓವರ್ (Flyover) ಮೇಲೆ ಕಾರೊಂದು ಬ್ರೇಕ್ ಡೌನ್ ಆಗಿ ನಿಂತಿತ್ತು. ಅದನ್ನು ಸರಿಪಡಿಸಲು ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಹೋಗಿದ್ದರು. ಸಿಬ್ಬಂದಿ ಸತೀಶ್ ಹಾಗೂ ರಾಜಣ್ಣ ಎಂಬುವವರು ಟೋಯಿಂಗ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಫ್ಲೈಓವರ್ ಮೇಲೆ ವೇಗವಾಗಿ ಬಂದ ಬುಲೆರೋ ಪಿಕಪ್‌ವೊಂದು ಕಾರು ದುರಸ್ತಿ ಮಾಡುತ್ತಿದ್ದವರಿಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: Udupi: ಕುಡಿದ ಮತ್ತಿನಲ್ಲಿ ಪತ್ನಿ ಕತ್ತು ಕೊಯ್ದ ಪತಿ – ಕತ್ತಿ ಹಿಡಿದು ನರ್ತಿಸುತ್ತಾ ವಿಕೃತಿ

ಬುಲೆರೋ ಬರುತ್ತಿದ್ದಂತೆ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಸತೀಶ್ ಪಕ್ಕಕ್ಕೆ ಹಾರಿ ತಪ್ಪಿಸಿಕೊಂಡಿದ್ದಾರೆ. ಇದರಿಂದ ರಾಜಣ್ಣ ಎಂಬುವರಿಗೆ ಬುಲೆರೋ ಡಿಕ್ಕಿ ಹೊಡೆದಿದೆ. ಇದೇ ವೇಳೆ ಬ್ರೇಕ್ ಡೌನ್ ಆಗಿದ್ದ ಕಾರಿನ ಫೋಟೋ ತೆಗೆಯುತ್ತಿದ್ದ ಮಂಜುನಾಥ್ ಅವರಿಗೂ ಬುಲೆರೋ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಪರಶುರಾಮ್‌ ಪತ್ನಿಗೆ ಸರ್ಕಾರಿ ಕೆಲಸ, ಪರಿಹಾರ ಕೊಡೋದಕ್ಕೆ ತೀರ್ಮಾನ – ಪರಮೇಶ್ವರ್‌

ಡಿಕ್ಕಿ ಹೊಡೆದ ರಭಸಕ್ಕೆ ಮಂಜುನಾಥ್ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಬುಲೆರೋ ಪಿಕಪ್ ಪಲ್ಟಿಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Wayanad Landslides | ಸೂಚಿಪ್ಪಾರ ಫಾಲ್ಸ್‌ನಲ್ಲಿ 11 ಶವ ಪತ್ತೆ – ಕಣ್ಣಿಗೆ ರಾಚುತ್ತಿದೆ ಹೃದಯವಿದ್ರಾವಕ ದೃಶ್ಯ

Share This Article