ಬೀದರ್‌ನಲ್ಲಿ ಭೀಕರ ಅಪಘಾತ – ಗುದ್ದಿದ ರಭಸಕ್ಕೆ ಕಾರಿನ ಮೇಲಿನಿಂದ ಬಿದ್ದ ಸವಾರ

Public TV
1 Min Read
bidar bike accident

ಬೀದರ್: ಬೈಕ್‌ಗೆ ಹಿಂಬದಿಯಿಂದ ಕಾರು ಗುದ್ದಿದ ಪರಿಣಾಮ ಬೈಕ್ ಸಿನಿಮೀಯ ರೀತಿಯಲ್ಲಿ ಮೇಲಕ್ಕೆ ಹಾರಿ ಭೀಕರ ಅಪಘಾತ ಸಂಭವಿಸಿದ ಘಟನೆ ಬೀದರ್ (Bidar) ಜಿಲ್ಲೆಯ ಚಿಟ್ಟಗುಪ್ಪ (Chittaguppa) ತಾಲೂಕಿನ ನಿರ್ಣಾ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 9ರಲ್ಲಿ ನಡೆದಿದೆ.

ಚಿಟ್ಟಗುಪ್ಪ ತಾಲೂಕಿನ ಉಡುಬಾಳು ಗ್ರಾಮದ ಸತೀಶ್ ಶಿವಕುಮಾರ್ ಗಂಭೀರ ಗಾಯಗೊಂಡಿದ್ದು, ಮನ್ನಾಏಖೇಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇದನ್ನೂ ಓದಿ: ಶಿವಾಜಿನಗರದ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರಿ ಹೆಸರಿಡಬೇಡಿ, ಓಲೈಕೆ ರಾಜಕಾರಣ ಬೇಕಿಲ್ಲ: ಯತ್ನಾಳ್

ಸೆ.4 ರಂದು ಈ ಅಪಘಾತ ಸಂಭವಿಸಿದೆ. ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯ ಕುರಿತು ಮನ್ನಾಏಖೇಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಹುಲ್‌ ಗಾಂಧಿ ಪಪ್ಪು ಅಲ್ಲ, ದೂರದೃಷ್ಟಿ ಹೊಂದಿರುವ ವ್ಯಕ್ತಿ: ಸ್ಯಾಮ್‌ ಪಿತ್ರೋಡಾ

Share This Article