AstrologyDina BhavishyaLatestMain Post

ದಿನ ಭವಿಷ್ಯ : 05-05-2022

ಪಂಚಾಂಗ: ಶ್ರೀ ಶುಭಕೃತ ನಾಮ ಸಂವತ್ಸರ, ಉತ್ತರಾಯಣ,
ವಸಂತಋತು, ವೈಶಾಖ ಮಾಸ,
ಶುಕ್ಲ ಪಕ್ಷ, ಚತುರ್ಥಿ/ಪಂಚಮಿ,
ಗುರುವಾರ, ಮೃಗಶಿರ ನಕ್ಷತ್ರ/ಆರಿದ್ರ ನಕ್ಷತ್ರ.
ರಾಹುಕಾಲ: 01:50 ರಿಂದ 03:29
ಗುಳಿಕಕಾಲ: 09:11 ರಿಂದ 10:46
ಯಮಗಂಡಕಾಲ: 06:02 ರಿಂದ 07:37

ಮೇಷ: ರಾಜಕೀಯ ವ್ಯಕ್ತಿಗಳಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅಪಘಾತಗಳು, ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕವಾಗಿ ನಷ್ಟ ಮತ್ತು ಮೋಸ.

ವೃಷಭ: ಅಹಂಭಾವ ಮತ್ತು ಕೋಪದಿಂದ ಸಮಸ್ಯೆ, ಧನ ನಷ್ಟ, ಸಾಲ ಮಾಡುವ ಸಂದರ್ಭ, ತಂದೆ ಮಕ್ಕಳಲ್ಲಿ ಮನಸ್ತಾಪ ಸ್ಥಿರಾಸ್ತಿ ಸಮಸ್ಯೆ.

ಮಿಥುನ: ಉದ್ಯೋಗ ಲಾಭ, ದೂರ ಪ್ರಯಾಣ, ಅಧಿಕ ಉತ್ಸಾಹ, ಕಾರ್ಮಿಕರಿಂದ ತೊಂದರೆ, ಉದ್ಯೋಗ ಒತ್ತಡ, ಸಾಲ ಮಾಡುವ ಸನ್ನಿವೇಶ.

ಕಟಕ: ಮಕ್ಕಳಿಂದ ಧನಾಗಮನ, ಉದ್ಯೋಗ ನಷ್ಟ, ಪ್ರೀತಿ-ಪ್ರೇಮದಲ್ಲಿ ವಿರೋಧ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಬದಲಾವಣೆ ಯೋಚನೆ, ಕುಟುಂಬಸ್ಥರಿಂದ ನೋವು.

ಸಿಂಹ: ಅವಕಾಶ ವಂಚಿತರಾಗುವಿರಿ, ತಂದೆಯಿಂದ ನಷ್ಟ, ಉದ್ಯೋಗ ಚಿಂತೆ, ದೂರ ಪ್ರದೇಶಕ್ಕೆ ತೆರಳುವ ಆಸೆ, ಪ್ರಯಾಣದಲ್ಲಿ ಸಮಸ್ಯೆ, ದಾಯಾದಿ ಕಲಹ, ಆರೋಗ್ಯದಲ್ಲಿ ವ್ಯತ್ಯಾಸ.

ಕನ್ಯಾ: ಮಿತ್ರರೊಂದಿಗೆ ಮನಸ್ತಾಪ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ, ಅನಿರೀಕ್ಷಿತ ಪ್ರಯಾಣ, ಕೋರ್ಟ್ ಕೇಸ್ ಚಿಂತೆ, ಭೂ ವ್ಯವಹಾರಗಳಿಂದ ಸಮಸ್ಯೆ, ದಾಂಪತ್ಯ ಕಲಹ.

ತುಲಾ: ಆತ್ಮ ಸಂಕಟ, ಆರೋಗ್ಯದಲ್ಲಿ ಏರುಪೇರು, ಅಪವಾದ ಮತ್ತು ಅಪನಿಂದನೆ, ಪಾಲುದಾರಿಕೆಯಲ್ಲಿ ನಷ್ಟ, ಅನಿರೀಕ್ಷಿತ ಧನಾಗಮನ.

ವೃಶ್ಚಿಕ: ಮಾನಾಪಮಾನ, ಪ್ರೀತಿ-ಪ್ರೇಮದಲ್ಲಿ ತೊಂದರೆ, ಭಾವನಾತ್ಮಕ ಯೋಚನೆಯಿಂದ ನೋವು, ಮಕ್ಕಳಲ್ಲಿ ಮಂದತ್ವ ಮತ್ತು ಆಲಸ್ಯ, ಭೂಮಿ ಮತ್ತು ವಾಹನದ ಮೇಲೆ ಸಾಲ, ಆರೋಗ್ಯ ಸಮಸ್ಯೆ ಕಾಡುವುದು.

ಧನಸ್ಸು: ಮಕ್ಕಳ ಆರೋಗ್ಯದ ವ್ಯತ್ಯಾಸ, ಉದ್ಯೋಗ ಅನುಕೂಲ, ಬಂಧು-ಬಾAಧವರು ದೂರ, ದುಃಸ್ವಪ್ನಗಳು ಒತ್ತಡಗಳಿಂದ ನಿದ್ರಾಭಂಗ, ಶತ್ರು ದಮನ

ಮಕರ: ಪ್ರೀತಿ-ಪ್ರೇಮದಲ್ಲಿ ಸಂಶಯ, ಬಾಲಗ್ರಹ ದೋಷ, ಮಕ್ಕಳಲ್ಲಿ ಮೊಂಡತನ ಮತ್ತು ಕಲಹ, ವಿದ್ಯಾಭ್ಯಾಸದಲ್ಲಿ ತೊಂದರೆ, ಹವಾಮಾನ ವ್ಯತ್ಯಾಸದಿಂದ ಅನಾರೋಗ್ಯ, ದಾಯಾದಿಗಳಿಂದ ತೊಂದರೆ, ಪ್ರಯಾಣದಲ್ಲಿ ವಿಘ್ನ

ಕುಂಭ: ಭೂ ವ್ಯವಹಾರಗಳಿಂದ ತೊಂದರೆ, ಮಾತಿನಿಂದ ಸಮಸ್ಯೆ, ಕುಟುಂಬದಲ್ಲಿ ಅಂತಃಕಲಹಗಳು, ಸ್ತ್ರೀಯರಿಂದ ತೊಂದರೆ, ವಾಹನಗಳಿಂದ ಸಮಸ್ಯೆ, ಯಂತ್ರೋಪಕರಣಗಳಿಂದ ಅವಗಢ, ವಿದ್ಯಾಭ್ಯಾಸ ಒತ್ತಡಗಳು

ಮೀನ: ಆರ್ಥಿಕ ಚೇತರಿಕೆ, ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಸಹಕಾರ, ನೆರೆಹೊರೆಯವರೊಂದಿಗೆ ಕಿರಿಕಿರಿ, ಬಂಧುಗಳ ಮನಸ್ತಾಪ, ಭಂಡ ಧೈರ್ಯ ಮತ್ತು ಆತ್ಮವಿಶ್ವಾಸ

Leave a Reply

Your email address will not be published.

Back to top button