ಮುಂಬೈ: ಕೊರೊನಾ ಲಸಿಕೆ ಪಡೆಯಲು ನಿರಾಕರಿಸಿ ಆಸ್ಟ್ರೇಲಿಯಾ ಓಪನ್ ಗ್ರ್ಯಾನ್‍ಸ್ಲಾಂ ಆಡುವ ಅವಕಾಶ ಕಳೆದುಕೊಂಡಿದ್ದ ವಿಶ್ವ ನಂಬರ್ 1 ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್‍ಗೆ ಲಸಿಕೆ ಬಗ್ಗೆ ಸೀರಂ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಆದಾರ್ ಪೂನಾವಾಲ ವಿಶೇಷ ಸಂದೇಶ ರವಾನಿಸಿದ್ದಾರೆ.
Advertisement
ಕೊರೊನಾ ಲಸಿಕೆ ಪಡೆಯಲು ಬಯಸದ ಜೊಕೊವಿಕ್ ಫ್ರೆಂಚ್ ಓಪನ್, ವಿಂಬಲ್ಡನ್ ಸೇರಿದಂತೆ ಪ್ರತಿಷ್ಠಿತ ಟೆನಿಸ್ ಟೂರ್ನಿಗಳಿಂದ ಹೊರಗುಳಿಯುತ್ತಿದ್ದಾರೆ. ಈವರೆಗೆ ಲಸಿಕೆ ಪಡೆಯಲು ಒಪ್ಪದ ಜೊಕೊವಿಕ್‍ಗೆ ಆದಾರ್ ಪೂನಾವಾಲ ಟ್ವಿಟ್ಟರ್‌ನಲ್ಲಿ ತಾವು ಟೆನಿಸ್ ಆಡುವ ವೀಡಿಯೋ ಮೂಲಕ ವಿಶೇಷ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ನೊವಾಕ್ ಜೊಕೊವಿಕ್ ವೀಸಾ 2ನೇ ಬಾರಿ ರದ್ದು – 3 ವರ್ಷ ಆಸ್ಟ್ರೇಲಿಯಾಗೆ ಪ್ರವೇಶವಿಲ್ಲ
Advertisement
Advertisement
ಲಸಿಕೆ ಪಡೆಯದೆ ಇರುವ ನಿಮ್ಮ ವೈಯಕ್ತಿಕ ವಿಚಾರವನ್ನು ನಾನು ಗೌರವಿಸುತ್ತೇನೆ. ನಿಮ್ಮ ಆಟವನ್ನು ನಾನು ತುಂಬಾ ಇಷ್ಟ ಪಡುತ್ತೇನೆ. ನೀವು ಮನಸ್ಸು ಬದಲಾಯಿಸುವಿರಿ ಎಂಬ ನಂಬಿಕೆ ಇದೆ. ಈ ಮೂಲಕ ಇನ್ನೊಂದು ಗ್ರ್ಯಾನ್‍ಸ್ಲಾಂ ಪ್ರಶಸ್ತಿ ಗೆಲ್ಲುವ ಅವಕಾಶ ನಿಮ್ಮದಾಗಬಹುದು ಎಂದಿದ್ದಾರೆ. ಇದನ್ನೂ ಓದಿ: ಡೆಲ್ಲಿ To ಲಂಡನ್ ಬಸ್ ಟೂರ್ – 70 ದಿನಗಳಲ್ಲಿ 18 ದೇಶ ಸುತ್ತುವ ಅವಕಾಶ
Advertisement
I respect your personal views on not getting vaccinated @DjokerNole and love watching you play, but I hope you change your mind. In the meantime, the rest of us now might stand a chance at a Grand Slam.☺️ pic.twitter.com/89kW3MWdVt
— Adar Poonawalla (@adarpoonawalla) February 17, 2022
ಜೊಕೊವಿಕ್ ಈಗಾಗಲೇ 20 ಗ್ರ್ಯಾನ್‍ಸ್ಲಾಂ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ಓಪನ್ ಗೆಲ್ಲುವ ಅವಕಾಶ ಜೊಕೊವಿಕ್‍ಗೆ ಇತ್ತು ಆದರೆ ಲಸಿಕೆ ಪಡೆಯದ ಕಾರಣ ಆಸ್ಟ್ರೇಲಿಯಾ ವೀಸಾ ರದ್ದಾಗಿತ್ತು. ಇವರ ಅನುಪಸ್ಥಿತಿಯಲ್ಲಿ ರಫೇಲ್ ನಡಾಲ್ 21ನೇ ಗ್ರ್ಯಾನ್‍ಸ್ಲಾಂ ಪ್ರಶಸ್ತಿ ಜಯಿಸಿ ದಾಖಲೆ ನಿರ್ಮಿಸಿದ್ದಾರೆ.