ಬರ್ಮಿಂಗ್‍ಹ್ಯಾಮ್: ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಭಾರತ 3ನೇ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ಭಾರತದ ವೈಟ್‍ಲಿಫ್ಟರ್ ಅಚಿಂತಾ ಶೆಯುಲಿ ಪುರುಷರ 73 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.
143 ಕೆಜಿ ಭಾರ ಎತ್ತುವ ಮೂಲಕ ಅತ್ಯಧಿಕ ವೈಟ್‍ಲಿಫ್ಟ್ ಮಾಡಿದ ಅಚಿಂತಾ ಶೆಯುಲಿ ಕಾಮನ್‍ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ. ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ 170 ಕೆಜಿ ಎತ್ತುವ ಮೂಲಕ ಒಟ್ಟು 313 ಕೆಜಿ ವೈಟ್‍ಲಿಫ್ಟ್ ಮಾಡಿ ಭಾರತಕ್ಕೆ ಚಿನ್ನದ ಕಿರೀಟ ತೊಡಿಸಿದರು.
Advertisement
Advertisement
ಅಚಿಂತಾ ಭಾರತೀಯರ ನಿರೀಕ್ಷೆಗಳನ್ನು ಉಳಿಸಿಕೊಂಡಿದ್ದು ಮಾತ್ರವಲ್ಲದೇ ಹೊಸ ದಾಖಲೆ ಬರೆದಿದ್ದಾರೆ. ಅಚಿಂತಾ ಚಿನ್ನದ ಪದಕ ಸಾಧನೆಯೊಂದಿಗೆ ಭಾರತ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ 6 ಪದಕ ಬಾಚಿಕೊಂಡಿದೆ. ಇದನ್ನೂ ಓದಿ: ನಾಡದೇವಿ ಚಾಮುಂಡೇಶ್ವರಿ ಹಬ್ಬಕ್ಕೆ ದಿನಗಣನೆ – ಮೈಸೂರು ದಸರಾಕ್ಕೆ ಬಹಿಷ್ಕಾರ ಹಾಕಿದ ಮಾವುತ ಕಾವಾಡಿಗಳು
Advertisement
Advertisement
ವಿಷಯ ತಿಳಿದ ತಕ್ಷಣ ಪ್ರಧಾನಿ ನರೇಂದ್ರ ಮೋದಿ ಅವರು ಅಚಿಂತಾ ಶೆಯುಲಿ ಅವರಿಗೆ ಶುಭಾಕೋರಿದ್ದಾರೆ. ಟ್ವೀಟ್ ಮಾಡಿದ ಅವರು, ನಮ್ಮ ತಂಡವು ಕಾಮನ್‍ವೆಲ್ತ್ ಕ್ರೀಡಾಕೂಟಕ್ಕೆ ಹೊರಡುವ ಮೊದಲು, ನಾನು ಅಚಿಂತಾ ಶೆಯುಲಿ ಅವರೊಂದಿಗೆ ಮಾತನಾಡಿದ್ದೆ. ಅವರ ತಾಯಿ ಮತ್ತು ಸಹೋದರರಿಂದ ಅವರು ಪಡೆದ ಬೆಂಬಲದ ಬಗ್ಗೆ ನಾವು ಚರ್ಚಿಸಿದ್ದೇವೆ. ಪದಕವನ್ನು ಗೆದ್ದ ನಂತರ ಸಿನಿಮಾ ನೋಡಲು ಅವರಿಗೆ ಸಮಯ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಬರದುಕೊಂಡಿದ್ದಾರೆ.
Before our contingent left for the Commonwealth Games, I had interacted with Achinta Sheuli. We had discussed the support he received from his mother and brother. I also hope he gets time to watch a film now that a medal has been won. pic.twitter.com/4g6BPrSvON
— Narendra Modi (@narendramodi) August 1, 2022
ಮಹಿಳಾ ವೈಟ್‍ಲಿಫ್ಟಿಂಗ್ ವಿಭಾಗದಲ್ಲಿ ಮೀರಾಬಾಯಿ ಚಾನು, ಪುರುಷರ 67 ಕೆಜಿ ವಿಭಾಗದಲ್ಲಿ ಜೆರೆಮಿ ಲಾಲ್ರಿನ್ನುಂಗಾ ಬಳಿಕ ಅಚಿಂತಾ ಶುಯೆಲಿ 3ನೇ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಸದ್ಯ ಪದಕ ಪಟ್ಟಿಯಲ್ಲಿ ಭಾರತ 6ನೇ ಸ್ಥಾನದಲ್ಲಿದೆ. 3 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕದ ಮೂಲಕ ಒಟ್ಟು 6 ಪದಕ ಗೆದ್ದುಕೊಂಡಿದೆ. ಮೊದಲ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 22 ಚಿನ್ನ, 13 ಬೆಳ್ಳಿ ಹಾಗೂ 17 ಕಂಚಿನ ಪದಕದ ಜೊತೆ ಒಟ್ಟು 52 ಪದಕಗಳನ್ನು ಗೆದ್ದುಕೊಂಡಿದೆ. ಇದನ್ನೂ ಓದಿ: ನಾಲ್ಕು ದಿನ ಗಾಳಿ, ಮಳೆಗೆ ಬೆಟ್ಟದ ಪೊದೆಯಲ್ಲಿ ಸಿಲುಕಿದ ವೃದ್ಧೆ ರಕ್ಷಣೆ