ಹೈದರಾಬಾದ್: ಮರ್ಯಾದಾ ಹತ್ಯೆಗೆ ಬಲಿಯಾದ ಮೃತ ಪ್ರಣಯ್, ಪತ್ನಿ ಅಮೃತ ಅಪ್ಲೋಡ್ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ.
ಸೆಪ್ಟಂಬರ್ 15 ರಂದು ಶನಿವಾರ ಪ್ರಣಯ್ ನನ್ನು ಗರ್ಭಿಣಿ ಪತ್ನಿಯ ಮುಂದೇ ಕೊಲೆ ಮಾಡಲಾಗಿತ್ತು. ಈ ಬಗ್ಗೆ ವ್ಯಾಪಕವಾದ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಈಗ ಇವರಿಬ್ಬರು ಮದುವೆಯಾದ ನಂತರ ಒಟ್ಟಾಗಿ ತೆಗಿಸಿದ್ದ ಫೋಟೋ ಮತ್ತು ವಿಡಿಯೋವನ್ನು ಒಂದು ತಿಂಗಳ ಹಿಂದೆಯಷ್ಟೆ ಅಮೃತ ತಮ್ಮ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದರು. ಈಗ ಆ ವಿಡಿಯೋ ವೈರಲ್ ಆಗಿದೆ.
Advertisement
ವಿಡಿಯೋದಲ್ಲಿ ಪ್ರಣಯ್ ಮತ್ತು ಅಮೃತ ಇಬ್ಬರು ಮುದ್ದಾಗಿ ಕಾಣಿಸುತ್ತಿದ್ದು, ಸುಮಾರು 2 ಲಕ್ಷಕ್ಕಿಂತ ಅಧಿಕವಾಗಿ ವ್ಯೂ ಕಂಡಿದೆ. ಜೊತೆಗೆ 7 ಸಾವಿರ ಮಂದಿ ಲೈಕ್ಸ್ ಕೂಡ ಮಾಡಿದ್ದಾರೆ. ಅಷ್ಟೇ ಅಲ್ಲದೇ ಈ ವಿಡಿಯೋವನ್ನು 1.5 ಸಾವಿರ ಜನರು ಶೇರ್ ಕೂಡ ಮಾಡಿದ್ದಾರೆ. ಅನೇಕ ಮಂದಿ ಇಬ್ಬರ ಜೋಡಿ ಚೆನ್ನಾಗಿದೆ ಎಂದು ಶುಭಾ ಕೋರಿದ್ದಾರೆ.
Advertisement
Advertisement
ಪ್ರಣಯ್ ಕೊಲೆ
ಪ್ರಣಯ್ ಮತ್ತು ಅಮೃತ ಹೈಸ್ಕೂಲ್ ನಲ್ಲಿಯೇ ಪ್ರೇಮಪಾಶಕ್ಕೆ ಸಿಲುಕಿದ್ದರು. ಮುಂದೆ ಕಾಲೇಜಿನಲ್ಲಿಯೂ ಇಬ್ಬರ ಪ್ರೇಮ ಮುಂದುವರಿದಿತ್ತು. ಆದ್ರೆ ಎರಡೂ ಕುಟುಂಬಗಳ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದವು. ಇಬ್ಬರ ಜಾತಿ ಬೇರೆಯಾಗಿದ್ದರಿಂದ ಅಮೃತಾ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದ್ರೂ ಯುವ ಜೋಡಿ ಮನೆಯವರ ವಿರೋಧದ ನಡುವೆಯೂ ಮದುವೆ ಆಗಿದ್ದರು.
Advertisement
ಸೆಪ್ಟಂಬರ್ 15 ಶನಿವಾರ ಪ್ರಣಯ್ ಮತ್ತು ಅಮೃತಾ ಆಸ್ಪತ್ರೆ ಮುಂದೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಮಚ್ಚಿನಿಂದ ಪ್ರಣಯ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದನು. ಆದರೆ ಪ್ರಣಯ್ ಕೊಲೆಗೆ ಆತ ಮಾವ ಮಾರುತಿ ರಾವ್ ಬರೋಬ್ಬರಿ ಒಂದು ಕೋಟಿ ಹಣವನ್ನು ಹಂತಕರಿಗೆ ನೀಡಿದ್ದನು ಎಂದು ತನಿಖೆ ವೇಳೆ ತಿಳಿದಿತ್ತು.
ಅಮೃತ ಹೇಳಿದ್ದೇನು?
ಮನೆಯ ವಿರೋಧದ ನಡುವೆ ನಾವು ಮದುವೆಯಾಗಿ ಚೆನ್ನಾಗಿ ಜೀವನ ನಡೆಸುತ್ತಿದ್ದೇವು. ನಾನು ಐದು ತಿಂಗಳ ಗರ್ಭಿಣಿ ಎಂದು ತಿಳಿದು ಪೋಷಕರು ಪತಿಯನ್ನು ಕೊಲೆ ಮಾಡಿಸಿ ಗರ್ಭಪಾತ ಮಾಡಿಸುವ ಪ್ಲಾನ್ ಮಾಡಿಕೊಂಡಿದ್ದರು. ನನ್ನ ತಂದೆ ಓರ್ವ ಉದ್ಯಮಿಯಾಗಿದ್ದು, ಹಲವು ಪ್ರಭಾವಿ ರಾಜಕಾರಣಿಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ತಮ್ಮ ಪ್ರಭಾವ ಬೆಳೆಸಿ ಪ್ರಣಯನನ್ನು ಬಿಟ್ಟು ಬೆದರಿಕೆ ಹಾಕುತ್ತಿದ್ದರು. ಪ್ರಣಯ್ ಕೊಲೆಯ ಮುನ್ನ ಸಹ ನನಗೆ ಗರ್ಭಪಾತ ಮಾಡಿಸಿಕೊ ಎಂದು ಜೀವ ಬೆದರಿಕೆ ಹಾಕಿದ್ದರು ಎಂದು ಅಮೃತ ಪೊಲೀಸರಿಗೆ ತಿಳಿಸಿದ್ದರು.
ನಾನು ನನ್ನ ಪತಿಯ ಆಸೆಯನ್ನು ನೆರವೇರಿಸಲು ಬದುಕಿದ್ದೇನೆ ಎಂದು ಅಮೃತ ಹೇಳಿದ್ದರು. ಪತಿ ಪ್ರಣಯ್ ತಮ್ಮ ಮಗುವನ್ನು ಒಬ್ಬ ಜಾತಿ, ಧರ್ಮವನ್ನು ಮೀರಿ ಬೆಳಸಬೇಕು ಅಂತ ಇಷ್ಟ ಪಟ್ಟಿದ್ದದ್ದರು. ಅದರಂತೆ ನನ್ನ ಮಗುವನ್ನು ಬೆಳೆಸುತ್ತೇನೆ ಎಂದು ನೋವಿನಲ್ಲೂ ಹೇಳಿಕೊಂಡಿದ್ದರು.
https://www.facebook.com/amrutha.pranay.3/videos/vb.100025915881312/204756723731522/?type=2&video_source=user_video_tab
ಪ್ರಣಯ್ ಕೊಲೆ ಬಳಿಕ ಮರ್ಯದಾ ಹತ್ಯೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಫೇಸ್ ಬುಕ್‍ನಲ್ಲಿ Justice For Pranay ಎಂಬ ಪೇಜ್ ಕ್ರಿಯೇಟ್ ಮಾಡಲಾಗಿದ್ದು, ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದರು. ಪ್ರಣಯ್ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗವಹಿಸಿ `ಅಮರ್ ರಹೇ ಪ್ರಣಯ್’ ಎಂದು ಘೋಷಣೆ ಕೂಗಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.facebook.com/amrutha.pranay.3/videos/vb.100025915881312/214516019422259/?type=2&video_source=user_video_tab