ಅನಂತ್ ನಾಗ್ ಗೆ ಗೌರವ ಡಾಕ್ಟರೇಟ್ ಪ್ರದಾನ: ಕುಟುಂಬದ ಒತ್ತಾಯಕ್ಕೆ ಸ್ವೀಕರಿಸಿದೆ

Public TV
1 Min Read
FotoJet 40

ಕನ್ನಡ ಸಿನಿಮಾ ರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಬೆಂಗಳೂರಿನ ಭಾರತೀಯ ವಿದ್ಯಾ ಭವನದ ಬಿಂಚಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವರು ಮತ್ತು ಸಮಕುಲಾಧಿಪತಿಗಳಾದ ಡಾ.ಸಿ.ಎನ್ ಅಶ್ವತ್ಥನಾರಾಯಣ್ (Ashwath Narayan) ಅವರು ಗೌರವ ಪದವಿಯನ್ನು ಪ್ರದಾನ ಮಾಡಿದರು.

Ananth nag 2

ಗೌರವ ಡಾಕ್ಟರೇಟ್ (Honorary Doctorate) ಪದವಿ ಪಡೆದು ಮಾತನಾಡಿದ ಅನಂತ್ ನಾಗ್ (Ananth Nag), ‘ನನಗೆ ಪ್ರಶಸ್ತಿಗಳ ಬಗ್ಗೆ ಆಸೆಯಿಲ್ಲ. ನನ್ನ ಮಗಳು ಮತ್ತು ಹೆಂಡತಿ ಒತ್ತಾಯ ಮಾಡಿದರು ಅನ್ನುವ ಕಾರಣಕ್ಕಾಗಿ ಈ ಪದವಿಯನ್ನು ಒಪ್ಪಿಕೊಂಡೆ. ಇಂಥದ್ದೊಂದು ಗೌರವ ಸಿಗುವುದಕ್ಕೆ ಕಾರಣ ಕನ್ನಡ ಸಿನಿಮಾ ರಂಗ. ಇಂತಹ ರಂಗವನ್ನು ಬೆಳೆಸಿದವರು ಡಾ.ರಾಜ್ ಕುಮಾರ್ ಅವರು’ ಎಂದು ನೆನಪಿಸಿಕೊಂಡರು.

Ananth nag 1

ತಮ್ಮ ಬಾಲ್ಯ ಮತ್ತು ಶಾಲಾ ದಿನಗಳನ್ನೂ ನೆನಪಿಸಿಕೊಂಡ ಅನಂತ್ ನಾಗ್, ‘8ನೇ ತರಗತಿವರೆಗೂ ನಾನು ಕನ್ನಡ ಮಾಧ್ಯಮದಲ್ಲೇ ಓದಿದವನು. ಆನಂತರ ಮುಂಬೈಗೆ ಹೋಗಿ ಆಂಗ್ಲ ಮಾಧ್ಯಮ ಸೇರಿಕೊಂಡೆ. ಇಂಗ್ಲಿಷ್ ಮಾಧ್ಯಮದ ಕಾರಣಕ್ಕಾಗಿ ಓದಿನಲ್ಲಿ ಹಿಂದೆ ಬಿದ್ದೆ. ಹೊನ್ನಾವರದಲ್ಲಿ ಓದುವಾಗ ನನ್ನದು ಕನ್ನಡ ಮಾಧ್ಯಮವಾಗಿತ್ತು ಎಂದು ಮಾತನಾಡಿದರು. ಅಲ್ಲದೇ ಮುಂಬೈ ದಿನಗಳಲ್ಲಿ ತಾವು ಕಂಡಂತಹ ಸಿನಿಮಾ ರಂಗದ ಬಗ್ಗೆಯೂ ಮಾತನಾಡಿದರು.

Ananth nag 2

ಈ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಸದಾಶಿವ ಶೆಣೈ (Sadashiva Shenai), ಭಾರತೀಯ ವಿದ್ಯಾಭವನದ ನಿರ್ದೇಶಕ ಹೆಚ್.ಎನ್. ಸುರೇಶ್ ಭಾಗಿಯಾಗಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿ ನಿರಂಜನ ವಹಿಸಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *